ಸಾಪ್ತಾಹಿಕಪ್ರಭ

ಸತ್ಯಾಂಶವನ್ನು ಮೊದಲು ಸಾಬೀತುಪಡಿಸಿ

ಅಮರನಾರಾಯಣಸ್ವಾಮಿ, ಬೆಳ್ಳೂಟಿ ಗ್ರಾಮ, ಶಿಡ್ಲಘಟ್ಟ ತಾ.
ಭಾರತೀಯ ಸಾಕ್ಷ್ಯ ಕಾಯ್ದೆಯಂತೆ ದಸ್ತಾವೇಜು ಸಾಕ್ಷ್ಯದಂತೆ ಧ್ವನಿಮುದ್ರಿತ ಸಾಕ್ಷ್ಯ ಅಂಗೀಕಾರಾರ್ಹವೆಂದು ಸುಪ್ರಿಮ್ ಕೋರ್ಟ್ 1993ರಲ್ಲಿ ತೀರ್ಪು ನೀಡಿದೆ.
ನನ್ನ ವಿರುದ್ಧ ಒಂದು ಷಡ್ಯಂತ್ರ ರೂಪಿಸಿ ಸುಳ್ಳು ಮೊಕದ್ದಮೆ ಹೂಡಲಾಗಿದೆ. ಇದಕ್ಕೆ ಬಲವಾದ ಸಾಕ್ಷಿ ಇಲ್ಲದಿದ್ದರೂ ಈ ಷಡ್ಯಂತ್ರದಲ್ಲಿ ಭಾಗಿಯಾದವರೊಬ್ಬರು ಮೊಬೈಲ್ ಫೋನಿನಲ್ಲಿ ಮಾತನಾಡುವಾಗ ಈ ಷಡ್ಯಂತ್ರಕ್ಕೆ ಕಾರಣ ತಿಳಿಸಿರುತ್ತಾರೆ. ಈ ಧ್ವನಿಮುದ್ರಣ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ನಾನು ದೋಷಮುಕ್ತನಾಗುತ್ತೇನೆ. ಇದನ್ನು ಮಾಡುವ ರೀತಿ ಏನು?
- ಮೊದಲು ನ್ಯಾಯಾಲಯಕ್ಕೆ ಅರ್ಜಿ ಹಾಕಿ. ಮೇಲ್ನೋಟಕ್ಕೆ ಇದು ನಿಜ ಎಂದು ಸಾಬೀತುಪಡಿಸಿ. ನಂತರ ಕೋರ್ಟ್ ನಿಮ್ಮ ಮೊಬೈಲನ್ನು ಸಿಒಡಿಯ ಸೈಬರ್ ಕ್ರೈಂ ವಿಭಾಗಕ್ಕೆ ತನಿಖೆಗಾಗಿ ಕಳಿಸಿ, ಈ ಸಂವಾದದ ನೈಜತೆಯ ಬಗ್ಗೆ ವರದಿ ತರಿಸಿಕೊಳ್ಳಲಿ. ನೀವು ಹೇಳಿದ್ದು ಸಾಬೀತಾದರೆ ನಿಮಗೆ ಸಹಾಯವಾಗಬಹುದು.

ಯಾವುದೇ ಬಾಧಕವಿಲ್ಲ
ಹೆಸರು, ಊರು ಬೇಡ
ಸರ್ಕಾರಿ ನೌಕರನಿಗೆ ಸೇವೆಯಿಂದ ಅಮಾನತ್ತಾದರೆ ಅದು ಶಿಕ್ಷೆ ಎನಿಸಿಕೊಳ್ಳುತ್ತದೆಯೇ? ಇದರಿಂದ ಬಡ್ತಿ ಹಾಗೂ 25/30 ವರ್ಷದ ಸೇವೆಗೆ ಸಿಗುವ ವೇತನ, ಮುಂಬಡ್ತಿಗೆ ಬಾಧಕವಾಗುತ್ತದೆಯೇ?
- ಕೆ.ಸಿ.ಎಸ್. ಶಿಸ್ತು ನಿಯಮಗಳಂತೆ ಅಮಾನತ್ತು ಶಿಕ್ಷೆಯಾಗುವುದಿಲ್ಲ. ಬೇರೆ ಶಿಕ್ಷೆ ಕೊಟ್ಟರೆ ಮಾತ್ರ ಅಮಾನತ್ತಿನ ಅವಧಿಯನ್ನು ಹೇಗೆ ಪರಿಗಣಿಸಬೇಕೆಂದು ಶಿಸ್ತು ಪ್ರಾಧಿಕಾರ ನಿರ್ಧರಿಸಬೇಕಾಗುತ್ತದೆ. ಹಾಗಿಲ್ಲದಿದ್ದರೆ ಬರಿಯ ಅಮಾನತ್ತು ಯಾವುದೇ ಬಡ್ತಿಗೆ ಬಾಧಕವಾಗುವುದಿಲ್ಲ.

ಇದು ಶಿಕ್ಷಾರ್ಹ ಅಪರಾಧ
ಹನುಮಂತರಾಯಪ್ಪ, ಮಾಗಡಿ ರಸ್ತೆ, ಬೆಂಗಳೂರು
ಒಬ್ಬ ಸರ್ಕಾರಿ ನೌಕರ ಮೊದಲನೆ ಹೆಂಡತಿ ಜೀವಂತವಾಗಿರುವಾಗ ಮತ್ತೊಬ್ಬಳನ್ನು ಮದುವೆಯಾಗಬಹುದೇ? ಹಾಗಿದ್ದರೆ ಅವನ ಸೇವಾ ಪುಸ್ತಕದಲ್ಲಿ ಯಾರ ಹೆಸರು ನೋಂದಾಯಿಸುತ್ತಾರೆ?
- ಹಿಂದೂವಾಗಿದ್ದರೆ ಆತ ವೈಯಕ್ತಿಕ ಕಾನೂನಿನಂತೆಯೂ ಒಬ್ಬ ಹೆಂಡತಿ ಜೀವಂತವಿರುವಾಗ ಎರಡನೇ ಮದುವೆಯಾಗುವಂತಿಲ್ಲ. ಅಲ್ಲದೆ, ಕೆ.ಸಿ.ಎಸ್. ನಡತೆ ನಿಯಮ 28ರಂತೆ ಆತ ಸರ್ಕಾರದ ಅನುಮತಿ ಪಡೆದೂ ಎರಡನೇ ಮದುವೆಯಾಗುವಂತಿಲ್ಲ. ಕಾರಣ ಆತನ ಸೇವಾಪುಸ್ತಕದಲ್ಲಿ ಎರಡನೆ ಹೆಂಡತಿಯ ಹೆಸರು ನಮೂದಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಅಲ್ಲದೆ ಜಿ.ಭಾ. ದಂಡಸಂಹಿತೆಯ ಕಲಂ 494ರಂತೆಯೂ ಇದು ಶಿಕ್ಷಾರ್ಹ ಅಪರಾಧ.

ಕೋರ್ಟ್‌ಗೆ ದೂರು ಸಲ್ಲಿಸಿ
ಪ್ರಭಾ, ಮಡಿಕೇರಿ
2009ರಲ್ಲಿ ಜಾಹೀರಾತು ನೋಡಿಕೊಂಡು ಕಂಪನಿಯೊಂದರಲ್ಲಿ ಹಣ ಕಟ್ಟಿ ರು. 50 ಸಾವಿರ ಕಳೆದುಕೊಂಡಿದ್ದೇನೆ. 2010ರಲ್ಲಿ ದಿಲ್ಲಿಯ ಪೊಲೀಸ್ ಠಾಣೆಯೊಂದರಲ್ಲಿ ದೂರೊಂದನ್ನು ನೀಡಿದ್ದೆ. ಈವರೆಗೆ ಏನೂ ಕ್ರಮ ಕೈಗೊಂಡಿಲ್ಲ. ಕಂಪನಿಗೆ ಫೋನ್ ಮಾಡಿದರೆ ನಾವು ಈಗ ಅಲ್ಲಿ ಇಲ್ಲ ಎಂದು ಜವಾಬು ಕೊಡುತ್ತಾರೆ. ಪರಿಹಾರವೇನು?
- ನೀವು ಹಣವನ್ನು ನಿಮ್ಮ ಜಿಲ್ಲೆಯಿಂದ ಪಾವತಿಸಿದ್ದರೆ ನಿಮ್ಮ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಪೊಲೀಸರಿಗೆ ತನಿಖೆಗೆ ಆದೇಶಿಸುವಂತೆ ಕೋರಬಹುದು. ಒಂದು ವೇಳೆ ದಿಲ್ಲಿಯಲ್ಲೇ ಹಣ ಕಟ್ಟಿದ್ದರೆ ಸಂಬಂಧಿಸಿದ ಕೋರ್ಟ್‌ಗೆ ದೂರು ಸಲ್ಲಿಸಬಹುದು.

ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿ
ಹೆಸರು, ವಿಳಾಸ ಬೇಡ
ಒಂದು ಗೃಹ ನಿರ್ಮಾಣ ಸಂಘದ ಸ್ಥಾಪಕ ಸದಸ್ಯನಾಗಿದ್ದು ನನ್ನಿಂದ ಸೈಟಿಗೆ ಹಣ ಪಡೆದರೂ ಸೈಟು ಕೊಟ್ಟಿರಲಿಲ್ಲ. ನಾನು ಟ್ರಿಬ್ಯುನಲ್‌ಗೆ ಮನವಿ ಸಲ್ಲಿಸಿದಾಗ ಅದು ನನಗೆ ಸೈಟು ಮಂಜೂರು ಮಾಡಬೇಕೆಂದು ಆದೇಶಿಸಿತು. ನಂತರ ಒಂದು ಕಟ್ಟಡವಿರುವ ಸೈಟನ್ನು ನನಗೆ ಮಂಜೂರು ಮಾಡಿ, ನಂತರ ಕಟ್ಟಡವನ್ನು ಕೆಡವಿಹಾಕಿತು. ಆದರೆ ಆ ಜಾಗವನ್ನು ನನಗೆ ಕೊಟ್ಟಿರುವುದಿಲ್ಲ. ಬೇಕೆಂದೇ ಅಲ್ಲಿದ್ದ ಕೆಲ ವರ್ತಕರಿಂದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿಸಿದ್ದಾರೆ. ಇದಕ್ಕೆ ಪರಿಹಾರವೇನು?
- ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ ನಿಮ್ಮನ್ನು ಪ್ರತಿವಾದಿಯಾಗಿ ಮಾಡಿಸಿಕೊಳ್ಳಿ. ಅದು ವಿಚಾರಣೆಗೆ ಬಂದಾಗ ನಿಮ್ಮ ಅಹವಾಲನ್ನು ಅಲ್ಲಿ ಹೇಳಿಕೊಳ್ಳಬಹುದು. ಜತೆಗೆ ಟ್ರಿಬ್ಯುನಲ್‌ನಲ್ಲಿ ಸಂಘದ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿ. ಪರಿಹಾರ ಸಿಗಬಹುದು.

-ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ