ಸಾಪ್ತಾಹಿಕಪ್ರಭ

ಮಕ್ಕಳ ರಾಜ್ಯ

ಸೂಜಿ ಕಲಿಸಿದ ಪಾಠ
ಅವನೊಬ್ಬ ಭಾರೀ ಶ್ರೀಮಂತ. ಅವನಿಗೆ ಆಸ್ತಿ ಗಳಿಸುವುದರಲ್ಲಿ ತೃಪ್ತಿಯೇ ಇಲ್ಲ. ಎಷ್ಟು ಸಂಪಾದಿಸಿದರೂ ಮತ್ತಷ್ಟು ಬೇಕು ಎಂಬ ದುರಾಸೆ. ಇದರ ಜತೆಗೆ ತುಂಬಾ ಜಿಪುಣನಾಗಿಯೂ ಇದ್ದ. ಊರಿನವರೆಲ್ಲಾ ಇವನ ಜಿಪುಣತನ ಕಂಡು ಅಪಹಾಸ್ಯ ಮಾಡುತ್ತಿದ್ದುದೂ ಉಂಟು. ದೇವರ ಮುಂದೆ ಊದುಬತ್ತಿ ಹಚ್ಚಿದರೆ ಆ ತತ್‌ಕ್ಷಣವೇ ಆರಿಸಿಬಿಡುತ್ತಿದ್ದನು. ಕನ್ನಡಿಯ ಮೇಲೆ ನೆರೆಮನೆಯ ದೀಪ ಬೀಳುವಂತೆ ಮಾಡಿ ಆ ಬೆಳಕು ತನ್ನ ಮನೆಗೆ ಪ್ರತಿಫಲಿಸುವಂತೆ ಮಾಡುವನು. ತನ್ನ ಮಕ್ಕಳನ್ನು ನೆರೆಮನೆ ಹುಡುಗರ ಜತೆ ಆಟವಾಡಿ ಬರಲು ಕಳುಹಿಸಿದಾಗ ಆ ಹುಡುಗರು ತಲೆಗೆ  ಎಣ್ಣೆ ತಿಕ್ಕಿಕೊಂಡಿದ್ದರೆ ಇವನ ಮಕ್ಕಳು ಅವರೊಂದಿಗೆ ಬೆರೆತು ತಮ್ಮ ಮಕ್ಕಳ ತಲೆಗೂ ಎಣ್ಣೆ ಸಿಗುವಂತೆ ಮಾಡುತ್ತಿದ್ದನು. ಒಟ್ಟಿನಲ್ಲಿ ಎಲ್ಲೆಲ್ಲಿ ಜಿಪುಣತನವನ್ನು ಸಾಧಿಸಲು ಸಾಧ್ಯವೋ ಅಲ್ಲೆಲ್ಲಾ ಇವನ ಪಾಂಡಿತ್ಯ ಎಲ್ಲೆ ಮೀರುತ್ತಿತ್ತು.
ಒಂದು ಸಲ ಈ ಜಿಪುಣಾಗ್ರೇಸರ ಚಕ್ರವರ್ತಿ ಪಕ್ಕದ ಹಳ್ಳಿಗೆ ನಡೆದುಹೋಗುತ್ತಿದ್ದ. ಎದುರಿಗೆ ಒಬ್ಬ ಮುದುಕ ಭೇಟಿ ಆದ. ಕುಶಲ ಪ್ರಶ್ನೆಗಳ ನಂತರ, 'ಯಜಮಾನರೇ, ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು; ನಿಮ್ಮ ತಂದೆ ಬಂದು ಬಹಳ ಹೊತ್ತು ಮಾತನಾಡಿದರು. ಅವರು ಈಗ ಸ್ವರ್ಗದಲ್ಲಿ ವಾಸಿಸುತ್ತಿದ್ದಾರಂತೆ. ಅವರ ಬಟ್ಟೆಗಳೆಲ್ಲವೂ ಹರಿದು ಚಿಂದಿಯಾಗಿವೆಯಂತೆ. ತಕ್ಷಣವೇ ಒಂದು ಸೂಜಿಯನ್ನು ತೆಗೆದುಕೊಂಡು ನೀವು ಸ್ವರ್ಗಕ್ಕೆ ಹೋಗಿ ಅವರಿಗೆ ಸೂಜಿ ಕೊಡಬೇಕಂತೆ. ತೆಗೆದುಕೊಳ್ಳಿ ಈ ಸೂಜಿಯನ್ನು' ಎನ್ನುತ್ತಾ ಶ್ರೀಮಂತನ ಮುಂದೆ ಸೂಜಿ ಹಿಡಿದ. ಈ ಅನಿರೀಕ್ಷಿತ ಪ್ರಸಂಗದಿಂದಾಗಿ ಶ್ರೀಮಂತನ ಮನಸ್ಸಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಉದ್ಭವಿಸಿದವು. 'ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ದೇಹವನ್ನು ಬಿಟ್ಟು ಹೋಗಬೇಕು. ಅಂದಮೇಲೆ  ಈಗ ನಾನು ಜಿಪುಣತನದಿಂದ ಗಳಿಸಿರುವ ಈ ಆಸ್ತಿ, ಸಂಪತ್ತು, ಧನಕನಕ ವಸ್ತುಗಳು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ಇದೆಲ್ಲಾ ನನ್ನ ವ್ಯಾಮೋಹವಲ್ಲದೆ ಮತ್ತೇನಿಲ್ಲ' ಎನ್ನುತ್ತ 'ಇಂದು ಈ ಸೂಜಿ ನನಗೊಂದು ಉತ್ತಮವಾದ ಪಾಠ ಕಲಿಸಿದೆ. ಇನ್ನು ಮುಂದೆ ನನ್ನನ್ನು ನಾನು ತಿದ್ದಿಕೊಂಡರೆ ಕ್ಷೇಮ' ಎನ್ನುತ್ತಾ ಆ ಮುದುಕನಿಗೆ ಧನ್ಯವಾದಗಳನ್ನು ಅರ್ಪಿಸಿದ.
(ತೆಲುಗು ಜಾನಪದ ಕಥಾ ಸಂಗ್ರಹ)
= ಎ.ಕೆ. ಪಟ್ಟಾಭಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್