ಸಾಪ್ತಾಹಿಕಪ್ರಭ

ಕುಹಕವಾಡುವುದು ಸಿನಿಕತನ!

ಕಿರು ಸಾಹಿತ್ಯ ಪತ್ರಿಕೆಗಳು ನಿರ್ದಿಷ್ಟವಾದ ತಾತ್ವಿಕತೆಯನ್ನು ಇಟ್ಟುಕೊಂಡು ಒಂದು ನಿಗದಿತ ಕಾಲದವರೆಗೂ(ಅನಿಯತಕಾಲಿಕೆಯಾಗಿ ನಡೆದರೂ) ಬರುತ್ತವೆ. ಎಂದೆಂದಿಗೂ ತಾನಿ ನಂಬಿದ ಸಿದ್ಧಾಂತದಿಂದ ಹೊರಗೆ ಬರುವುದಿಲ್ಲ. ಪತ್ರಿಕೆಯ ಅವಸಾನ ಕಣ್ಣ ಮುಂದಿದ್ದರೂ, ಮಾರುಕಟ್ಟೆ ನಿಯಂತ್ರಿಸುವ ಪೊಳ್ಳು ವರದಿಗಳಿಗೆ, ಹುಸಿ ಆದರ್ಶಕ್ಕೆ, ಜನಪ್ರಿಯ ಜಾಹೀರಾತು ತಂತ್ರಗಳಿಗೆ ತನ್ನನ್ನು ತಾನು ಘಾಸಿಗೊಳಿಸಿಕೊಳ್ಳದೆ ಕೇವಲ ಗುಣಮಟ್ಟವೊಂದೇ ತನ್ನ ಮೌಲ್ಯಸಾಧನೆಯೆಂದು ಬಗೆಯುವ ಕಿರು ಸಾಹಿತ್ಯ ಪತ್ರಿಕೆಗಳ ಬಗ್ಗೆ ಕುಹಕವಾಡುವುದು ಕೇವಲ ಸಿನಿಕತನವಷ್ಟೆ!
ಇಂದಿನ ಸಾಹಿತ್ಯ ಪತ್ರಿಕೆಗಳು ಎದುರಿಸುತ್ತಿರುವ ಮುಖ್ಯ 3 ಸಮಸ್ಯೆಗಳು- 1. ಗುಣಮಟ್ಟದ ಓದುಗರು, 2. ಗುಣಮಟ್ಟದ ಬರಹಗಾರರು, 3. ವ್ಯವಹಾರದಾಚೆಗಿನ ನೈತಿಕ ಬೆಂಬಲ. ಹಾಗಾಗಿ ಪತ್ರಿಕೆಗಳು ಸದಾ ತಮ್ಮ ಸೀಮಿತ ಓದುಗರಿಗಾಗಿ ತತ್ವಬದ್ಧವಾದ ಮೌಲಿಕ ಸಾಹಿತ್ಯವನ್ನು ಯಾವ ಮುಲಾಜೂ ಇಲ್ಲದೆ ಮುಂದುವರಿಸಿಕೊಂಡು ಬರುತ್ತಿವೆ. ಒಂದೊಂದು ಪತ್ರಿಕೆಯ ದೃಷ್ಟಿಕೋನ ವಿಭಿನ್ನವಾಗಿರಬಹುದು. ಆದರೆ ಎಂದೆಂದೂ ಭ್ರಷ್ಟವಾಗಿಲ್ಲ.
ಕೇವಲ ಮಾಹಿತಿಯೊಂದೇ ಜ್ಞಾನ ಎಂದು ತಿಳಿದುಕೊಂಡಿರುವ ಸಾಮಾನ್ಯ ಓದುಗರು, ತಮ್ಮ ಬುದ್ಧಿಮತ್ತೆಗೆ ಮೀರಿದ ಕಲೆ, ಬರಹವನ್ನು ಆಸ್ವಾದಿಸುವ ಗೋಜಿಗೆ ಹೋಗುವುದಿಲ್ಲ. ಹಾಗಾಗಿ ಅವರು ಉತ್ತಮ ಗುಣಮಟ್ಟದ ಸಾಹಿತ್ಯ ಪತ್ರಿಕೆಗಳಿಗಿಂತಲೂ ಜನಪ್ರಿಯ ಪತ್ರಿಕೆಗಳ ಕಡೆಗೆ ವಾಲುತ್ತಾರೆ. ಯಾಕೆಂದರೆ ಬುದ್ಧಿಗೆ ಮೇವು ನೀಡದೆ, ತಾವು ತಿಳಿಸುವುದೇ ಸತ್ಯ ಎಂಬ ಗಟ್ಟಿಗೊಳಿಸುತ್ತಾ ಬರುವ ಜನಪ್ರಿಯ ಪತ್ರಿಕೆಗಳ ಪರೋಕ್ಷ ರಾಜಕೀಯವನ್ನೂ ತಿಳಿಯಲಾರದ ಮುಗ್ಧರು ಇವರು. ಇಂತಹ ಯಥಾಸ್ಥಿತಿವಾದವನ್ನು ಧಿಕ್ಕರಿಸಲೆಂದೇ ಕಿರು ಸಾಹಿತ್ಯ ಪತ್ರಿಕೆಗಳು ಹುಟ್ಟಿಕೊಂಡಿವೆ. ಇದನ್ನು ಸೂಕ್ಷ್ಮ ಮನಸ್ಸಿನ ಸಮಾನ ಮನಸ್ಕರು ತಿಳಿದುಕೊಂಡಿರುವುದರಿಂದ, ಇಂತಹ ಪತ್ರಿಕೆಗಳ ಬಗ್ಗೆ ಅಪಪ್ರಚಾರ ಮಾಡುವ ಬಹುಸಂಖ್ಯಾತರನ್ನು ಕಡೆಗಣಿಸುತ್ತಾರೆ.
ದೊಡ್ಡ ಸಾಹಿತಿಗಳು ನಡೆಸುತ್ತಿದ್ದ ಸಾಹಿತ್ಯ ಪತ್ರಿಕೆಗಳು ಹೇಳಹೆಸರಿಲ್ಲದೆ ಹೋಗಿವೆ ಎಂದು ಹಲುಬುವವರಿಗೆ ಉತ್ತರ- ಅವರು ತಮ್ಮ ಕಾಲಕ್ಕೆ ಸ್ಪಂದಿಸಿದ್ದಾರೆ. ತಮ್ಮ ಕಾಲದ ಮಹತ್ವ, ಸಂಕೀರ್ಣತೆಗಳನ್ನು ಕಲಾತ್ಮಕವಾಗಿ, ಯಶಸ್ವಿಯಾಗಿ ದಾಖಲಿಸಿ ತಮ್ಮ ಕೆಲಸ ಮುಗಿದ ಬಳಿಕ ಲಯವಾಗಿವೆ.
ನಿರ್ದಿಷ್ಟ ಧೋರಣೆ, ಇಸಂ ಇಲ್ಲದೆ ಹೋದರೆ ಎಂತಹ ಕೆಟ್ಟ ಪತ್ರಿಕೆಗಳು ಬರುತ್ತವೆ ಎಂದು ನೋಡಲು ಯಾರಾದರೂ ಸನಿಹದ ಪೇಪರ್ ಅಂಗಡಿಯಲ್ಲಿ ನೇತುಹಾಕಿರುವ ಅಸಂಖ್ಯ ಪತ್ರಿಕೆಗಳನ್ನು ಒಮ್ಮೆ ನೋಡಿದರೆ ಸಾಕು. ಇಂದು ಕಿರು ಸಾಹಿತ್ಯ ಪತ್ರಿಕೆಗಳಿಂದ ಉತ್ತಮ ಗುಣಮಟ್ಟದ ಸಂಕೀರ್ಣ ಪ್ರಜ್ಞೆಯ ಗುಂಪುಗಾರಿಕೆಯೊಂದು ರೂಪುಗೊಂಡಿರುವುದಕ್ಕೆ ಸಾಹಿತ್ಯ ಪತ್ರಿಕೆಗಳಿಗೇ ನಾವು ಋಣಿಯಾಗಿರಬೇಕು.
ಯಾವುದೇ ಜಾಹೀರಾತು ಆಮಿಷಕ್ಕೆ ಬಲಿಯಾಗದೆ, ವ್ಯಾಪಾರಿ ಮನೋಭಾವಕ್ಕೆ ತದ್ವಿರುದ್ಧವಾಗಿ ನೈತಿಕವಾಗಿ ತೊಡಗಿಸಿಕೊಂಡು, ಬಂಡವಾಳಶಾಹಿಯನ್ನು ವಿರೋಧಿಸಿ, ಮಾರುಕಟ್ಟೆ ಪ್ರಾಬಲ್ಯದಿಂದ ಮುಕ್ತವಾಗಿರುವ, ಸದಾ ಕ್ರಿಯಾಶೀಲತೆ ಕಾಪಾಡಿಕೊಂಡ, ವರ್ತಮಾನದ ಜಾಗತಿಕ ಸತ್ಯಗಳಿಗೆ ಸ್ಪಂದಿಸುತ್ತಿರುವ ಕಿರು ಸಾಹಿತ್ಯ ಪತ್ರಿಕೆಗಳಿಗೆ ಆತ್ಮಗೌರವ ಇದೆ. ಇಂತಹ ಕುಹಕಗಳಿಗೆ ಅವು ಬಲಿಯಾಗವು.

-ಸುಂಕಂ ಗೋವರ್ಧನ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್