ಸಾಪ್ತಾಹಿಕಪ್ರಭ

ವೇದ ನಾದ

ಒಮ್ಮೆ ಭಾರದ್ವಾಜ ಮುನಿಯು ವೇದಗಳನ್ನು ಅಭ್ಯಾಸ ಮಾಡಲು ಬ್ರಹ್ಮನಲ್ಲಿ 'ನನಗೆ ವೇದಾಧ್ಯಯನಕ್ಕೆ ಈಗ ಕೊಟ್ಟಿರುವ ಆಯುಷ್ಯ ಸಾಲದು ಇನ್ನಷ್ಟು ಬೇಕು' ಎಂದು ಆಯುಷ್ಯ ಕೇಳುತ್ತಲೇ ಹೋದನಂತೆ. ಕೊನೆಗೊಂದು ದಿನ ಬ್ರಹ್ಮ ಭಾರದ್ವಾಜ ಮುನಿಯನ್ನು ಕರೆದು, ಅನಂತವಾದ ಜ್ಞಾನದ ರಾಶಿಯನ್ನು ತೋರಿಸಿ- ನೀನು ನಿನ್ನ ಇದುವರೆಗಿನ ಆಯುಷ್ಯದಲ್ಲಿ ಅಭ್ಯಾಸ ಮಾಡಿದ್ದು ಕೇವಲ ಮೂರು ಮುಷ್ಟಿಗಳಷ್ಟನ್ನು ಎಂಬುದನ್ನು ತೋರಿಸಿಕೊಟ್ಟನಂತೆ! ಅಷ್ಟೊಂದು ಅಗಾಧ ವೇದಗಳ ಭಂಡಾರ!
ಇಂದು ಕೂಡ ಹೊಸ ಹೊಸ ಸಂಶೋಧನೆಗಳಿಂದ ಜ್ಞಾನಗಳು ಸೃಷ್ಟಿಯಾಗುತ್ತಲೇ ಇವೆ. ಅವುಗಳೆಲ್ಲ ತರ್ಕಕ್ಕೊಳಪಟ್ಟು ಅವುಗಳಲ್ಲಿ ಸುಳ್ಳನ್ನು ಕಾಣಲು ಸಾಧ್ಯವಿಲ್ಲದೆ ಹೋದರೆ ಅವುಗಳೂ ವೇದಗಳೇ. ಅವುಗಳನ್ನು ಸೃಷ್ಟಿಸಿದವರು ವೇದ ವಿದ್ವಾಂಸರೇ. ಅಂದರೆ ವೇದಗಳ ಭಂಡಾರಕ್ಕೆ ಹೊಸ ಹೊಸ ಜ್ಞಾನ ಸೇರ್ಪಡೆಯಾಗುತ್ತಲೇ ಇದೆ.
ಇಂದಿನ ಭೌತಶಾಸ್ತ್ರ, ಆರೋಗ್ಯಶಾಸ್ತ್ರ, ತರ್ಕಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ ಮೊದಲಾದವುಗಳೆಲ್ಲ ವೇದಗಳೇ ಆಗಿವೆ. ನಾಟ್ಯಶಾಸ್ತ್ರದ ಮೂಲ ವೇದಗಳು ಎಂದರೆ ಅಚ್ಚರಿ ಎನಿಸಿದರೂ ಸತ್ಯ. ವೇದಗಳು ನಿರಂತರ ಪರೀಕ್ಷೆಗೊಳಪಡಬೇಕು ಮತ್ತು ನಿರಂತರವಾಗಿ ಸತ್ಯದ ಕಡೆ ಸಾಗುತ್ತಿರಬೇಕು. ಹೊಸ ವೇದಗಳ, ಜ್ಞಾನಗಳ ಸೃಷ್ಟಿಯಾಗಿ, ಸತ್ಯದ ಕಡೆಗಿನ ನಮ್ಮ ಪಯಣ ಇನ್ನಷ್ಟು ತೀವ್ರವಾಗಿ ಸಾಗಬೇಕು ಎಂಬ ಉದ್ದೇಶದಿಂದ ಭಾರತೀಯ ವಿದ್ಯಾಭವನ ತನ್ನ ಅಮೃತ ಮಹೋತ್ಸವದ ಅಂಗವಾಗಿ ವೇದ ವಾಙ್ಮಯದ ರಾಷ್ಟ್ರೀಯ ಮಹಾ ಸಮ್ಮೇಳನವನ್ನು ಇಸ್ಕಾನ್ ಸಹಯೋಗದೊಂದಿಗೆ (ಜುಲೈ 21ರಿಂದ 28ರವರೆಗೆ) ನಡೆಸುತ್ತಿದೆ.
1938ರಲ್ಲಿ ಸ್ಥಾಪನೆಯಾದ ಭಾರತೀಯ ವಿದ್ಯಾಭವನ ತನ್ನ ಉದಾತ್ತ ಧ್ಯೇಯಾದರ್ಶಗಳಿಗೆ ಆಧಾರವಾದ ವೇದ ಸಾಹಿತ್ಯದ ನೂರಾರು ಗ್ರಂಥಗಳ ಪ್ರಕಾಶನ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಯೋಜನೆಯಲ್ಲಿ ನಿರತವಾಗಿದೆ. ಇಂದಿನಿಂದ(21 ಜುಲೈ) ನಡೆಯುತ್ತಿರುವ ಈ ಎಂಟು ದಿನಗಳ ಸಮ್ಮೇಳನದಲ್ಲಿ ವೇದ-ಸಂವಾದ ಕಾರ್ಯಕ್ರಮದ ಮೂಲಕ ಎಲ್ಲರಿಗೂ ವೇದ ಸಾಹಿತ್ಯ ಸಂಪತ್ತಿನ ವಿಶ್ವರೂಪದರ್ಶನ ಮಾಡಿಸಲಿದೆ.
ಈ ಸಮ್ಮೇಳನದಲ್ಲಿ ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಹಿಂದು ಎಂಬ ಭೇದವಿಲ್ಲದೆ ವೇದ ವಿದ್ವಾಂಸರು ಆಗಮಿಸಿ ತಮ್ಮ ಅಭಿಪ್ರಾಯ ಮಂಡಿಸುವರು. ಹೆಚ್ಚಿನ ಮಾಹಿತಿ: 080- 22267421, 22267303
ಸಮ್ಮೇಳನದಲ್ಲಿ ಏನೇನಿದೆ?
ವೇದಘೋಷ, ವೇದವ್ಯಾಖ್ಯಾನ, ವೇದದರ್ಶನ, ವೇದ ಸಂವಾದ, ವೇದ ಆಧರಿತ ಸಂಗೀತ, ನೃತ್ಯ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಮತ್ತು ನಾಟ್ಯವೇದಗಳ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ. ವೇದಗಳ ಚಲನಚಿತ್ರ ಪ್ರದರ್ಶನ. ಸಿಡಿ, ಡಿವಿಡಿ ಮತ್ತು ಗ್ರಂಥಗಳ ಪ್ರದರ್ಶನ. ಎಂಟು ವಿದ್ವಾಂಸರ ಅತಿಥಿ ಉಪನ್ಯಾಸ ಮಾಲಿಕೆ ಈ ಸಮ್ಮೇಳನದಲ್ಲಿರಲಿದೆ. 8 ದಿನಗಳು ನಡೆಯುವ, 80 ತಾಸುಗಳ ಕಾರ್ಯಕ್ರಮ, 16 ಗೋಷ್ಠಿಗಳು, 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 160ಕ್ಕೂ ಹೆಚ್ಚು ವೇದವಿದ್ವಾಂಸರು ಭಾಗವಹಿಸಲಿದ್ದಾರೆ!

-ಶಶಿರೇಖಾ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ