ಸಾಪ್ತಾಹಿಕಪ್ರಭ

ಹಂಚಿದ ಹನಿಗಳು

---
ಸದಾ ನನ್ನೊಡನೆ ಇದ್ದ ಕತ್ತಲು
ಇದ್ದಕ್ಕಿದ್ದಂತೆ ಕಿರಿದಾಗಿ
ನನ್ನದೇ ಆಕೃತಿಯಾಯಿತು.
ಮಿಕ್ಕದ್ದು? ಸುತ್ತಲೂ ಹುಡುಕಿದೆ
ಇಲ್ಲೇ ಹತ್ತಿರ ಇದ್ದವರೆಲ್ಲ
ದೂರದಲ್ಲಿ ಹರಿದು ಹಂಚಿ ತಿನ್ನುತ್ತಿದ್ದರು
ಪಾಪ, ಕತ್ತಲೆ ಮರಣ ರೋದನ ಗೈಯುತ್ತಿತ್ತು.
---
ಧರ್ಮ ನಮ್ಮ ಮೈಮೇಲಿನ ಚರ್ಮ
ತಿರುಳು ಒಳಗಿನ ಶುದ್ಧಾಂತಃಕರಣ
ಚರ್ಮ ಸುಲಿದುದೇ ಆದರೆ ಪ್ರಳಯ

---
ನಿನ್ನೆ ನಾ ಕಂಡ ಆ ಒಂದು ಸಾವು
ಬರಿದೇ ಸಾವಾಗಿರಲಿಲ್ಲ
ಧನಾತ್ಮಕ ಬದುಕಿನ ಎಚ್ಚರಿಕೆ ಗಂಟೆ
ಮೊಳಗುತ್ತಲೇ ಇದೆ.

---
ಎಲ್ಲ ಗುಡಿ ಕೈಗಾರಿಕೆಗಳ ಉಗಮ
ಬಡವನ ಬಡಬಾನಲದೊಳಗೆ
ಎಲ್ಲ ಉದ್ಯಮಗಳ ಮೂಲ ಗಂಗೋತ್ರಿ
ಕೇವಲ ಅಡುಗೆಯ ಮನೆ

ವಿದ್ಯಾಧರ ಮುತಾಲಿಕ ದೇಸಾಯಿ
94838 25215

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ