ಸಾಪ್ತಾಹಿಕಪ್ರಭ

ನೀವು ಕಾನೂನು

ತೊಂದರೆಯನ್ನು ಲಿಖಿತವಾಗಿ ತಿಳಿಸಿ
ರೇಖಾ ನಾಯಕ್, ಭಟ್ಕಳ
ಅಂಗನವಾಡಿ ನೇಮಕಾತಿ ಕುರಿತು ಧಾರವಾಡದ ಬೆಂಚ್‌ಗೆ ಅರ್ಜಿ ಸಲ್ಲಿಸಲು ಹೈಕೋರ್ಟ್‌ನ ಕಾನೂನು ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಅವರು ಒಬ್ಬ ವಕೀಲರನ್ನು ನೇಮಕ ಮಾಡಿರುತ್ತಾರೆ. ಆದರೆ ಅವರು ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ಪರಿಹಾರವೇನು?
- ಧಾರವಾಡಕ್ಕೆ ಖುದ್ದಾಗಿ ಹೋಗಿ ಕಾನೂನು ಸೇವಾ ಸಮಿತಿಯವರನ್ನು ಕಂಡು ನಿಮ್ಮ ತೊಂದರೆಯನ್ನು ಅವರಿಗೆ ಲಿಖಿತವಾಗಿ ತಿಳಿಸಿ. ಸಹಾಯವಾಗಬಹುದು.

 ಇಂಜೆಂಕ್ಷನ್ ಪಡೆದುಕೊಳ್ಳಿ
ಮಂಜುನಾಥ, ಭಟ್ಕಳ
ನನಗೆ ಗದ್ದೆಯಿದ್ದು, ಅದರಲ್ಲಿ ಹಿಂದಿನ ಜಾಗದವರಿಗೆ ಮಾಮೂಲಿನಂತೆ ಒಂದು ಓಡಾಡುವ ಕಾಲುದಾರಿಯಿದೆ. ನನ್ನ ಹಿಂದಿನವರು ಅಲ್ಲಿ ಮನೆ ಕಟ್ಟಿಕೊಂಡು, ಓಡಾಡಲು ಗದ್ದೆಯ ಮಧ್ಯದಲ್ಲಿ ದಾರಿ ಬೇಕೆಂದು ಮೊದಲು ಪೊಲೀಸ್ ಠಾಣೆಯಲ್ಲಿ ನಂತರ ಸಿವಿಲ್ ಕೇಸ್ ಹಾಕಲು ತಯಾರಿ ನಡೆಸಿದ್ದಾರೆ. ರಾಜಕೀಯ ಬೆಂಬಲದಿಂದ ಪಂಚಾಯ್ತಿಯವರು ಇಲ್ಲಿ ರಸ್ತೆ ಮಾಡಲು ರೂ. 50,000 ತೆಗೆದಿಟ್ಟಿದ್ದಾರಂತೆ. ಪರಿಹಾರವೇನು?
- ಏನು ಮಾಡಬೇಕಾದರೂ ಅಷ್ಟು ಜಾಗ ಸ್ವಾಧೀನ ಮಾಡಿಕೊಳ್ಳಬೇಕು (ಕಾನೂನು ಪ್ರಕ್ರಿಯೆಯಂತೆ). ಇರುವ ಜಾಗದಲ್ಲಿ ಫುಟ್‌ಬ್ರಿಟ್ ಮಾಡಲು ಪಂಚಾಯ್ತಿಗೆ ಹಕ್ಕಿಲ್ಲ. ಬೇಕಾದರೆ ನೀವು ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಹಾಕಿ, ಸಂಬಂಧಿಸಿದವರ ಮೇಲೆ ನಿರ್ಬಂಧಕಾಜ್ಞೆ (ಇಂಜೆಂಕ್ಷನ್ ಆರ್ಡರ್) ಪಡೆದುಕೊಳ್ಳಬಹುದು.

 ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿ
ಎಂ.ಎ. ಮಹದೇಶ್ವರ, ಮಧುಗಿರಿ
ಇನಾಂ ರದ್ದತಿ ಕಾನೂನಿನ ಕಲಂ 48ರನ್ವಯ ಭೂ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇದೆಯೇ?
- ಇದು ಇನಾಂ ರದ್ದತಿಗೆ ಸೇರಿದುದಲ್ಲ. ಇದು ಭೂ ಸುಧಾರಣೆ ಕಾಯಿದೆ. ಭೂನ್ಯಾಯ ಮಂಡಳಿಯ ತೀರ್ಪನ್ನು ಪ್ರಶ್ನಿಸಲು ಹೈಕೋರ್ಟಿಗೇ ಹೋಗಿ ರಿಟ್ ಅರ್ಜಿ ಸಲ್ಲಿಸಬೇಕು. ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವಿಲ್ಲ.

 ಮಾಹಿತಿ: ಯಾರು ಬೇಕಾದರೂ ಕೇಳಬಹುದು
ಕೆ. ಪ್ರಾಣೇಶರಾವ್, ಜಯನಗರ, ಬೆಂಗಳೂರು
ನಾನು ಗೃಹನಿರ್ಮಾಣ ಸಂಘವೊಂದರಲ್ಲಿ ಕೆಲಸ ಮಾಡುತ್ತಿದ್ದು ಕೆಲ ಸದಸ್ಯರು ದಾಖಲೆಗಳನ್ನು ಅಪೇಕ್ಷಿಸಿ ಅರ್ಜಿ ಸಲ್ಲಿಸಬಯಸಿದ್ದಾರೆ. ಮಾಹಿತಿ ಹಕ್ಕು ಎಲ್ಲ ಸಹಕಾರ ಸಂಘಗಳಿಗೂ ಅನ್ವಯಿಸುತ್ತದೆಯೇ? ಮಾಹಿತಿ ಕೇಳಿ ಯಾರಿಗೆ ಅರ್ಜಿ ಸಲ್ಲಿಸಬೇಕು? ಯಾರು ಅರ್ಜಿ ಸಲ್ಲಿಸಬಹುದು?
- ಯಾವ ಸಹಕಾರ ಸಂಘಗಳು ಸರ್ಕಾರದಿಂದ ಷೇರು ಬಂಡವಾಳ ಅಥವಾ ಸಾಲ ಪಡೆಯುತ್ತವೆಯೋ ಅಂತಹ ಸಂಘಗಳು ಮಾತ್ರ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಬರುತ್ತದೆ ಎಂದು ನಮ್ಮ ಹೈಕೋರ್ಟ್ ತೀರ್ಪು ನೀಡಿದೆ. ಉಳಿದ ಸಂಘಗಳಿಗೆ ಇದು ಅನ್ವಯಿಸುವುದಿಲ್ಲ. ಮಾಹಿತಿಯನ್ನು ಯಾರು ಬೇಕಾದರೂ ಕೇಳಬಹುದು. ಸದಸ್ಯರೇ ಆಗಬೇಕೆಂದೇನೂ ಇಲ್ಲ.
ಆಯಾ ಸಂಘದ ಮುಖ್ಯ ಆಢಳಿತಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಹಕ್ಕು ಕಾಯಿದೆಯ ಪುಸ್ತಕ (ಟಿಪ್ಪಣಿಯೊಡನೆ) ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಲ್ಲ ಕಾನೂನು ಪುಸ್ತಕದ ವ್ಯಾಪಾರಿಗಳಲ್ಲಿ ಸಿಗುತ್ತದೆ.

ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ
ಬಿ. ರಾಜೇಗೌಡ, ಬೆಂಗಳೂರು
ಹಿಂದೆ ಕನ್ನಡಪ್ರಭದಲ್ಲಿ ತಿಳಿಸಿದಂತೆ ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿದೆ ಎಂಬ ಕಾನೂನು ಜಾರಿಗೆ ಬಂದಿದೆ ಎಂದು ಹೇಳಿದ್ದಿರಿ. ಇದಕ್ಕೆ ಉಚ್ಚ ನ್ಯಾಯಾಲಯದ ತೀರ್ಪುಗಳೂ ಇವೆಯೇ?
- ಹಿಂದೂ ಉತ್ತರಾಧಿಕಾರ ಕಾಯಿದೆ 1950, ಇದರ ಕಲಂ 6 ಅನ್ನು 2005ನೇ ಇಸವಿಯಲ್ಲಿ ಪಾರ್ಲಿಮೆಂಟ್ ತಿದ್ದುಪಡಿ ಮಾಡಿ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಂತೆಯೇ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆಯೆಂದು ಘೋಷಿಸಿತು. (ಕಲಂ 6(1)) ಆ ತಿದ್ದುಪಡಿಯು ತಾ. 9.9.2005ರಿಂದ ಜಾರಿಗೆ ಬಂದಿತು. ಇದೇ ಕಲಂನಲ್ಲಿ ಈ ತಿದ್ದುಪಡಿಯು ಡಿಸೆಂಬರ್ 20, 2004ಕ್ಕಿಂತ ಮುಂಚಿನ ಪ್ರಕರಣಗಳಿಗೆ ಅನ್ವಯಿಸುವುದಿಲ್ಲವೆಂದೂ ಘೋಷಿಸಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಉಚ್ಚ ನ್ಯಾಯಾಲಯದಲ್ಲಿ ಮಹತ್ವದ ತೀರ್ಪೊಂದನ್ನು ನೀಡಿ ಈ ತಿದ್ದುಪಡಿಯನ್ನು ಎತ್ತಿಹಿಡಿದಿದೆ. (ಪುಷ್ಪಲತಾ ಎನ್.ವಿ ಢ/ಡ ಪದ್ಮ ಮತ್ತಿತರರು, ಐಎಲ್‌ಆರ್ 2010, ಕೆಎಆರ್ 1484).


- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ