ಬರವಪ್ಪೋ ಬರ ಬಂತು
ಭೀಕರ ಬರ ಬಂತು!
ಕೊಟ್ಟಿಗೆ ರಾಸಿಗೆ ಮೇವಿಲ್ಲ
ಹಟ್ಟಿಯ ಹೈದನ್ಗೆ ಅನ್ವಿಲ್ಲ
ಅಮ್ಮನ ಎದೆಯಲಿ ಹಾಲಿಲ್ಲ!
ಕಟ್ಟಿದ ಕೆರೆಯಲಿ ನೀರಿಲ್ಲ
ಗೂಡಿನ ಹಕ್ಕಿಗೆ ಗುಟುಕಿಲ್ಲ
ಭೂ ತಾಯ ಒಡಲಲಿ
ದಗ ದಗ ಬೆಂಕಿಯು
ರೈತನ ಕಣ್ಣಲಿ ರಕ್ತದ ಧಾರೆಯು
ಊರಿಗೆ ಊರೇ ಗುಳೆ
ನಾಡಿಗೆ ನಾಡೇ ಗುಳೆ
ಬಾರಪ್ಪ ಬಾರೋ ಮಳೆರಾಯ
ಬಂದ್ಹುಯ್ಯೋ ಮಳೆರಾಯ
ಕೆರೆ ಕಟ್ಟೆ ತುಂಬಲಿ
ಗಿಡ ಮರ ಚಿಗುರಲಿ
ಹಸಿರಿಂದ ಉಸಿರಿರಲಿ
ಹಕ್ಕಿಯ ಹಾಡು ಚಿಮ್ಮಲಿ
ಕಂದನ ಕರೆ ಕೇಳಿ
ಕರುಣಿಸೋ ಮಳೆರಾಯ!