ಸಾಪ್ತಾಹಿಕಪ್ರಭ

ಕಲೆಯೇ... ಕೈಹಿಡಿದು ನಡೆಸೆನ್ನನು...

ಇವರ ಪಾಲಿಗೆ ಬದುಕು ಅಕ್ಷರಶಃ ಜಟಾಕ ಬಂಡಿ. ವಿಧಿ ಅದರ ಸಾಹೇಬ್! ಹೊಟ್ಟೆಪಾಡಿಗಾಗಿ ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದು ಗೊತ್ತಿಲ್ಲದ ಭಾಷೆಯಲ್ಲಿ ವ್ಯವಹರಿಸುತ್ತಾ ಹೊಟ್ಟೆ ತುಂಬಿಕೊಳ್ಳುವ ಇವರು ಅಲೆಮಾರಿಗಳು.
ಮೂಲ ರಾಜಸ್ಥಾನ. ಮಣ್ಣಿನಲ್ಲಿ ಮೂರ್ತಿಗಳನ್ನು ಮಾಡುತ್ತಾ, ಅವುಗಳನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವುದು ಇವರ ಪ್ರಾಮಾಣಿಕ ಕಸುಬು. 'ಭಾಷೆ ಯಾವುದಾದರೇನು, ಬದುಕು ಒಂದೇ ಅಲ್ಲವೇ?' ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉಸಿರಾಡುತ್ತಿರುವ ಮಂದಿ ಇವರು. ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡುತ್ತಾ ಹಾನಗಲ್ಲಿನ ಬಯಲಿನಲ್ಲಿ ಟೆಂಟ್ ಹಾಕಿಕೊಂಡು ಕಾಲವನ್ನು ತಳ್ಳುತ್ತಿರುವ ಇವರನ್ನು ನೋಡಿದರೆ ಎಂಥವರಿಗೂ ಬದುಕಿನ ಬೆಲೆ ಗೊತ್ತಾಗುತ್ತದೆ. ಮುರುಕು ಜೋಪಡಿಯೇ ಆರಮನೆ. ಈ ಸಣ್ಣ ಚೌಕಟ್ಟಲ್ಲೂ ಅಗಾಧ ಶಿಸ್ತು. ಸುಂದರ ಬದುಕನ್ನು ರೂಪಿಸಿಕೊಳ್ಳಲು ಹೆಣಗುತ್ತಿರುವ ನಿರುದ್ಯೋಗಿ ಯುವ ಪೀಳಿಗೆಗೆ ಇವರ ಕಾಯಕ ನಿಜಕ್ಕೂ ಮಾದರಿ.
ಮಣ್ಣಿನ ಮೂರ್ತಿಗಳನ್ನು ಮಾಡುವುದರಲ್ಲಿ ಇವರದ್ದು ಎತ್ತಿದ ಕೈ. ಶಿರಡಿಸಾಯಿಬಾಬಾ, ರಾಧಾ- ರುಕ್ಮಿಣಿ, ಗಜರಾಜ ವಿವೇಕಾನಂದ, ಗಣೇಶ, ವಾಸ್ತುವಿಗೆ ಸಂಬಂಧ ಮೂರ್ತಿಗಳು, ಶಿವ- ಪಾರ್ವತಿ, ವಾಯುಪುತ್ರ, ರಾಮ- ಕೃಷ್ಣ, ಹೂದಾನಿ, ವನ್ಯಪ್ರಾಣಿಗಳು, ಗಿಳಿ ಪಾರಿವಾಳ... ಹೀಗೆ ಪ್ರಕೃತಿಯ ಜೀವ ಸಂಕುಲದ ಎಲ್ಲ ವೈವಿಧ್ಯತೆಗಳನ್ನು ಮಣ್ಣಿನ ಮೂಸೆಯಲ್ಲರಳಿಸಿ ಕೈಗಿಡುವ ಸೊಬಗನ್ನು ನೋಡುವುದೇ ಒಂದು ಸೊಗಸು.
ಅಂದಹಾಗೆ, ಈ ಗೊಂಬೆಯನ್ನವರು ನಮ್ಮ ಮಣ್ಣಿನಿಂದ ಮಾಡುವುದಿಲ್ಲ. ರಾಜಸ್ಥಾನದ ಮಣ್ಣನ್ನು ಇದಕ್ಕಾಗಿ ಬಳಸುತ್ತಾರೆ. ಪ್ಲಾಸ್ಟರ್ ಆಪ್ ಪ್ಯಾರಿಸ್‌ನ ನಕಲಿ ರೂಪ ಎನ್ನುವಷ್ಟು ಗುಣಮಟ್ಟ ಹೊಂದಿರುತ್ತವೆ ಇವರ ಮೂರ್ತಿಗಳು.
ಇವರು ತಮ್ಮ ತವರಿಂದ ಅಧಿಕ ಸಂಖ್ಯೆಯಲ್ಲಿ ಮಣ್ಣಿನ ಮೂಟೆಗಳನ್ನು ಜತೆಗಿಟ್ಟುಕೊಂಡು ತರುತ್ತಾರೆ. ರಾಜ್ಯದ ದೊಡ್ಡ ಪಟ್ಟಣಗಳು ಇವರ ವ್ಯಾಪಾರ ಕೇಂದ್ರಗಳು. ಮಳೆ ಗಾಳಿ ಬೇಸಿಗೆ ಏನೇ ಇರಲಿ... ಎಲ್ಲ ಟೈಮಲ್ಲೂ ಇವರ ಮೂರ್ತಿಗಳು ಅವತಾರ ಎತ್ತುತ್ತವೆ. ದಿನಕ್ಕೆ ಕನಿಷ್ಠ 300- 400 ರುಪಾಯಿ ಹಣ ಇವರ ಕಿಸೆಯನ್ನು ತುಂಬುತ್ತದೆ. ಬಯಲು ಬದುಕಿನ ಜಂಜಡಗಳನ್ನು ಸ್ವೀಕರಿಸುವ ಮನೋಭಾವ ಇವರದು. ಎಲ್ಲರಂತೆ ಇವರಿಗೂ ಹೊಲ, ಮನೆ ಗದ್ದೆ ಎಲ್ಲಾ ಇದೆ. ಆದರೂ ಪೂರ್ವಜರ ವೃತ್ತಿಗೆ ತಿಲಾಂಜಲಿ ಬಿಡುವುದು ಬೇಡ ಎಂಬುದು ಇವರ ಒಳ ಆಶಯ. ಹೀಗಾಗಿ, ರಾಜ್ಯದಿಂದ ರಾಜ್ಯಕ್ಕೆ ಅಲೆದಾಟ.

-ಟಿ. ಶಿವಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video