ಡಾಕ್ಟರ್: ಅದ್ಸರಿ, ನಿಮ್ಮ ತಲೆನೋವು ಈಗ ಹೇಗಿದೆ?
ಕೋಲ್ಯ: ಒಂದು ವಾರದಿಂದ ಇಲ್ಲ ಬಿಡಿ, ಅವಳು ತವರಿಗೆ ಹೋಗಿದ್ದಾಳೆ.
ಕೋಲ್ಯ: ನನಗಿವತ್ತು ಹೆಮ್ಮೆ ಆಗ್ತಿದೆ ಫಂಟಾ, ನನ್ನ ಮಗ ಮೆಡಿಕಲ್ ಕಾಲೇಜಲ್ಲಿದ್ದಾನೆ.
ಫಂಟಾ: ಓಹ್, ಅಲ್ಲಿ ಸ್ಟಡಿ ಮಾಡ್ತಿದ್ದಾನಾ?
ಕೋಲ್ಯ: ಇಲ್ಲಾ, ಆದ್ರೆ ಅವರೇ ಇವನನ್ನು ಸ್ಟಡಿ ಮಾಡ್ತಿದ್ದಾರೆ!
ಹತ್ತು ಜನರು ನಮ್ಮನ್ನು ನೆನೆಸಿಕೊಳ್ಳುವ ಹಾಗಿರಬೇಕು. ನೀವೆಲ್ಲಾ ಏನಾಗಬೇಕೆಂದಿದ್ದೀರಿ?
ಹತ್ತು ಜನರ ಹತ್ತಿರ ಸಾಲ ಮಾಡಿ ಊರು ಬಿಡುತ್ತೇವೆ ಸಾರ್! <
ಕೋಲ್ಯ ಎಂಥ ಸಂಗೀತಪ್ರೇಮಿ ಎನ್ನುವುದಕ್ಕೆ ಇದು ಸಾಕ್ಷಿ. ಕೋಲ್ಯನ ಲವರ್ ಬಾತ್ರೂಮಿನಲ್ಲಿ ಹಾಡು ಹೇಳ್ತಾ ಸ್ನಾನ ಮಾಡ್ತಿರ್ತಾಳೆ. ಕೋಲ್ಯ ಬಾತ್ರೂಮಿನ ಬಾಗಿಲಿನ ಹೋಲ್ಗೆ ಇಯರ್ಫೋನ್ ಸಿಕ್ಕಿಸಿ, ಆ ಹಾಡನ್ನು ಆಲಿಸ್ತಾ ಇರ್ತಾನೆ. <
ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಅಫ್ಘಾನಿಸ್ತಾನದ ಮಾಜಿ ಸಚಿವರ ಮನೆಗೆ ಹೋದರು. ಇಡೀ ದಿನ ಇಬ್ಬರೂ ಸಂಪೂರ್ಣ ಅಫ್ಘಾನಿಸ್ತಾನ ಸುತ್ತಿದರು. ಆಗ ಪಾಕಿಸ್ತಾನದ ಸಚಿವರಿಗೆ ಡೌಟ್ ಬಂದು ಕೇಳಿದರು, 'ಇಡೀ ಅಫ್ಘಾನಿಸ್ತಾನದಲ್ಲಿ ಸಮುದ್ರವೇ ಇಲ್ಲ. ಅದ್ಹೇಗೆ ನೀವು ಬಂದರು ಖಾತೆ ಸಚಿವರಾದ್ರಿ?'. ಅದಕ್ಕೆ ಅಫ್ಘನ್ ಸಚಿವರು ಮರುಪ್ರಶ್ನಿಸಿದರು, 'ಇಡೀ ಪಾಕಿಸ್ತಾನದಲ್ಲಿ ಕಾನೂನೇ ಇಲ್ಲ. ಅದ್ಹೇಗೆ ನೀವು ಕಾನೂವು ಸಚಿವರಾದ್ರಿ?'. <
ಪಕ್ಕದ ಮನೆಯಲ್ಲಿ ಕಳ್ಳತನವಾದ್ರೆ ನಿಂಗ್ಯಾಕೆ ದುಃಖ?
ಅಯ್ಯೋ, ನಿಮ್ಗೆ ಏನೂ ಗೊತ್ತಾಗಲ್ಲ ರೀ. ಕಳವಾಗಿದ್ದೆಲ್ಲಾ ನಕಲಿ ಒಡವೆಗಳಂತೆ, ಚಿನ್ನದ್ದೆಲ್ಲಾ ಹಂಗೇ ಇದ್ಯಂತೆ!
ನಗುತ್ತಿದ್ದರೆ ರೋಗವು ಓಡಿ ಹೋಗುತ್ತದೆ ಎಂದು ನನ್ನ ಗಂಡನಿಗೆ ಯಾಕೆ ಹೇಳಿದಿರಿ?
ಯಾಕೆ ಏನಾಯಿತು?
ನನಗೆ ಕಾಯಿಲೆ ಬಂದಾಗ ನನ್ನ ಎದುರಿನಲ್ಲಿ ಕುಳಿತುಕೊಂಡು ಗಹಗಹಿಸಿ ನಗುತ್ತಿರುತ್ತಾರೆ! <
ಮೊದಲು ಶಿಖರದಿಂದ ಕೆಳಕ್ಕೆ ಹಾರಬೇಕು. ರೆಕ್ಕೆಗಳನ್ನು ಬಿಚ್ಚಿಕೊಳ್ಳುವ ಕೆಲಸ ಆ ಮೇಲೆ.
ಪುಸ್ತಕಗಳನ್ನು ಸುಡುವುದಕ್ಕಿಂತಲೂ ಕೆಟ್ಟ ಕೆಲಸಗಳಿವೆ. ಅದೆಂದರೆ ಪುಸ್ತಕಗಳನ್ನು ಓದದಿರುವುದು.
ನೀವಿನ್ನು ಹತ್ತು ನಿಮಿಷದಲ್ಲಿ ಸತ್ತು ಹೋಗುತ್ತೀರಿ ಎಂದುಕೊಂಡು ಈ ಜಗತ್ತನ್ನು ನೋಡಿದರೆ, ಜಗತ್ತು ಎಂದಿಗಿಂತ ಅದ್ಭುತವಾಗಿ ಕಾಣಲಾರಂಭಿಸುತ್ತದೆ. <
- ಇವನು ಲಿಫ್ಟ್ ಬರುತ್ತಿದೆಯೇ ಎಂದು ಬಗ್ಗಿ ನೋಡಿದ. ಬರುತ್ತಿತ್ತು.
(ಓಪನ್ ಲಿಫ್ಟ್ ಅಪಘಾತದಲ್ಲಿ ಸತ್ತ ವ್ಯಕ್ತಿಯ ಗೋರಿ ಮೇಲಿನಿಂದ)
ರೇ ಬ್ರಾಡ್ಬರಿ