ಸಾಪ್ತಾಹಿಕಪ್ರಭ

ಬದುಕಿಗಿಂತ ಕೆಲಸ ಪ್ರೀತಿಸೋಣ

ಪಿಯೆರ್ ಆಗಸ್ಟ್ ರೆನ್ವಾ (ಜನನ-1841 ಫೆಬ್ರವರಿ 25) ಫ್ರಾನ್ಸ್‌ನ ಸುಪ್ರಸಿದ್ಧ ಚಿತ್ರಕಾರ ಮತ್ತು ಶಿಲ್ಪಿ.
ದರ್ಜಿಯ ಮಗನಾಗಿ ಹುಟ್ಟಿದ ರೆನ್ವಾ ಬಡತನದಲ್ಲಿ ಬಳಲಿ, ಉಪವಾಸವಿದ್ದರೂ, ಪರಿಸ್ಥಿತಿಯೊಡನೆ ಹೋರಾಡುತ್ತಾ ವರ್ಷಗಟ್ಟಲೆ ದುಡಿದು ಕೀರ್ತಿಯ ಶಿಖರವನ್ನು ಏರಿದ. ವೈಯಕ್ತಿಕ ಕಷ್ಟವನ್ನು ಎಂದೂ ತನ್ನ ಕೆಲಸದಲ್ಲಿ ಪ್ರತಿಬಿಂಬಿಸಲಿಲ್ಲ. ಆತನ ಚಿತ್ರಗಳಲ್ಲಿ ನೋವಿನ ಸುಳಿವು ಕಾಣಿಸುವುದಿಲ್ಲ. ಹರ್ಷ, ಸೊಗಸುಗಾರಿಕೆ ಕಂಡುಬರುತ್ತಿದ್ದವು.
ಶಾಲೆ ದಿನಗಳಿಂದಲೇ ರೆನ್ವಾಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಇತ್ತು. ಶಾಲೆಯ ಪುಸ್ತಕದಲ್ಲಿ ಮುದ್ದಾದ ಚಿತ್ರಗಳನ್ನು ಬರೆಯುತ್ತಿದ್ದ. ಮಗನ ಈ ಕಲಾಭಿರುಚಿಯನ್ನು ನೋಡಿ ಅವನ ತಂದೆ 13 ವರ್ಷದ ತನ್ನ ಮಗನನ್ನು ಪಿಂಗಾಣಿ ಕಾರ್ಖಾನೆಯಲ್ಲಿ, ತಟ್ಟೆಗಳ ಮೇಲೆ ಚಿತ್ರ ಬರೆಯಲು ಕಳುಹಿಸಿದ.
ನಾಲ್ಕು ವರ್ಷದ ನಂತರ ಈ ಕೆಲಸ ಬೇಜಾರು ಬಂದಿತು. ಸ್ವಲ್ಪ ಹಣ ಕೂಡಿಸಿಕೊಂಡು ಪ್ಯಾರಿಸ್‌ಗೆ ಹೋಗಿ ಸಾಂಪ್ರದಾಯಿಕ ಕಲಾ ಶಿಕ್ಷಣ ಪಡೆದುಕೊಂಡ (1862). ಮದುವೆಯ ನಂತರ ಇಟಲಿಗೆ ಹೋಗಿ ತನ್ನ ಕಲಾ ಕೌಶಲವನ್ನು ಅಭಿವೃದ್ಧಿಪಡಿಸಿಕೊಂಡ. ಸಾಕಷ್ಟು ಹಣವನ್ನೂ ಸಂಪಾದಿಸಿದ.
1890ರ ವೇಳೆಗೆ ಸಂಧಿವಾತಕ್ಕೆ ತುತ್ತಾದ. ಬೆರಳುಗಳು ಗಂಟುಗಂಟಾಗಿ ಬಾಗಿಸಲು ಆಗದ ಸ್ಥಿತಿಯನ್ನು ತಲುಪಿದವು. ಕುಂಚವನ್ನು ಸರಿಯಾಗಿ ಹಿಡಿದುಕೊಳ್ಳಲು ಆಗದಿದ್ದರೂ, ಎದೆಗುಂದಲಿಲ್ಲ. ತನ್ನ ಕೆಲಸದ ಸ್ಥಳಕ್ಕೆ ನಡೆಯಲೂ ಆಗುತ್ತಿರಲಿಲ್ಲ. ಚಿತ್ರ ರಚಿಸುವ ಕ್ಯಾನ್‌ವಾಸನ್ನೂ ಹತ್ತಿರಕ್ಕೆ ಬೇರೆಯವರು ಜರುಗಿಸಬೇಕಾಗಿತ್ತು. ಇಷ್ಟೆಲ್ಲಾ ಆದರೂ ರೆನ್ವಾ ಗೊಣಗಲಿಲ್ಲ, ಬೇರೆಯವರನ್ನು ದೂರಲಿಲ್ಲ. ಆದಷ್ಟು ನಗುನಗುತ್ತಲೇ ಇದ್ದ. ಕೆಲಸ ಮಾಡುವುದನ್ನು ನಿಲ್ಲಿಸಲೇ ಇಲ್ಲ.
ಹೀಗಿದ್ದಾಗಲೇ, ರೆನ್ವಾ ಕೆಲಸದ ಮಧ್ಯೆ 'ಹಾ, ಅಯ್ಯೋ' ಅಂತ ನರಳುತ್ತಿದ್ದುದನ್ನು ಆತನ ಸ್ನೇಹಿತ ಮ್ಯಾಟಿಸ್ಸೆ ಕಂಡ. ಆತನಿಗೆ ತುಂಬಾ ದುಃಖವಾಯಿತು. 'ಕಲಾವಿದರ ಹೃದಯ ತೀವ್ರವಾಗಿ ಸ್ಪಂದಿಸುತ್ತದೆ' ಎನ್ನುವುದು ಕಣ್ಣಿಗೆ ಕಾಣಿಸಿತು. ಆಗ, ರೆನ್ವಾರ ಕೈನಲ್ಲಿದ್ದ ಬ್ರಷ್ ಜಾರಿಬಿತ್ತು. ಅದನ್ನು ಎತ್ತಿ ಕೊಡುತ್ತಾ ಮ್ಯಾಟಿಸ್ಸೆ ಕೇಳಿದ, 'ಕೈನಲ್ಲಿ ಆಗದಿದ್ದರೂ, ದೇಹವನ್ನು ಏಕೆ ಹೀಗೆ ದಂಡಿಸುತ್ತಿದ್ದಿ? ನಮಗೆ, ನೋಡುವವರಿಗೇ ಇಷ್ಟು ಕಷ್ಟವಾಗುತ್ತಿರುವಾಗ ನಿನಗೆ ಹೇಗಾಗಬೇಡ? ಇದುವರೆಗೂ ಎಂತೆಂಥ ಅದ್ಭುತ ಕಲಾಕೃತಿಗಳನ್ನು ಸೃಷ್ಟಿಸಿದ್ದೀಯಾ. ಇದರಿಂದಲೇ ಸಂತೃಪ್ತನಾಗಿರಬಹುದಲ್ಲವೇ?'
ದುರ್ಬಲ ನಗುಬೀರುತ್ತಾ ರೆನ್ವಾ, 'ನನ್ನ ನೋವು ತಾತ್ಕಾಲಿಕ, ನನ್ನ ಸುಂದರ ಕೃತಿ/ರಚನೆಗಳು ಶಾಶ್ವತ' ಎಂದ. ಅದಕ್ಕೆ ಮ್ಯಾಟಿಸ್ಸೆ 'ಇದರಿಂದ ನಾವು ಏನು ತಿಳಿದುಕೊಳ್ಳಬೇಕು?' ಎಂದಾಗ, 'ಮಹಾ ಬುದ್ಧಿವಂತರು (ವಿಜ್ಞಾನಿ, ಕಲಾವಿದ, ಪಂಡಿತ, ತಂತ್ರಜ್ಞ) ತಮ್ಮ ವೃತ್ತಿಯನ್ನು ದಿನನಿತ್ಯದ ಬದುಕಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಇವರಿಗೆ ದುಡಿಮೆಯೇ ದೇವರು. ಈ ದುಡಿಮೆ, ಜೀವನೋಪಾಯವನ್ನೂ ಮೀರಿದ್ದು. ಹೀಗಾಗಿ ಇವರಿಗೆ ತಮ್ಮ ಕಲೆಯೇ ಜೀವನದ ಉದ್ದೇಶ. ನೋವು ನಲಿವುಗಳು ಕೇವಲ ಸಾಂದರ್ಭಿಕ.' ಈ ಮನೋಭಾವವಿರುವ ಪಿಯೆರ್ ಆಗಸ್ಟ್ ರೆನ್ವಾರಂತಹ ಕಲಾಕಾರರ ಬದುಕು ನಮಗೂ ಮಾದರಿಯಾಗಬೇಕು.
= ಸಂಪಟೂರು ವಿಶ್ವನಾಥ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ