ನನ್ನ ಹೆಂಡ್ತಿ ನನ್ನ ಬೆಸ್ಟ್‌ಫ್ರೆಂಡ್ ಜತೆ ಓಡಿಹೋಗಿದ್ದಾಳೆ. ನಾನು ಅವನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಿ!
ಜಗತ್ತಿನ ಅತಿ ದಢೂತಿ ವ್ಯಕ್ತಿ ಫುಟ್ಬಾಲ್‌ನ ಗೋಲ್‌ಕೀಪರ್ ಆಗಬಹುದು!
ಮದುವೆಗೆ ಮುಂಚೆ ಆಕೆ ಕೈಹಿಡಿದರೆ ಅದು ಲವ್. ನಂತರ ಕೈಹಿಡಿದರೆ ಅವಳಿಗೇನೋ ಭಯವಾಗ್ತಿದೆ ಅಂತ.
'ಸಕ್ಸಸ್' ಎನ್ನವುದು 'ವರ್ಕ್'ಗಿಂತ ಮೊದಲು ಬರುವುದು ಡಿಕ್ಷನರಿಯಲ್ಲಿ ಮಾತ್ರ.
ಜೋಕ್ಸ್‌ಪಿಯರ್
ಸೂಪರ್ ಕಾರು
ಬಾಸ್, ಕೋಲ್ಯನಿಗೆ ತನ್ನ ಹೊಸಾ ಕಾರನ್ನು ತೋರಿಸಲೆಂದು ಕರೆದುಕೊಂಡು ಹೋದರು.
ಕೋಲ್ಯ: ವ್ಹಾವ್! ಅಮೇಝಿಂಗ್. ತುಂಬಾ ಚೆನ್ನಾಗಿದೆ ಸರ್.
ಬಾಸ್: ನಿಜವಾಗ್ಲೂ?
ಕೋಲ್ಯ: ಹೌದು ಸರ್, ಸೂಪರ್ರಾಗಿದೆ. ನನ್ನಾಣೆ.
ಬಾಸ್: ನೋಡು ನೀನಿನ್ನೂ ಶ್ರಮ ಹಾಕಿ ಕೆಲ್ಸ ಮಾಡಿದ್ರೆ, ಮುಂದಿನವರ್ಷ ಇದಕ್ಕಿಂತ ಚೆನ್ನಾಗಿರೋ ಕಾರ್ ತಗೊಳ್ತೀನಿ.
=
ಕೋಲ್ಯಿಣಿ: ನಾನೀ ಭಿಕ್ಷುಕರನ್ನು ದ್ವೇಷಿಸ್ತೀನಿ.
ಕೋಲ್ಯ: ಯಾಕೆ?
ಕೋಲ್ಯಿಣಿ: ಪಾಪ ಹಸಿದಿದ್ದಾನೆ ಅಂತ ನಿನ್ನೆ ಬಿಸಿ ಬಿಸಿ ಅಡುಗೆ ಬಡ್ಸಿದ್ದೆ, ಇವತ್ತು ನೋಡಿದ್ರೆ ಕುಕ್ ಬುಕ್ ತಂದ್ಕೊಟ್ಟಿದ್ದಾನೆ!
ಲಿಪ್ ಕಿಸ್
ಕೋಲ್ಯ ಗರ್ಲ್‌ಫ್ರೆಂಡ್‌ಗೆ ಲಿಪ್ ಕಿಸ್ ಕೊಟ್ಟ. ನಂತರ...
ಕೋಲ್ಯ: ಬಹುಶಃ ನಿನ್ನ ಬಬಲ್‌ಗಮ್ಮನ್ನು ನಾನು ನುಂಗಿದೆ ಅನ್ಸುತ್ತೆ.
ಗರ್ಲ್‌ಫ್ರೆಂಡ್: ಛೇ, ಛೇ... ಅದು ಬಬಲ್‌ಗಮ್ ಅಲ್ಲ. ನನ್ಗೆ ಸ್ವಲ್ಪ ಕಫ ಆಗಿತ್ತು.....
ಮೊಬೈಲಿನಲ್ಲಿ ಸಂಭಾಷಣೆ ಸಾಗಿತ್ತು...
ಕೋಲ್ಯ: ನನ್ನ ಫ್ರೆಂಡೊಬ್ಬ ನನ್ ಜೊತೆ ಊಟಕ್ಕೆ ಬರ್ತಿದ್ದಾನೆ ಕಣೆ.
ಕೋಲ್ಯಿಣಿ: ನಿಮ್ಗೇನ್ ತಲೆ ಕೆಟ್ಟಿದ್ಯಾ? ನಾನೀಗಷ್ಟೇ ಶಾಪಿಂಗ್ ಮುಗಿಸ್ಕೊಂಡ್ ಬಂದಿದ್ದೀನಿ. ಅದಲ್ದೇ ಸೀರಿಯಲ್ ಕೂಡ ನೋಡೋಕಿದೆ. ನಾನೇನೂ ಅಡುಗೆ ಮಾಡ್ಲಿಲ್ಲ. ನಿಮ್ ಜೊತೆ ಹೋಟ್ಲಿಗೆ ಹೋಗೋಣಂತಿದ್ದೆ.
ಕೋಲ್ಯ: ನಂಗೊತ್ತು ಕಣೆ.
ಕೋಲ್ಯಿಣಿ: ಮತ್ತೇಕೆ ಅವನನ್ನು ಮನೆಗೆ ಕರೆದ್ರಿ?
ಕೋಲ್ಯ: ಪಾಪಿ, ಮದ್ವೆ ಆಗ್ಬೇಕು ಅಂತಿದ್ದಾನೆ. ಅದಕ್ಕೆ...!
ನಿಶ್ಶಬ್ದಕೋಶ
ಮದುವೆ: ಬಿಸಿನೀರ ಸ್ನಾನ. ಮೊದಲು ಬಿಸಿ ಅಂತನ್ನಿಸಿದರೂ ನಂತರ ಏನೂ ಗೊತ್ತಾಗದು.
ವಾಲಿಬಾಲ್: ರಾಮಾಯಣದ 'ವಾಲಿ' ಕಂಡುಹಿಡಿದ ಚೆಂಡು.
ತೀರ್ಪು: ಹುಡುಗಿಯರ ಅಭಿಪ್ರಾಯಗಳು.
ಹೆಲ್ಮೆಟ್ಟು: ನರಕದಲ್ಲಿ (ಹೆಲ್) ತಯಾರಿಸಿದ ಚಪ್ಪಲಿ.
ಹರಿದಕೋಟು
ಕನ್ನಡಿ ನನ್ನ ಅತ್ಯುತ್ತಮ ಗೆಳೆಯ. ನಾನು ಅದರ ಮುಂದೆ ಅತ್ತಾಗ ಅದೆಂದೂ ನಗಲಿಲ್ಲ.
- ಚಾರ್ಲಿ ಚಾಪ್ಲಿನ್