ವಿದ್ಯಾರ್ಥಿಗಳೇ, ನಿಮಗೆ ಸಾಕ್ಷ್ಯಚಿತ್ರ ನೋಡುವ ಅಭ್ಯಾಸ ಇದೆಯಾ? ಹೌದು ಎಂದಾದರೆ ಇಲ್ಲೊಂದಿಷ್ಟು ಅತ್ಯುತ್ತಮ ಡಾಕ್ಯುಮೆಂಟರಿಗಳ ವಿವರ ಇದೆ. ಬಿಡುವಿದ್ದಾಗ ವೀಕ್ಷಿಸಿ.
ಮ್ಯಾನ್ ಆನ್ ವೈರ್
ಹಗ್ಗದ ಮೇಲಿನ ನಡೆಗೆಗೆ ಹೆಸರುವಾಸಿಯಾದ ಸಾಹಸಿಗ ಫಿಲಿಪ್ ಪೆಟಿಟ್‌ನ ಕುರಿತ ಡಾಕ್ಯುಮೆಂಟರಿ ಇದು. ಆತ ಅದಕ್ಕಾಗಿ ನಡೆಸುವ ತಯಾರಿ, ಅವನ ಮನದೊಳಗಿನ ತುಮಲ, ಧೈರ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡಲಾಗಿದೆ.
ಸೆನ್ನಾ
ಬ್ರೆಜಿಲ್‌ನ ಫಾರ್ಮುಲಾ ಒನ್ ರೇಸ್ ಚಾಂಪಿಯನ್ ಅರಿಟನ್ ಸೆನ್ನಾ ಕುರಿತ ಡಾಕ್ಯುಮೆಂಟರಿ ಇದು. ಸೆನ್ನಾ ರೇಸ್‌ವೊಂದರಲ್ಲಿ ದುರಂತ ಸಾವು ಕಂಡ. ಅವನ ಗೆಲುವು, ರೇಸ್‌ವೇಳೆ ಆತ ತೋರುತ್ತಿದ್ದ ತಂತ್ರಗಾರಿಕೆ, ಆತನ ಪ್ರತಿಸ್ಪರ್ಧಿಗಳು ಹೂಡುತ್ತಿದ್ದ ಪ್ರತಿತಂತ್ರಗಳ ಚಿತ್ರಣವನ್ನು ನಿರ್ದೇಶಕ ಆಸಿಫ್ ಕಪಾಡಿಯ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಫೈರ್ ಇನ್ ಬ್ಯಾಬಿಲೋನ್
70ರ ದಶಕದಲ್ಲಿ ವಿಶ್ವಕ್ರಿಕೆಟ್ ಅನ್ನು ಆಳಿದ ಕೆರಿಬಿಯನ್ನರ ಕುರಿತ ಸಾಕ್ಷ್ಯಚಿತ್ರ ಇದು. ಆಸೀಸ್‌ನ ಪಾರುಪತ್ಯವನ್ನು ಬದಿಗೊತ್ತಿ ಅವರು ಹೇಗೆ ವಿಶ್ವಕ್ರಿಕೆಟ್‌ನ ದಿಗ್ಗಜರಾಗಿ ಬೆಳೆದರು ಎನ್ನುವ ಕುರಿತು ಮೈದಾನದ ಒಳಗೆ ಮತ್ತು ಹೊರಗಿನ ವಿವರಗಳನ್ನು ಈ ಸಾಕ್ಷ್ಯಚಿತ್ರ ನೀಡುತ್ತದೆ. ಕ್ರಿಕೆಟ್ ಕುರಿತು ಆಸಕ್ತಿ ಇರುವವರಿಗೆ ಇಷ್ಟವಾಗಬಹುದು.