ಯುವಜನ/ಮಕ್ಕಳು

ನೆನಪೇ ಥ್ಯಾಂಕ್ಯೂ

ಕಾಲೇಜು ಲೈಫೇ ಹಾಗೆ. ಇಲ್ಲಿ ನಡೆಯುವ ಸಣ್ಣ ಸಣ್ಣ ಸಿಹಿ, ಕಹಿ ಘಟನೆಗಳಿಗೂ ನಮ್ಮ ನೆನಪಿನಲ್ಲೊಂದು ಶಾಶ್ವತ ಜಾಗ ಇದ್ದೇ ಇರುತ್ತದೆ. ಮೊದಲ ಬಾರಿಗೆ ಕಾಲೇಜು ಮೆಟ್ಟಿಲು ಹತ್ತಿದ ದಿನದಿಂದ ಹಿಡಿದು ಕೊನೆಯ ದಿನ ಗುನುಗುವ ಕಭಿ ಅಲ್ವಿದ ನಾ ಕೆಹನಾ... ಹಾಡಿನ ವರೆಗಿನ ಈ ಸವಿನೆನಪಿನ ಪಯಣ ನಿಜಕ್ಕೂ ರೋಮಾಂಚನಕಾರಿ. ಅದರಲ್ಲೂ ಡ್ರಿಗ್ರಿ ಲೈಫ್‌ನ ಆ ಮೂರು ವರ್ಷ ನೆನಪಿಸಿಕೊಂಡಾಗಲೆಲ್ಲಾ ಮನಸ್ಸು ಹಕ್ಕಿಯಾಗಿ ಬಿಡುತ್ತದೆ. ಪುಳಕಗೊಳ್ಳುತ್ತದೆ.
ರ್ಯಾಗಿಂಗ್ ಭಯವನ್ನು ಮನದಲ್ಲಿ ತುಂಬಿಕೊಂಡು ಕಾಲೇಜು ಮೆಟ್ಟಿಲು ಹತ್ತುವಾಗ ಪರಿಚಯದವರೇನಾದರೂ ಎದುರಾದಾಗ ಆಗುವ ಖುಷಿ, ಹೊಸ ಉಪನ್ಯಾಸಕರು, ಹೊಸ ಗೆಳೆಯರು, ಪ್ರಿನ್ಸಿಪಾಲರ ಭಯದ ನೆರಳಿನಲ್ಲೇ ನಡೆಯುವ ಕೀಟಲೆಗಳು... ಅಯ್ಯೋ ಮೊದಲ ವರ್ಷ ಎಷ್ಟು ಬೇಗ ಕಳೆದು ಹೋಗಿಬಿಡುತ್ತದಲ್ವಾ?
ಎರಡನೇ ವರ್ಷಕ್ಕೆ ಕಾಲಿಟ್ಟಾಗ ನಮ್ಮನ್ನು ಸೀನಿಯಾರಿಟಿಯ ಗುಮ್ಮ ಆವರಿಸಿಕೊಂಡು ಬಿಟ್ಟಿರುತ್ತದೆ. ನಮ್ಮ ತುಂಟಾಟಕ್ಕೆ ಸ್ವಲ್ಪ ಮೊನಚು ಸಿಕ್ಕಿರುತ್ತದೆ. ಆ ತುಂಟಾಟಕ್ಕೆ ಉಪನ್ಯಾಸಕರಿಂದ ಸಿಗುವ ಬೈಗುಳಗಳ ಸುರಿಮಳೆ, ಆ ಬೈಗುಳದಿಂದ ಮೂಡಿದ ಬೇಸರ ದೂರ ಮಾಡಲು ಫ್ರೆಂಡ್ಸ್ ಜೊತೆಗೂಡಿ ಮಾಡುವ ಪಾರ್ಟಿ... ಇದರದೊಂದಿಗೆ ಎನ್‌ಎಸ್‌ಎಸ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಟ್ಯಾಲೆಂಟ್ಸ್‌ಡೇ, ಕ್ರೀಡಾದಿನ... ಇಂಥ ಖುಷಿ ಬೇರೆಲ್ಲಿ ಸಿಗುತ್ತದೆ ಹೇಳಿ. ಇದಕ್ಕೇ ಅಲ್ವಾ ಕಾಲೇಜು ಲೈಫನ್ನು 'ಗೋಲ್ಡನ್ ಲೈಫ್‌' ಅನ್ನೋದು. ಗೆಳೆಯರು, ಗೆಳತಿಯರ ಸಂಗಡ ವರ್ಷಗಳು ತಿಂಗಳಿನಂತೆ ಉರುಳುತ್ತವೆ. ಅಂತಿಮ ಪದವಿಯ ಕೊನೆಯ ದಿನಗಳಲ್ಲಿ ಈ ಮೂರು ವರ್ಷದ ನೆನಪುಗಳನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸೇಕೋ ಭಾರವಾಗುತ್ತದೆ. ಜೀವನದಲ್ಲಿ ಇಂಥ 'ಗೋಲ್ಡನ್ ಲೈಫ್‌' ಮತ್ತೆ ಮತ್ತೆ ಬರಬಾರದೆ ಎಂದು ಗಟ್ಟಿಯಾಗಿ ಕೂಗಿ ಹೇಳಿಬಿಡಬೇಕೆಂದೆನಿಸುತ್ತದೆ.

-ಪಾವನ ಸಾಲ್ಯಾನ್, ತೃತೀಯ ಪತ್ರಿಕೋದ್ಯಮ ವಿಭಾಗ, ಆಳ್ವಾಸ್ ಕಾಲೇಜು, ಮೂಡುಬಿದಿರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!