ಯುವಜನ/ಮಕ್ಕಳು

SMILE ಪ್ಲೀಸ್!

ಕೈಯಲ್ಲಿ ಪದವಿ ಇಲ್ಲ, ಸರಿಯಾದ ನೌಕರಿ ಸಿಕ್ತಾ ಇಲ್ಲ. ಬಿಗ್ ಬಜಾರ್, ಮಾಲ್ ಗಳಲ್ಲಿ...

ಕೈಯಲ್ಲಿ ಪದವಿ ಇಲ್ಲ, ಸರಿಯಾದ ನೌಕರಿ ಸಿಕ್ತಾ ಇಲ್ಲ. ಬಿಗ್ ಬಜಾರ್, ಮಾಲ್ ಗಳಲ್ಲಿ ಕೆಲಸ ಖಾಲಿ ಇದೆ... ಆದ್ರೆ ಅನುಭವ, ತರಬೇತಿ ಇಲ್ಲದೆ ಅವರು ಹತ್ರಕ್ಕೂ ಸೇರಿಸಿಕೊಳ್ತಿಲ್ಲ...
ಇದು ಬೆಂಗಳೂರಿನ ಬಹುತೇಕ ಬಡ ನಿರುದ್ಯೋಗಿ ಯುವಜನರ ಸಮಸ್ಯೆ. ಒಂದು ರೀತಿಯಲ್ಲಿ ಈ ಯುವಜನರದ್ದು ಗೊಂದಲದ ಬದುಕು. ಕೆಲವರಿಗೆ ಆ ಕಡೆ ಉತ್ತಮ ಅಂಕವೂ ಇರಲ್ಲ, ಇನ್ನು ಅಂಕ ಪಡೆದವರಿಗೆ ಮನೆಯಲ್ಲಿರುವ ಆರ್ಥಿಕ ಸಂಕಷ್ಟ ಶಿಕ್ಷಣ ಮುಂದುವರಿಸಲು ಬಿಡಲ್ಲ. ಕೆಲಸಕ್ಕೆ ಹೋಗೋಣ ಅಂದ್ರೆ ಇಂಗ್ಲಿಷ್ ಸರಿಯಾಗಿ ಬರಲ್ಲ...!
ಬಡ ಯುವಜನರ ಇಂಥ ಸಮಸ್ಯೆ ಪರಿಹರಿಸಲೆಂದೇ ಸ್ಮೈಲ್ ಫೌಂಡೇಷನ್ ಎನ್ನುವ ಸಂಸ್ಥೆ ಟ್ವಿನ್ ಇ- ಲರ್ನಿಂಗ್ (ಎಸ್ಟಿಇಪಿ) ಅನ್ನೋ ತರಬೇತಿ ಕಾರ್ಯಕ್ರಮ ಆರಂಭಿಸಿದೆ. ಇದು ಬೆಂಗಳೂರಿನಂಥ ಮಹಾನಗರಗಳ ಬಡ ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಿದ ಕಾರ್ಯಕ್ರಮ.
ಉದಾರೀಕರಣದಿಂದಾಗಿ ಸೇವಾ ವಲಯ ಮತ್ತು ರಿಟೇಲ್ ವಲಯದಲ್ಲಿ ಭಾರಿ ಕ್ರಾಂತಿಯೇ ಆಗಿದೆ. ಈ ಕ್ಷೇತ್ರ ಸಾಕಷ್ಟು ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ. ಆದರೆ, ಈ ಕ್ಷೇತ್ರದ ಬೇಡಿಕೆಯನ್ನು ಪೂರೈಸುವಷ್ಟು ತರಬೇತಿ ಪಡೆದ ನೌಕರರಿಲ್ಲ. ತರಬೇತಿ ಪಡೆಯೋಣ ಅಂದ್ರೆ ಯುವಜನರಿಗೆ ಆರ್ಥಿಕ ಸಮಸ್ಯೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸ್ಮೈಲ್ ಫೌಂಡೇಷನ್ ಬಡ ನಿರುದ್ಯೋಗಿ ಯುವಜನರಿಗೆ ಅಗತ್ಯ ತರಬೇತಿ ನೀಡುವ ಮೂಲಕ ಅವರಿಗೊಂದು ಹೊಸ ಬದುಕು ಕಲ್ಪಿಸುವ ಕೆಲಸ ಮಾಡುತ್ತಿದೆ.

ಶಿಕ್ಷಕರಿಗೆ ಅಗತ್ಯ ತರಬೇತಿ
ಸ್ಮೈಲ್ ಫೌಂಡೇಷನ್ ಯುವಜನರಿಗೆ ನೇರವಾಗಿ ತರಬೇತಿ ನೀಡುವುದಿಲ್ಲ. ಬದಲಾಗಿ ಆಯಾ ಪ್ರದೇಶದಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿರುವ ಎನ್ಜಿಒ ಮೂಲಕ ತನ್ನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತದೆ. ಎನ್ಜಿಒಗೆ ಟ್ರೈನಿಂಗ್ ಸೆಂಟರ್ ನಡೆಸಲು ಅಗತ್ಯವಾಗಿ ಬೇಕಿರುವ ಹಣಕಾಸು, ಮೂಲಸೌಲಭ್ಯ, ಆಡಳಿತಾತ್ಮಕ ಬೆಂಬಲ, ತರಬೇತಿ ಎಲ್ಲದರ ಜವಾಬ್ದಾರಿಯನ್ನೂ ಸ್ಮೈಲ್ ಫೌಂಡೇಷನ್ ವಹಿಸಿಕೊಳ್ಳುತ್ತದೆ. ಫೌಂಡೇಷನ್ನ ಪ್ರತಿನಿಧಿಗಳ ಸಮ್ಮುಖದಲ್ಲೇ ಶಿಕ್ಷಕರ ಆಯ್ಕೆ ಸಂದರ್ಶನ ನಡೆಸಲಾಗುತ್ತದೆ. ಅವರಿಗೆ ಅಗತ್ಯವಾದ ಓರಿಯೆಂಟೇಷನ್ ಪ್ರೋಗ್ರಾಮ್, ಆರು ತಿಂಗಳಿಗೊಮ್ಮೆ ತರಬೇತಿ ನೀಡಲಾಗುತ್ತದೆ. ವಾರಕ್ಕೊಮ್ಮೆ ತರಬೇತಿಯ ಗುಣಮಟ್ಟವನ್ನು ಫೌಂಡೇಷನ್ ಪರಿಶೀಲಿಸುತ್ತದೆ. ಈ ಮೂಲಕ ಎನ್ಜಿಒ ಕೂಡ ಸ್ವತಂತ್ರವಾಗಿ ಸಮರ್ಥವಾಗಿ ಕೆಲಸ ಮಾಡಲು ಫೌಂಡೇಷನ್ ಅನುವು ಮಾಡಿಕೊಡುತ್ತದೆ.

ಕೆಲಸದ ನಡುವೆ ತರಗತಿ!
ಸಾಮಾನ್ಯವಾಗಿ ಈ ರೀತಿ ತರಬೇತಿ ಪಡೆಯಲು ಮುಂದೆ ಬರುವ ಯುವಜನರು ಬಡಕುಟುಂಬದ ಹಿನ್ನಲೆಯವರು. ಬಹುತೇಕರು ಕೂಲಿಕಾರ್ಮಿಕರ ಮಕ್ಕಳು. ಹಾಗಾಗಿ ಪಾರ್ಟ್ ಟೈಂ ಕೆಲಸದ ನಡುವೆ ಈ ತರಬೇತಿ ಪಡೆಯಲು ಅವರು ಆಸಕ್ತಿ ತೋರುತ್ತಾರೆ. ಹಾಗಾಗಿ ಅವರ ಅನುಕೂಲಕ್ಕೆ ತಕ್ಕಂತೆ ಬೆಳಗ್ಗೆ 9ರಿಂದ 12, ಮಧ್ಯಾಹ್ನ 12ರಿಂದ 3, ಸಂಜೆ 3ರಿಂದ 6ರ ವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಇದೊಂದು ಆರು ತಿಂಗಳ ತರಬೇತಿಯಾಗಿದ್ದು ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಹೇಗೆ ಕಾರ್ಯಾಚರಣೆ?
ಹಿಂದುಳಿದ ಪ್ರದೇಶವೊಂದರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರ ಮೂಲಕ ಮನೆ ಮನೆಗೆ ಕರಪತ್ರ ಹಂಚಿ ಅಂಕಿ- ಅಂಶಗಳನ್ನು ಸಿದ್ಧಪಡಿಸಲಾಗುತ್ತದೆ. ನಂತರ ಅರ್ಹ ಯುವಜನರನ್ನು ಗುರುತಿಸಿ ಅವರ ಮನೆಗೆ ತೆರಳಿ ತರಬೇತಿ ಪ್ರಾಮುಖ್ಯತೆಯನ್ನು ತಿಳಿ ಹೇಳಲಾಗುತ್ತದೆ. ಪೋಷಕರಿಗೂ ತರಬೇತಿಯ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತದೆ. ನಂತರ ನಿರ್ದಿಷ್ಟ ಎನ್ಜಿಒ ಮೂಲಕ ನುರಿತ ಶಿಕ್ಷಕರಿಂದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಸ್ಮೈಲ್ ಫೌಂಡೇಷನ್ ನೇರವಾಗಿ ಉದ್ಯೋಗಾವಕಾಶ ಕೊಡಿಸುವ ಕೆಲಸ ಮಾಡದಿದ್ದರೂ ಶಿಕ್ಷಕರ ಮೂಲಕ ವಿವಿಧ ಕಂಪನಿಗಳನ್ನು ಸಂಪರ್ಕಿಸಲು, ಆ ಕಂಪನಿಗಳು ತರಬೇತಿಗೆ ಬಂದು ಅರ್ಹ ಅಭ್ಯರ್ಥಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲು ನೆರವು ನೀಡುತ್ತದೆ. ತರಬೇತಿ ಪಡೆದ ಬಹುತೇಕರಿಗೆ ಉದ್ಯೋಗಾವಕಾಶ ಸೌಲಭ್ಯ ಸಿಕ್ಕಿದೆ ಎನ್ನುತ್ತಾರೆ ಸ್ಮೈಲ್ ಫೌಂಡೇಷನ್ನ ಪ್ರೋಗ್ರಾಮ ಮ್ಯಾನೇಜರ್ ರಾಧಾಕೃಷ್ಣ ಪ್ರದೀಪ್.
ಮಾಹಿತಿಗಾಗಿ- 9902984341 (ದೇವರಾಜು), 9902965956 (ಸುಧಾ)

ವಿದ್ಯಾರ್ಹತೆ ಇಲ್ಲ
ಫೌಂಡೇಷನ್ನ ಮುಖ್ಯ ಗುರಿ ಎಲ್ಲ ಯುವಜನರಿಗೆ ಉದ್ಯೋಗ ಒದಗಿಸುವುದು. ಹಾಗಾಗಿ ಈ ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ ಇಂತಿಷ್ಟೇ ಅನ್ನುವ ನಿಯಮವೇನೂ ಇಲ್ಲ. ಏಳನೇ ತರಗತಿ ಉತ್ತೀರ್ಣರಾದವರು, ಎಸ್ಸೆಸ್ಸೆಲ್ಸಿ ಅನುತ್ತೀರ್ಣರಾದವರಿಗೂ ತರಬೇತಿ ನೀಡಲಾಗುತ್ತದೆ. ಕಂಪನಿ ಸಂದರ್ಶನದ ವೇಳೆ ಅಭ್ಯರ್ಥಿಗಳ ವಿದ್ಯಾರ್ಹತೆಗಿಂತ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ನಾವು ಖುದ್ದಾಗಿ ಉದ್ಯೋಗದಾತರಲ್ಲಿ ಮನವಿ ಮಾಡುತ್ತೇವೆ.
-  ರಾಧಾಕೃಷ್ಣ ಪ್ರದೀಪ್

ಏನೇನು ತರಬೇತಿ?

  •     ಬೇಸಿಕ್ ಕಂಪ್ಯೂಟರ್
  •     ಪರ್ಸನಾಲಿಟಿ ಡೆವಲಪ್ಮೆಂಟ್
  •     ಸ್ಪೋಕನ್ ಇಂಗ್ಲಿಷ್
  •     ರಿಟೇಲ್ ಸೆಕ್ಟರ್ ಟ್ರೈನಿಂಗ್
ನೇಮಕ ಅವಕಾಶ
- ಅಜಿತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!