ಮಾನಸಿಕ ಆರೋಗ್ಯ ಬೇಕಾ? ಹಾಗಿದ್ದರೆ ನೀವು ಯಾರೋ ಸಲ್ಲದವರ ಜತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕಿಂತ ಒಬ್ಬಂಟಿಯಾಗಿ ಇರುವುದೇ ಲೇಸು ಎನ್ನುತ್ತಾರೆ ಮನೋವಿಜ್ಞಾನಿಗಳು. ಅಸುರಕ್ಷಿತ ಅಥವಾ ಪ್ರತಿಯೊಂದಕ್ಕೂ ತಗಾದೆ ತೆಗೆಯುವ ಸಂಗಾತಿ ಹೊಂದಿರುವವರು ಬಹುಬೇಗ ಡಿಪ್ರೆಷನ್‌ಗೆ ಬೀಳುತ್ತಾರಂತೆ. ಅದು ಗೆಳೆತನವೇ ಇರಲಿ ಅಥವಾ ದಾಂಪತ್ಯವೇ ಇರಲಿ. ಒಟ್ಟಾರೆ ಸಂಬಂಧ ಯಾವುದೇ ಇರಲಿ. ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಇಲ್ಲ ಎಂದ ಮೇಲೆ ಅದರಿಂದ ದೂರವೇ ಉಳಿಯುವುದು ಉತ್ತಮವಂತೆ.