ಯುವಜನ/ಮಕ್ಕಳು

ಅವಳಿಲ್ಲದ ಹೊತ್ತು

ಆಕೆ ನಾನು ಡಿಗ್ರಿ ಸೇರಿದ ಹೊಸದರಲ್ಲಿ ದಾರಿಯಲ್ಲಿ ಮಾತಿಗೆ ಸಿಕ್ಕಿದ್ದಳು. ಆಗ್ಲೇ ನನಗೆ ಗೊತ್ತಾದದ್ದು ನಾವಿಬ್ಬರೂ ಒಂದೇ ಕಾಲೇಜು, ಒಂದೇ ತರಗತಿ ಅಂತ. ಹೊಸದಾಗಿ ಕಾಲೇಜಿಗೆ ಸೇರಿದ ಭಯವಿದ್ದುದರಿಂದ ಈಕೆಯ ಪರಿಚಯ ಸ್ವಲ್ಪ ಧೈರ್ಯ ತಂದಿತ್ತು. ಜತೆಗೆ ಅವಳು ನಮ್ಮ ಪಕ್ಕದೂರಿನವಳು. ಇಷ್ಟು ಸಾಕಿತ್ತು ನಾವು ಆತ್ಮೀಯರಾಗಲು.
ಮರುದಿನದಿಂದಲೇ ಅವಳು ನಮ್ಮನೆಗೆ ಬರುವುದು, ಅಲ್ಲಿಂದ ನಾವು ಜತೆಯಾಗಿ ಕಾಲೇಜಿಗೆ ಹೆಜ್ಜೆಹಾಕುವುದು ಮಾಮೂಲಿಯಾಯ್ತು. ಒಂದೆರಡು ದಿನದಲ್ಲಿ ನಾವಿಬ್ಬರು ಎಷ್ಟು ಆತ್ಮೀಯರಾಗಿ ಬಿಟ್ಟಿದ್ದೆವೆಂದರೆ ಆಕೆ ತನ್ನ ನೋವನ್ನೆಲ್ಲಾ ನನ್ನಲ್ಲಿ ತೋಡಿಕೊಂಡಿದ್ದಳು. ಆಕೆ ಇದ್ದದ್ದು ದೊಡ್ಡಪ್ಪನ ಮನೆಯಲ್ಲಿ. ಊರಲ್ಲಿ ಲೋಟ ಕೂಡ ಎತ್ತಿಡದ ಈ ಹುಡುಗಿ ದೊಡ್ಡಪ್ಪನ ಮನೆಯಲ್ಲಿ ಮಾತ್ರ ಎಲ್ಲಾ ಕೆಲಸ ಮಾಡಬೇಕಿತ್ತು. ಪಾಪ... ದೊಡ್ಡಮ್ಮ ತುಂಬಾ ಕಾಟ ಕೊಡುತ್ತಿದ್ದರಂತೆ. ಆದರೆ, ಈ ವಿಚಾರ ದೊಡ್ಡಪ್ಪನಿಗಾಗಲಿ, ಊರಲ್ಲಿರುವ ಅಪ್ಪ- ಅಮ್ಮನಿಗಾಗಲಿ ಗೊತ್ತೇ ಇರಲಿಲ್ಲ. ಈಕೆ ಹೇಳಿಯೂ ಹೇಳಿರಲಿಲ್ಲ.
ಇದಾಗಿ 13, 14 ದಿನಗಳಾಗಿರಬಹುದು. ನಿತ್ಯ ಬೆಳಗ್ಗೆ ನಮ್ಮನೆ ಕಡೆಗೆ ಬರುತ್ತಿದ್ದ ಆಕೆ ಒಂದು ದಿನ ಕಾಣಿಸಲೇ ಇಲ್ಲ. ಕಾದು ಕಾದು ಸುಸ್ತಾದ ನಾನು ಎಲ್ಲೋ ಹುಷಾರ್ ಇಲ್ಲವೇನೋ ಅಂದುಕೊಂಡು ಒಬ್ಬಳೇ ಕಾಲೇಜಿಗೆ ಹೋಗಿದ್ದೆ. ಇದಾದ ಮರುದಿನವೇ ನಮ್ಮ ಊರಲ್ಲಿ ಹುಡುಗಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಆಕೆ ನಮ್ಮ ತಂದೆಯ ಹೆಸರು ಬರೆದಿಟ್ಟಿದ್ದಾಳಂತೆ ಅನ್ನುವ ಗಾಳಿ ಸುದ್ದಿ... ತಂದೆಗೆ ಅನುಮಾನ ಬಂದು ನನಗೆ ಫೋನ್ ಮಾಡಿ ವಿಚಾರಿಸಿದರು. ಆಕೆ ನಿನ್ನ ಗೆಳತಿಯೇ ಇರಬೇಕು ಅಂದಿದ್ದರು. ಆದರೆ ನಾನು ಮಾತ್ರ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಪುಕ್ಕಲು ಹುಡುಗಿಯಲ್ಲ, ಧೈರ್ಯವಂತೆ ಅಂದಿದ್ದೆ. ಇದಾದ ಸ್ವಲ್ಪ ಸಮಯದಲ್ಲೇ ನಮ್ಮನೆ ಮುಂದೆ ಪೊಲೀಸರು ಪ್ರತ್ಯಕ್ಷರಾದರು. ಅವರು ವಿಚಾರಿಸಿದಾಗಲೇ ಗೊತ್ತಾದದ್ದು ಆತ್ಮಹತ್ಯೆ ಮಾಡಿಕೊಂಡಾಕೆ ನನ್ನ ಗೆಳತಿ ಅಂತ. ನಾನು ಪೊಲೀಸರ ಜತೆಗೆ ಹೋಗಿ ಆಕೆಯ ಶವ ಗುರುತಿಸಿದೆ. ಅಸಲಿಗೆ ಪೊಲೀಸರು ನಮ್ಮನೆಗೆ ಬಂದದ್ದು ಆಕೆಯ ಪುಸ್ತಕದಲ್ಲಿದ್ದ ವಿಳಾಸದ ಆಧಾರದ ಮೇಲೆ. ಅದು ನಮ್ಮ ಮನೆಯ ವಿಳಾಸವಾಗಿತ್ತು. ಅದರಲ್ಲಿ ನಮ್ಮ ತಂದೆಯ ಹೆಸರಿತ್ತು. ಪೊಲೀಸರು ನಮ್ಮ ತಂದೆಯನ್ನು ಆಕೆಯ ಪ್ರಿಯಕರ ಎಂದೇ ಭಾವಿಸಿದ್ದರು. ನಾನು ಆಕೆಗೆ ಕೊಟ್ಟಿದ್ದ ನೋಟ್ಸಿನಲ್ಲಿ ನನ್ನ ಮನೆ, ತಂದೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ ಬರೆದಿದ್ದೆ. ಇದಾಗಿ ವರ್ಷಗಳುರುಳಿವೆ. ಇಂದಿಗೂ ಆಕೆಯ ಮುಖ ನನ್ನ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ ಆ ಗೆಳತಿ ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಳು ಎನ್ನುವ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.

- ಲೀಲಾವತಿ ಎನ್.
leelavathi_n@yahoo.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!