ವಿಧಿ ಬರಹ ಬದಲಾಯಿಸಿ
ಕಟ್ಟಬಹುದೆ ಹೊಸ ಬದುಕು
ಓದಿ ಬಿಡಬಹುದೇ ಒಮ್ಮೆಲೆ
ಸ್ತೋತ್ರದ ಕೊನೆಯ ಸಾಲು
ನೋವಿನ ಕಿವಿಗೆ ಕೇಳಿಸೀತೆ
ಕವಿಯ ನೋವು-ವಿರಹಗೀತೆ
ಆದ್ಯತೆಯ ಕುದುರೆ ಏರಿದವನಿಗೆ
ಜಾತಕ ಕುಂಡಲಿಗಳ ಚಿಂತೆ ಏಕೆ
ಕಂಕುಳಿನಡಿಯ ಕುರುವಿಗೆ
ಗುರುಬಲವಿದೆಯೆಂದು
ಹಚ್ಚದಿರೆ ಬೆಣ್ಣೆ
ಮತ್ತದೇ ಹುಣ್ಣುಗಳ ಕಿರಿಕಿರಿ
ಭಾವಕೆ ಭಾಷೆಯ ತೊಡಿಸಲಾಗದೆ
ಒದ್ದಾಡುತ್ತಿದೆ ಎನ್ನಿ ಮನ
ಪ್ರತಿಷ್ಠೆಯ ಕಾಳಗದಲಿ
ಸಾಹಿತ್ಯಕ್ಕೆಂದೂ 'ಬರ' ಬೇಡ
ತನ್ನ ನೆರಳ ಹುಡುಕ ಹೊರಡವಗೆ
ಕಂಡೀತೆ ಮನದೊಳಗಿನ ಹುಣ್ಣು