ಮುಂಚೆ ಚಾಲ್ತಿಯಲ್ಲಿದ್ದ ಗಾದೆ: ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?
ಈಗಿನ ಕಾಲಮಾನದ ಗಾದೆ: ಊರಿಗೆ ಬಂದವ ಬಾರ್ಗೆ ಬರದೇ ಇರ್ತಾನಾ?
=
ಸೇಲ್ಸ್ಮ್ಯಾನ್: ಸಾ... ನಿಮ್ಗೆ ಈ ಪೌಡರ್ ಬೇಕಾ..?
ರಾಂಪ: ಇದು ಯಾರಿಗೆ?
ಸೇಲ್ಸ್ಮ್ಯಾನ್: ಇಲಿಗಳಿಗೆ ಸಾರ್..!
ರಾಂಪ: ಬೇಡ... ಬೇಡ... ಇವತ್ತು ಪೌಡರ್ ಕೊಟ್ರೆ ನಾಳೆ ಅವುಗಳು ಲಿಪ್ಸ್ಟಿಕ್ ಕೇಳ್ಬಹುದು..!
=
ಗುಂಡ: ಒಂದು ತಿಂಗಳ ನಂತರ ನಾನು ವರದಕ್ಷಿಣೆ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇನೆ.
ತಿಮ್ಮ: ಒಂದು ತಿಂಗಳು ಬಿಟ್ಟು ಯಾಕೆ? ಇಂದಿನಿಂದಲೇ ಶುರು ಮಾಡು.
ಗುಂಡ: ಯಾಕೆಂದರೆ, ಈ ತಿಂಗಳು ನನ್ನ ಮತ್ತು ಅದಾದ ಹತ್ತು ದಿನದಲ್ಲಿ ನನ್ನ ಸಹೋದರನ ಮದುವೆ ಇದೆ.
=
ಗುಂಡಿ: ಈ ವಾರ ಫುಲ್ ಸಿನಿಮಾಗೆ ಹೋಗೋಣಾ......ಬರುವ ವಾರ ಫುಲ್ ಶಾಪಿಂಗ್ ಮಾಡೋಣ...
ಗುಂಡ: ಅದರ ಮುಂದಿನ ವಾರ ಫುಲ್ ದೇವಸ್ಥಾನಕ್ಕೆ ಹೋಗೋಣಾ.
ಗುಂಡಿ: ಯಾಕೆ?
ಗುಂಡ: ಭಿಕ್ಷೆ ಬೇಡೋಕೆ!
=
ಗುಂಡ ಫೋಟೋ ತೆಗ್ಸೋಕೆ ಸ್ಟುಡಿಯೋಕೆ ಹೋದ...
ಗುಂಡ: ಸರ್ ನಿಮ್ಮಲ್ಲಿ... ಪಾಸ್ಪೋರ್ಟ್ ಸೈಜ್ ಫೋಟೋನಲ್ಲಿ ಚಪ್ಪಲಿ ತನಕ ಫೋಟೋ ತೆಗೆಯೋಕಾಗುತ್ತಾ?
ಅಂಗಡಿ ಮಾಲೀಕ: ಬರುತ್ತೆ, ಆದ್ರೆ ನೀವು ಚಪ್ಪಲಿ ತಲೆಮೇಲೆ ಇಟ್ಕೊಂಡ್ರೆ ಮಾತ್ರ!
=
ಕಬ್ಬನ್ ಪಾರ್ಕಿನ ಮರಗಳ ಕಾಡಿನ ನಡುವೆ ಚೆಲುವೆ, ಚೆಲುವರಿಬ್ಬರೂ ಕೈಯಲ್ಲಿ ಕೈಹಿಡಿದು ಮಾತಾಡ್ತಾ ಕುಳಿತಿರ್ತಾರೆ...
ಚೆಲುವೆ: ಈಗ ಏನು ಮಾಡ್ತಾ ಇದ್ದಿಯಾ, (ತಡೆದು) ಕೈ ಹಿಡ್ಕೊಂಡಿದ್ದೀನಿ ಅನ್ಬೇಡಾ. ಕೆಲಸ ಏನ್ ಮಾಡ್ತಾ ಇದ್ದೀಯಾ?
ಚೆಲುವ: 'ಕನ್ನಡಪ್ರಭ'ದಲ್ಲಿ ಕೆಲಸ ಮಾಡ್ತಿದ್ದೆ, ಈಗ ಬಿಟ್ಬಿಟ್ಟೆ.
ಚೆಲುವೆ: ಓ ಮೈ ಗಾಡ್! (ಕೈ ಸೆಳೆದುಕೊಂಡು) ಅಂಥ ಉತ್ತಮವಾದ ಕೆಲಸ ಯಾಕೆ ಬಿಟ್ಟೆ?
ಚೆಲುವ: ಅಯ್ಯೋ, ಯಾರಿಗೆ ಬೇಕು ದಿನಾ ಬೆಳಗ್ಗೆ ಎದ್ದು ಪೇಪರ್ ಹಾಕುವ ಕೆಲಸ! (ಹುಡುಗಿ ಪರಾರಿ)