ಯುವಜನ/ಮಕ್ಕಳು

ಉತ್ತರಾಧಿಕಾರಿ

ಲಕ್ಷ್ಮಿ ಬರ್ಕ್‌ಲಿ ರಮೇಶ್ ಕಿರಗಂದೂರು, ಮಂಡ್ಯ
ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಅಂತಾರೆ. ಆದರೂ ದೇವರನ್ನು ಹುಡುಕಿಕೊಂಡು ದೇಗುಲಗಳಿಗೆ ಹೋಗುತ್ತಾರಲ್ಲ ಏಕೆ?
- ಭಕ್ತರನ್ನು ಕಣ್ತುಂಬಿಸಿಕೊಳ್ಳಲು!

ವಿ. ಹೇಮಂತ್‌ಕುಮಾರ್, ಬೆಂಗಳೂರು.
ಹೆಂಡತಿ ಗೊರಕೆ ಹೊಡೆಯುತ್ತಾ ಮಲಗಿದರೆ ಗಂಡನಾದವನು ಏನು ಮಾಡಬೇಕು?
- ಪೊರಕೆ ಹಿಡಿದು ಮನೆಯೆಲ್ಲ ಕ್ಲೀನ್ ಮಾಡಬೇಕು!

ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ.
ರಂಭೆ, ಊರ್ವಶಿ, ಮೇನಕೆಯರು ನಿಮ್ಮ ಮುಂದೆ ಪ್ರತ್ಯಕ್ಷರಾಗಿ ಐ ಲವ್ ಯೂ ಎಂದರೆ ಏನ್ಮಾಡ್ತೀರಿ?
- ಐ ಲವ್ ಯೂ ತ್ರೀ ಅಂತೀನಿ!

ಬಿ.ಎಸ್. ನಾರಾಯಣಸ್ವಾಮಿ, ಬೋಧನ ಹೊಸಹಳ್ಳಿ.
ಉರಿ ಬಿಸಿಲಿಗೆ ತಂಗಾಳಿಯಾದಳು,ಕೊರೆವ ಚಳಿಗೆ ಕಂಬಳಿಯಾದಳು, ಸುರಿವ ಮಳೆಗೆ ಕೊಡೆಯಾದಳು, ಈಗವಳು ಮೌನವಾಗಿದ್ದಾಳಲ್ಲ ಏಕೆ?
- ಹಾಗಾದರೆ ನಿಮಗೀಗ 'ಆಪತ್ಕಾಲ!'

ಕೆ.ಎಂ. ಲಿಂಗರಾಜು, ನಂಜನಗೂಡು
67ರ ದಿಗ್ವಿಜಯಸಿಂಗ್ ಅಷ್ಟು ಸಾಧಿಸುತ್ತಿರುವಾಗ 17ರ ಪ್ರಾಯದವರು ಏನು ಸಾಧಿಸಬೇಕು?
- ದಿಗ್ವಿಜಯರ ಅಭಿ'ಪ್ರಾಯ' ಕೇಳಿ!

ಪಿ.ಜೆ. ರಾಘವೇಂದ್ರ, ಮೈಸೂರು.
ಪ್ರೇಮಕುಮಾರಿಗೆ ಸಿದ್ದರಾಮಣ್ಣನೇ ಬಾಡಿಗೆ ಮನೆ ಕೊಡಿಸಬೇಕಂತೆ?
- ಅದೂ 'ಶ್ರೀರಾಮ ನಿಲಯ'ವೇ ಆಗಬೇಕಂತೆ!

ನೇರಲಗುಡ್ಡ ಶಿವಕುಮಾರ್, ಶಿರಾ.
ಸಕ್ಕರೆ ಸಿಹಿಗೂ, ಬೆಲ್ಲದ ಸಿಹಿಗೂ ವ್ಯತ್ಯಾಸವೇನು?
- ಸಕ್ಕರೆ ಸಿಹಿ ಇರುವೆಗಳಿಗೆ ಇಷ್ಟ, ಬೆಲ್ಲದ ಸಿಹಿ ಗೊದ್ದಗಳಿಗೆ ಇಷ್ಟ!

ಬೋ.ಪಾ. ವೆಂಕಟೇಶ್, ಬೆಂಗಳೂರು.
ಚಿತೆಗೂ, ಚಿಂತೆಗೂ ವ್ಯತ್ಯಾಸವೇನು?
- ಚಿತೆ ಮೇಲೆ ಬಾಡಿ ಇರುತ್ತೆ. ಚಿಂತೆ ಬಾಡಿ ಒಳಗೆ ಇರುತ್ತೆ!

=  ಎಸ್.ವಿ. ಪದ್ಮನಾಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!