ಪ್ರಧಾನ ಸುದ್ದಿ

ತಗ್ಗಿದ ಮಳೆ; ಇಳಿದ ಪ್ರವಾಹ

ಕ.ಪ್ರ. ವಾರ್ತೆ,  ಬೆಂಗಳೂರು,  ಜು.5-
ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಇಳಿಮುಖವಾಗಿದೆ. ರೌದ್ರಾವತಾರ ತಾಳಿದ್ದ ನದಿಗಳು ಶಾಂತವಾಗಿದ್ದು, ಪ್ರವಾಹ ತಗ್ಗಿದೆ. ಕಬಿನಿ ಜಲಾಶಯದಿಂದ ಶುಕ್ರವಾರ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ನಂಜನಗೂಡಿನ ತಗ್ಗಿನಲ್ಲಿರುವ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ.
ಏತನ್ಮಧ್ಯೆ, ಕೊಡಗು ಜಿಲ್ಲೆಯಲ್ಲಿ ಹೊದ್ದರು ಗ್ರಾಪಂ ವ್ಯಾಪ್ತಿಯ ಮಂಡೆಯಡ ಭೀಮಯ್ಯ ಅಲಿಯಾಸ್ ಪೊನ್ನಪ್ಪ (55) ಗುರುವಾರ ಪ್ರವಾಹಕ್ಕೆ ಸಿಕ್ಕು ನಾಪತ್ತೆಯಾಗಿದ್ದರು. ಶುಕ್ರವಾರ ಅವರ ಶವ ದೊರೆತಿದೆ. ಕಬಿನಿ ಜಲಾಶಯದಿಂದ 60 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಹಾಗಾಗಿ, ನಂಜನಗೂಡಿನ ಹಳ್ಳದಕೇರಿ, ತೋಪಿನ ಬೀದಿಗಳ ಮನೆಗಳು ಜಲಾವೃತವಾಗಿವೆ. ಅಷ್ಟೇ ಅಲ್ಲದೆ, ಪುರಾಣ ಪ್ರಸಿದ್ಧ ಪರಶುರಾಮರ ದೇವಾಲಯ, ಹದಿನಾರು ಕಾಲುಮಂಟಪ ಭಾಗಶಃ ನೀರಿನಲ್ಲಿ ಮುಳುಗಿದೆ. ವ್ಯಸ್ತವಾಗಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಕರಾವಳಿ, ಕೊಡಗಿನಲ್ಲಿ ನೆರೆ ಇಳಿಮುಖ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಆರ್ಭಟ ಹಾಗೂ ಪ್ರವಾಹ ಪರಿಸ್ಥಿತಿ ಬಹುತೇಕ ತಗ್ಗಿದೆ. ಜನಜೀವನ ಸಹಜಸ್ಥಿತಿಯತ್ತ ಮರಳುತ್ತಿದೆ. ಹೀಗಿದ್ದಾಗ್ಯೂ, ಸುಳ್ಯ ತಾಲೂಕಿನ ಸಂಪಾಜೆ ಬಳಿಯ ಜೋಡುಪಾಲ ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಬರೆ ಕುಸಿದ ಪರಿಣಾಮ ಮಡಿಕೇರಿ-ಸುಳ್ಯ ಮಧ್ಯೆ ಸಂಚಾರಕ್ಕೆ ಅಡೆತಡೆಯಾಯಿತು. ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಶಾಂತವಾಗಿದ್ದರಿಂದ ಉಪ್ಪಿನಂಗಡಿ ಬಹುತೇಕ ಸಹಜಸ್ಥಿತಿಗೆ ಮರಳಿದೆ. ಸಹಸ್ರಲಿಂಗೇಶ್ವರ ಮಹಾಕಾಳಿ ದೇಗುಲ ನೆರೆಯಿಂದ ಮುಕ್ತವಾಗಿದೆ. ಬಂಟ್ವಾಳ ತಾಲೂಕಿನಲ್ಲೂ ನೆರೆ ಇಳಿದಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ಇನ್ನು ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸ್ಥಳಾಂತರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಕೆಲವು ಕುಟುಂಬಗಳಿಗೆ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಮತ್ತು ಭಾಗಮಂಡಲ ನಾಪೋಕ್ಲು ರಸ್ತೆಯ ಮೇಲೆ ಶುಕ್ರವಾರವೂ 4 ಅಡಿಗಳಷ್ಟು ನೀರು ಹರಿಯುತ್ತಿತ್ತು.

ಮಲೆನಾಡಲ್ಲಿ ಕ್ಷೀಣಿಸಿದ ಮಳೆ: ಕಳೆದ ಎರಡು ದಿನಗಳಿಂದ ಅಬ್ಬರಿಸಿದ್ದ ಮಳೆ ಮಲೆನಾಡಿನಲ್ಲಿ ಬಿಡುವು ಕೊಟ್ಟಿದೆ. ನೆರೆಯಿಂದ ಕಡಿದಹೋಗಿದ್ದ ರಸ್ತೆ ಸಂಪರ್ಕಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ. ಉಕ್ಕಿ ಹರಿಯುತ್ತಿದ್ದ ತುಂಗಾ, ಭದ್ರಾ, ಹೇಮಾವತಿ, ಶರಾವತಿ, ವರದಾ ನದಿಗಳು ಶಾಂತವಾಗಿವೆ. ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

ಜೋಗದ ಸಮೀಪ ಭೂ ಕುಸಿತ
ಸಾಗರ ತಾಲೂಕಿನ ಜೋಗದ ಎಸ್.ವಿ.ಪಿ. ಕಾಲೋನಿಯಲ್ಲಿ ಕೆಪಿಸಿ ನೌಕರರು ವಾಸಿಸುತ್ತಿರುವ ಮನೆಗಳ ಹಿಂಭಾಗ ಭೂ ಗುರುವಾರ ರಾತ್ರಿ ಕುಸಿದಿದ್ದು ನೌಕರರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಈ ಭಾಗದಲ್ಲಿ ವಿಪರೀತ ಮಳೆಯಾದ್ದರಿಂದ ಭೂ ಕುಸಿದು ಕೆಲವು ಮನೆಗಳ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ ಕಾರ್ಮಿಕರು ಸಂಚರಿಸುತ್ತಿದ್ದ ರಸ್ತೆ ಮುಚ್ಚಿ ಹೋಗಿದ್ದು, ವಿದ್ಯುತ್, ನೀರಿನ ಸೌಲಭ್ಯಕ್ಕೆ ಅಡ್ಡಿ ಉಂಟಾಗಿದೆ. ಮತ್ತಷ್ಟು ಭೂ ಕುಸಿಯುವ ಅಪಾಯ ಇದ್ದುದ್ದರಿಂದ ಅಲ್ಲಿನ ನೌಕರರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ