ಪ್ರಧಾನ ಸುದ್ದಿ

ರಾಜಕೀಯ ಬೇಡ

ರೈತಾಪಿ ವರ್ಗದವರ ಮತ್ತು ಕೃಷಿಕರ ನೆಮ್ಮದಿ ಕಾಪಾಡುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಇದು ಈ ವರ್ಗದವರ ಹಣಕಾಸಿನ ...

ರೈತಾಪಿ ವರ್ಗದವರ ಮತ್ತು ಕೃಷಿಕರ ನೆಮ್ಮದಿ ಕಾಪಾಡುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಇದು ಈ ವರ್ಗದವರ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದುರಂತವೆಂದರೆ ಈ ಕ್ಷೇತ್ರದಲ್ಲಿ ರಾಜಕೀಯ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಕೆಲ ಸಹಕಾರಿ ಸಂಘಗಳ ಪ್ರಮುಖರು ಹಾಗೂ ಧುರೀಣರು ಸಂಸ್ಥೆಗಳನ್ನು ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಅದಕ್ಕಾಗಿ ಸಂಸ್ಥೆಯ ನಿಯಮಗಳನ್ನೂ ಬೇಕಾದಂತೆ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಕೊನೆಗೊಳಿಸಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿ
- ಗೋ.ಗೋ. ಹೆಗಡೆ, ಕೋಡಗದ್ದೆ




ಮಿಸ್ಟರ್ ಸಿಎಂ, ವಿ ವಾಂಟ್ ಇಂಗ್ಲಿಷ್ ಮೀಡಿಯಂ!

ಜಾತಿ ಮೀರಿ ಅಭಿವೃದ್ಧಿಗೊಳಿಸಿ
ಚುನಾವಣೆ ಬಳಿಕ ಪಕ್ಷ, ಜಾತಿ ರಾಜಕೀಯ ಮರೆತು ಸರ್ವರ ಏಳ್ಗೆಗಾಗಿ ಪ್ರಯತ್ನಿಸಿ. ನಿಮ್ಮ ಎಲ್ಲಾ ಶಾಸಕರಿಗೂ ಇದೇ ಕಿವಿಮಾತು ಹೇಳಿ. ಪ್ರತಿಯೊಂದು ಜಾತಿ, ಧರ್ಮದಲ್ಲಿರುವ ಬಡವರ ಏಳಿಗೆಗೆ ಮುಂದಾಗಿರಿ. ನೀರಾವರಿಗೆ ಆದ್ಯತೆ ಇರಲಿ.
ಟಿ ಶೇಖರಗೌಡ ವೀ ಸರನಾಡಗೌಡರ್, ತಾವರಗೇರಾ, ಕುಷ್ಟಗಿ
ಅವಕಾಶವಾದಿಯಾಗಬೇಡಿ
ರಾಜಕಾರಣಕ್ಕೂ ಅವಕಾಶವಾದಿತನಕ್ಕೂ ಎಲ್ಲಿಲ್ಲದ ನಂಟು. ರಾಜಕಾರಣದಲ್ಲಿ ಜಾತಿಗಳ ಓಲೈಕೆ ಮತ್ತು ಸ್ವಜನಪಕ್ಷಪಾತ ಇರುವುದೇ. ಸಿದ್ದರಾಮಯ್ಯನವರು ಇದಕ್ಕೆ ಹೊರತಾಗಿ ನಿಲ್ಲುತ್ತಾರೆ. ಸಚಿವ ಸಂಪುಟದಲ್ಲಿ ನಿಮ್ಮ ಜಾತಿಯವರಿಗೆ ಮಣೆ ನೀಡಿಲ್ಲ ಅನ್ನುವುದು ಖುಷಿ ಸಂಗತಿ. ಆದರೆ ನೀವು ಖರ್ಗೆಗೆ ಸಿಎಂ ಪಟ್ಟ ತಪ್ಪಿದ ಹಿನ್ನೆಲೆಯಲ್ಲಿ ದಲಿತರಿಗೆ ನೋವಾಗಿರಬೇಕು ಎಂಬ ಮನೋಭಾವದಲ್ಲಿ ಅವರ ಸಾಲ ಮನ್ನಾ ಸೇರಿದಂತೆ ಹಲವಾರು ಯೋಜನೆ ಪ್ರಕಟಿಸಿದ್ದೀರಿ. ಇದಕ್ಕಿಂತ ಅವರ ಅಭಿವೃದ್ಧಿಗಾಗಿ ಶಾಶ್ವತವಾಗಿ ರೂಪಿತವಾಗುವಂಥ ಯೋಜನೆ ಮಾಡಬಹುದಿತ್ತು. ಆದರೆ ಹಾಗೆ ಮಾಡದೇ ಸಾಲ ಮನ್ನಾ ಮಾಡಿ, ಸಾಲ ಪಡೆದು ಕಟ್ಟದಿದ್ದರೂ ಪರವಾಗಿಲ್ಲ ಮನ್ನಾ ಆಗುತ್ತದೆ ಎಂಬ ಮನೋಭಾವ ಮೂಡುವಂತೆ ಮಾಡಿದ್ದೀರಿ. ಇಂಥ ಯೋಜನೆಗಳಿಗೆ ಬ್ರೇಕ್ ಹಾಕಿ.
ಟಿ ನಾಗಮಂಗಲ ಕೃಷ್ಣಮೂರ್ತಿ, ಮೈಸೂರು
ನಿರೀಕ್ಷೆ ಹುಸಿ ಮಾಡಬೇಡಿ
ಜನರ ನಿರೀಕ್ಷೆಗಳಿಗೆ ತಕ್ಕಂತೆ ಸ್ಪಂದಿಸಿ, ಎಲ್ಲರನ್ನು ನಗುತ್ತಲೇ ಮಾತನಾಡಿಸಿ, ಧಾರ್ಮಿಕ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಬೇಡಿ. ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಿ, ಅವರ ಕೆಲಸದಲ್ಲಿ ರಾಜಕಾರಣಿಗಳು ಮಧ್ಯ ಪ್ರವೇಶ ಮಾಡುವುದನ್ನು ತಪ್ಪಿಸಿ.
ಟಿ ಶಿವಕುಮಾರ್(ಎಸ್‌ಟಿಡಿ ಶಿವಣ್ಣ)
ಜನರ ಕನಸು ಈಡೇರಿಸಿ
ಈಗ ತಾನೇ ಅಧಿಕಾರದ ಚುಕ್ಕಾಣಿ ಹಿಡಿದವರು ನೀವು, ಅಧಿಕಾರ ಚಲಾಯಿಸುವ ಮೂಲಕ ತನಗಾದವರನ್ನು ಮೆಚ್ಚಿಸಲು, ಆಗದವರನ್ನು ಶಿಕ್ಷಿಸುವ ಸುವರ್ಣ ಅವಕಾಶ ಎಂದು ಭಾವಿಸದೇ ನಿಮ್ಮ ಮೇಲೆ ನೂರಾರು ಭರವಸೆಗಳನ್ನು ಇಟ್ಟುಕೊಂಡಿರುವ ಜನರ ಕನಸುಗಳನ್ನು ಈಡೇರಿಸಿ.
ಟಿ ವಿಟ್ಟಲ್ ಎಸ್. ಜಾನವಾಡೆ, ಬೆಳಗಾವಿ
ಆತುರದ ನಿರ್ಧಾರ ಬೇಡ
ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಂಡು ಅವಹೇಳನಕ್ಕೆ ಗುರಿಯಾಗಬೇಡಿ. ಹಿಂದಿನ ಸರ್ಕಾರ ಯಾವ ಕೆಲಸ ಮಾಡಿದೆ, ಯಾವುದನ್ನು ಅರ್ಧಕ್ಕೆ ನಿಲ್ಲಿಸಿದೆ ಎಂಬುದನ್ನು ಪರಿಶೀಲಿಸಿ, ಉಳಿದವರ ಜೊತೆ ಚರ್ಚಿಸಿ ಆ ಕೆಲಸ ಮುಂದುವರಿಸಲು ನೋಡಿ.
ಟಿ ಮಮತ ಪ್ರಸಾದ, ಬೆಂಗಳೂರು
ಸಿಬ್ಬಂದಿ ಕಡಿಮೆ ಮಾಡಿಕೊಳ್ಳಿ
ಮುಖ್ಯಮಂತ್ರಿಗಳೇ ನೀವು ಇತರರಿಗೆ ಆದರ್ಶವಾಗಿರಬೇಕಾದವರು. ಹೀಗಾಗಿ ನೀವು ಸರಳ ಜೀವನಕ್ಕೆ ಆದ್ಯತೆ ನೀಡಿ. ಸಾಧ್ಯವಾದಷ್ಟು ನಿಮ್ಮ ಸುತ್ತಲಿನ ಸಿಬ್ಬಂದಿ ಕಡಿಮೆ ಮಾಡಿಕೊಳ್ಳಿ. ಜನರಿಂದ ಆಡಳಿತ ವರ್ಗ, ಜನರಿಗಾಗಿಯೇ ಆಡಳಿತ ವರ್ಗ ಎಂಬುದನ್ನು ರೂಢಿಸಿಕೊಳ್ಳಿ.
ಟಿ ನರಸಿಂಹಯ್ಯ ತೊಂಕೋಟಿ, ತುಮಕೂರು
ಪ್ರಾಮಾಣಿಕರ ಆಯ್ಕೆಗೆ ಒತ್ತು ನೀಡಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನನ್ನದೊಂದು ಕೋರಿಕೆ. ಇತ್ತೀಚೆಗೆ ಕೆಪಿಎಸ್‌ಸಿ ನಡೆಸಿದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಧ್ಯಮ ಸಮೂಹಗಳಲ್ಲಿ ಪ್ರಕಟವಾಗಿತ್ತು. ಆದ್ದರಿಂದ ಭ್ರಷ್ಟರನ್ನು ತೊಲಗಿಸಿ ಪ್ರತಿಭಾವಂತರಿಗೆ ಉದ್ಯೋಗ ದೊರಕುವಂಥ ವಾತಾವರಣವನ್ನು ಸೃಷ್ಟಿಸಿ ಎಂದು ಕೋರಿಕೊಳ್ಳುತ್ತೇನೆ.
ಟಿ ನಟೇಶ್, ಸೂಡೂರು
ಮುಂದಾಲೋಚನೆ ಇರಲಿ
ನೀವು ಮುಖ್ಯಮಂತ್ರಿಯಾದ ತಕ್ಷಣ ಹೊಸ ಹೊಸ ಘೋಷಣೆಗಳನ್ನು ಮಾಡಿದ್ದೀರಿ. ಆದರೆ ಇವಕ್ಕೆಲ್ಲಾ ಪೂರ್ವಸಿದ್ಧತೆ ಇರಬೇಕು. ಹೊಸ ಯೋಜನೆಗಳು, ಘೋಷಣೆಗಳಾಗಿಯೇ ಉಳಿದರೆ ನಿಮಗೂ, ಹಿಂದಿನ ಸರ್ಕಾರಗಳಿಗೂ ವ್ಯತ್ಯಾಸವಿರುವುದಿಲ್ಲ. ಮೊದಲು ಜನ ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಕೊಡಿ.
ಟಿ ಮಧು ಮಾಲ್ವೆ, ಸಾಗರ
ಪ್ಲಾಸ್ಟಿಕ್ ನಿಷೇಧಿಸಿ
ದಯವಿಟ್ಟು ಪ್ಲಾಸ್ಟಿಕ್ ನಿಷೇಧಿಸಿ, ಕಸದ ಸಮಸ್ಯೆ ಬಗೆಹರಿಸಿ. ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿ ಪರಿಸರ ಕಾಪಾಡಿ.
ಟಿ ಡಿ.ಎನ್. ಮಂಜುನಾಥ್, ದಂಡಿನಶಿವರ
ಹೊರೆ ಯಾರು ಹೊರಬೇಕು?
ಸಿದ್ದರಾಮಯ್ಯನವರೇ ಬಡವರಿಗೆ 1ಕ್ಕೆ 30 ಕೆಜಿ ಅಕ್ಕಿ, ಹಾಲಿನ ಸಬ್ಸಿಡಿ 2 ರಿಂದ 4ಕ್ಕೆ ಏರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದೀರಿ. ಹಾಗಾದರೆ ಈ ಹೊರೆಯನ್ನು ಯಾರು ಹೊರಬೇಕು. ಯಾವ ಪಾಪಕ್ಕಾಗಿ ಮಧ್ಯಮವರ್ಗಕ್ಕೆ ಈ ದೊಡ್ಡ ಶಿಕ್ಷೆ? ಒಬ್ಬನಿಂದ ಕಿತ್ತು, ಮತ್ತೊಬ್ಬನಿಗೆ ಕೊಡುವ ದಾನ ಮಾಡುವ ಸಂಸ್ಕೃತಿ ಬಿಡಿ.
ಟಿ ಕೆ.ವಿ. ಸೀತಾರಾಮಯ್ಯ, ಹಾಸನ
ಆಡಳಿತದಲ್ಲಿ ಜಾತಿ ಮೇಲೆತ್ತಬೇಡಿ
ಹಿಂದಿನ ಸಿಎಂ ಅವರ ಆಡಳಿತ ನೀತಿ ಸಾಮಾನ್ಯವಾಗಿ ಲಿಂಗಾಯಿತ ಜಾತಿಗೆ ಹೆಚ್ಚಿನ ಒತ್ತು ಕೊಟ್ಟಿತ್ತು ಎಂಬ ಮಾತು ಕೇಳಿಬರುತ್ತಿದೆ. ಆದರೆ ನಿಮ್ಮ ಆಡಳಿತದಲ್ಲಿ ಇಂಥ ಕೆಟ್ಟ ಜಾತಿ ಪದ್ಧತಿಯನ್ನು ಅನ್ವಯಿಸಿಕೊಳ್ಳಬೇಡಿ. ಆಡಳಿತದ ದೃಷ್ಟಿಯಿಂದ ಎಲ್ಲಾ ಪ್ರಜೆಗಳು, ಜಾತಿಗಳು ಒಂದೇ ಎಂದು ಆಡಳಿತ ನಡೆಸಿ.
ಟಿ ದೀಪಾ, ಹಾನಗಲ್


ಲಂಚ ನಿರ್ಮೂಲನೆ ಮಾಡಿ
ನೀವು ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿರುವುದು ಶ್ಲಾಘನೀಯ. ರಾಜಶೇಖರ ಮೂರ್ತಿಯವರು ಹೇಳುತ್ತಿದ್ದಂತೆ ಮನೆಯ ಮೇಲಿನ ಟ್ಯಾಂಕ್ ಸ್ವಚ್ಛವಾದಲ್ಲಿ ಮಾತ್ರ, ನಲ್ಲಿಯಲ್ಲಿ ಶುದ್ಧ ನೀರು ನಿರೀಕ್ಷಿಸಬಹುದು ಎಂಬ ಮಾತನ್ನು ಗಮನದಲ್ಲಿಟ್ಟುಕೊಳ್ಳಿ. ಮೇಲ್ಮಟ್ಟದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ.
            ಟಿ ಆರ್.ಜಿ. ಚಿನ್ನಸ್ವಾಮಿ, ಮೈಸೂರು


ಮೂಲಭೂತ ಸೌಕರ್ಯ ನೀಡಿ
ಜನರಿಗೆ ಉತ್ತಮ ಮೂಲಭೂತ ಸೌಕರ್ಯ ಒದಗಿಸಿ, ಉತ್ತಮ ರಸ್ತೆಗಳನ್ನು ನೀಡಿ. ಶುದ್ಧವಾದ ನೀರು ಕೊಡಿ.
ಟಿ ಕೃಷ್ಣ ಸಿ.


ಹಳ್ಳಿಗಾಡಿನ ಮಕ್ಕಳ ಬಗ್ಗೆ ಯೋಚಿಸಿ
ಮಾನ್ಯ ಮುಖ್ಯಮಂತ್ರಿಗಳೇ ಹಳ್ಳಿಗಾಡಿನ ಮಕ್ಕಳ ಬಗ್ಗೆ ಯೋಚನೆ ಮಾಡಿ. ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಕಲಿಸಲು ವ್ಯವಸ್ಥೆ ಮಾಡಿ. ಈ ಶಾಲೆಗಳಲ್ಲೂ ಸಿಬಿಎಸ್‌ಇ ಶಿಕ್ಷಣ ಸಿಗುವಂತಾಗಲಿ.
ಟಿ ಸಂಧ್ಯಾ ಜೈನ್, ಉಜಿರೆ

ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಕಳುಹಿಸಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ