ಪ್ರಧಾನ ಸುದ್ದಿ

ಮೇಲ್ವಿಚಾರಣೆ ಮಂಕುಬೂದಿ

ನವದೆಹಲಿ: ಕೇಂದ್ರ ಜಲ ಆಯೋಗ ಅಷ್ಟೆ ಅಲ್ಲ. ಕರ್ನಾಟಕದ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನೂತನವಾಗಿ ರಚಿತವಾಗಿರುವ ಕಾವೇರಿ ಮೇಲ್ವಿಚಾರಣಾ ಸಮಿತಿಯೂ ತಪ್ಪು ಮಾಹಿತಿ ನೀಡಿದೆ!
ಈ ಬಗ್ಗೆ ಕರ್ನಾಟಕ ಸರ್ಕಾರ ತನ್ನ ತೀವ್ರ ಆಕ್ಷೇಪವನ್ನು ದಾಖಲಿಸಿದೆ. ಕಾವೇರಿ ನ್ಯಾಯಾಧಿಕರಣ ಅಂತಿಮ ಐತೀರ್ಪಿನ ಆದೇಶ ಜಾರಿಗೆ ನ್ಯಾಯಾಧಿಕರಣ ರೂಪಿಸಿರುವ ಮಾರ್ಗಸೂಚಿಗಳನ್ನು ಅವಳಡಿಸಿಕೊಳ್ಳುವ ಬಗ್ಗೆ ಶನಿವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಅಳವಡಿಸಿಕೊಳ್ಳಲು ಒಪ್ಪಲಾಯಿತು ಎಂದು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾದ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಡಾ. ಸರ್ಕಾರ್  ಸಭಾ ನಡಾವಳಿಯಲ್ಲಿ ತಿಳಿಸಿದ್ದರು.  ಶನಿವಾರದ ಸಭೆಯ ಕಾರ್ಯಸೂಚಿಯಲ್ಲಿದ್ದ ಬಹುತೇಕ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆ ನೀಡಲು 8-10 ದಿನಗಳ ಕಾಲಾವಕಾಶ ಕೇಳಿತ್ತು. ಆದರೆ, ಡಾ. ಸರ್ಕಾರ್ ಸಭೆ ನಂತರ ಬಿಡುಗಡೆ ಮಾಡಿದ ಸಭಾ ನಡಾವಳಿಯಲ್ಲಿ ಕರ್ನಾಟಕ ಸರ್ಕಾರ 2-3 ದಿನಗಳಲ್ಲಿ  ಪ್ರತಿಕ್ರಿಯೆ ಸಲ್ಲಿಸಲು ಒಪ್ಪಿದೆ ಎಂದಿದ್ದರು. ಹಾದಿ ತಪ್ಪಿಸುವ ಮಾಹಿತಿ ದಾಖಲಿಸುವ ಮೂಲಕ ನೂತನವಾಗಿ ರಚನೆಯಾಗಿರುವ ಸಮಿತಿಯು ಕಾವೇರಿ ಕಣಿವೆಯಲ್ಲಿರುವ 4 ಜಲಾಶಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದೆ.         
ಸಭಾ ನಡಾವಳಿಯಲ್ಲಿ ಪ್ರಸ್ತಾಪಿಸಲಾಗಿರುವ ಅಂಶಗಳ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಮಿತಿಗೆ ರಂಗನಾಥ್ ಪತ್ರ: ಕಾವೇರಿ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಎಸ್.ವಿ. ರಂಗನಾಥ್ ಅವರು, ನ್ಯಾಯಾಧಿಕರಣದ ಮಾರ್ಗಸೂಚಿಗಳ ಅಳವಡಿಕೆಗೆ ಕರ್ನಾಟಕವೂ ಒಪ್ಪಿದೆ ಎಂಬರ್ಥದಲ್ಲಿ ಪ್ರಕಟಿಸಿರುವ ಸಭಾ ನಡಾವಳಿ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ತಾವು ಸಭಾ ನಡಾವಳಿಯಲ್ಲಿನ ಪ್ರಸ್ತಾವಿತ ಬಹುತೇಕ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ಎಂಟತ್ತು ದಿನಗಳಲ್ಲಿ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿಸಿದ್ದರೂ ಎರಡು ಮೂರು ದಿನಗಳಲ್ಲಿ ಪ್ರತಿಕ್ರಿಯೆ ತಿಳಿಸಲಿದೆ ಎಂದು ಪ್ರಕಟಿಸಿರುವ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸಮಿತಿ ಮಾರ್ಗಸೂಚಿಗೆ ರಾಜ್ಯದ ವಿರೋಧ: ಕಾವೇರಿ ನ್ಯಾಯಾಧಿಕರಣ ಅಂತಿಮ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ನ್ಯಾಯಾಧಿಕರಣದ ಸೂಚನೆಯಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕಾಲಾವಕಾಶ ಕೋರಿದ್ದರಿಂದ ಸುಪ್ರೀಂ ಕೋರ್ಟ್ ಕಾವೇರಿ ಮೇಲ್ವಿಚಾರಣಾ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.
ಇದುವರೆಗೂ ಇದ್ದ ಕಾವೇರಿ ನಿಗಾ ಸಮಿತಿ ಸ್ವರೂಪದಲ್ಲಿ ಕಾವೇರಿ ಮೇಲ್ವಿಚಾರಣಾ ಸಮಿತಿಯೂ ಕಾರ್ಯನಿರ್ವಹಿಸಲಿದೆ ಎಂದೇ ಕರ್ನಾಟಕ ಭಾವಿಸಿತ್ತು. ಆದರೆ, ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪು ಜಾರಿ ಮಾಡಲು ನ್ಯಾಯಾಧಿಕರಣ ರೂಪಿಸಿರುವ ಮಾರ್ಗಸೂಚಿಗಳನ್ನು ಮೇಲ್ವಿಚಾರಣಾ ಸಮಿತಿಯೂ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿ ಈ ಕುರಿತು ಶನಿವಾರದ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕುರಿತಂತೆ ಕರ್ನಾಟಕ ತನ್ನ ತಾತ್ವಿಕ ವಿರೋಧ ವ್ಯಕ್ತಪಡಿಸಿ ತನ್ನ ಅಭಿಪ್ರಾಯವನ್ನು ಎಂಟರಿಂದ ಹತ್ತುದಿನಗಳಲ್ಲಿ ತಿಳಿಸುವುದಾಗಿ ಹೇಳಿತ್ತು. ಆದರೆ, ಡಾ. ಸರ್ಕಾರ್ ಅವರು ನ್ಯಾಯಾಧಿಕರಣದ ಮಾರ್ಗಸೂಚಿಗಳ ಕುರಿತಂತೆ ಚರ್ಚಿಸಲಾಯಿತು ಮತ್ತು ಅಳವಡಿಸಿಕೊಳ್ಳಲು ಒಪ್ಪಲಾಯಿತು ಎಂದು ಸಭಾ ನಡಾವಳಿಯಲ್ಲಿ ಪ್ರಕಟಿಸಿದ್ದಾರೆ. ಇದು ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ಅಚ್ಚರಿ ಜತೆಗೆ ಆಘಾತವನ್ನುಂಟು ಮಾಡಿದೆ.
ಶನಿವಾರ ನಡೆದ ಸಭೆಯಲ್ಲಿ ಕೇಂದ್ರ ಜಲ ಆಯೋಗವು ಕರ್ನಾಟಕದ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 3.77 ಟಿಎಂಸಿ ನೀರು ಇದೆ ಎಂಬ ಮಾಹಿತಿ ನೀಡಿತ್ತು. ಆದರೆ, ಗುರವಾರ ತನ್ನ ವಾರದ ವರದಿಯಲ್ಲಿ ನಾಲ್ಕು ಜಲಾಶಯಗಳ ಪೈಕಿ ಮೂರು ಜಲಾಶಯಗಳು ಬತ್ತಿ ಹೋಗಿದ್ದು ಹಾರಂಗಿಯಲ್ಲಿ ಮಾತ್ರ ಬಳಕೆ ಮಾಡಬಹುದಾದ ನೀರು 0.5 ಟಿಎಂಸಿಯಷ್ಟಿದೆ ಎಂದು ತಿಳಿಸಿತ್ತು.

- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ