ಪ್ರಧಾನ ಸುದ್ದಿ

ಗುಟ್ಟು ರಟ್ಟು

ಇನ್ನು ಮುಂದೆ ರಾಜಕೀಯ ಪಕ್ಷಗಳಿಗೂ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅನ್ವಯವಾಗಲಿದೆ. ದೇಶ ಹಾಗೂ ವಿದೇಶಗಳಿಂದ ಹರಿದುಬರುವ...

ನವದೆಹಲಿ: ಇನ್ನು ಮುಂದೆ ರಾಜಕೀಯ ಪಕ್ಷಗಳಿಗೂ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಅನ್ವಯವಾಗಲಿದೆ. ದೇಶ ಹಾಗೂ ವಿದೇಶಗಳಿಂದ ಹರಿದುಬರುವ ದೇಣಿಗೆ ಹಾಗೂ ಖರ್ಚಿನ ವಿವರಗಳನ್ನು ಬಹಿರಂಗಪಡಿಸುವುದು ರಾಜಕೀಯ ಪಕ್ಷಗಳಿಗೆ ಕಡ್ಡಾಯವಾಗಲಿದೆ.
ಹೌದು. ರಾಜಕೀಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಇಂತಹದೊಂದು ಕ್ರಾಂತಿಕಾರಿ ಆದೇಶ ನೀಡಿದೆ.
ಆರ್‌ಟಿಐ ಅರ್ಜಿಯೊಂದರಡಿ ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ, ಸಿಪಿಐ, ಎನ್‌ಸಿಪಿ ಮತ್ತು ಬಿಎಸ್ಪಿ ಪಕ್ಷಗಳು ಉತ್ತರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ಮಾಹಿತಿ ಆಯುಕ್ತ ಎಂ.ಎಲ್. ಶರ್ಮಾ ಮತ್ತು ಅನ್ನಪೂರ್ಣಾ ದೀಕ್ಷಿತ್ ಅವರಿದ್ದ ಪೂರ್ಣ ಪೀಠ ಸೂಚಿಸಿದೆ.
ಈ ವೇಳೆ, ಸರ್ಕಾರಗಳು ಪಕ್ಷಗಳಿಗೆ ಪರೋಕ್ಷವಾಗಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುತ್ತವೆ ಎಂಬ ವಾದವನ್ನು ಪೀಠ ಒಪ್ಪಿದೆ. ಈ ಹಿನ್ನೆಲೆಯಲ್ಲಿ ಆರು ವಾರದೊಳಗೆ ಕೇಂದ್ರ ಕಚೇರಿಯಲ್ಲಿ ಸಿಪಿಐಒ ಮತ್ತು ಮೇಲ್ಮನವಿ ಪ್ರಾಧಿಕಾರಗಳನ್ನು ರಚಿಸಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಪೀಠ ಸೂಚಿಸಿದೆ. ಈ ಸಿಪಿಐಒಗಳು ಆರ್‌ಟಿಐನಡಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಏತನ್ಮಧ್ಯೆ, ಅಗತ್ಯ ಮಾಹಿತಿಗಳನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌ನಲ್ಲೂ ಬಹಿರಂಗಪಡಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ, ಸಿಪಿಐ, ಎನ್‌ಸಿಪಿ ಮತ್ತು ಬಿಎಸ್ಪಿ ಪಕ್ಷಗಳಿಗೆ ಹರಿದು ಬರುವ ದೇಣಿಗೆ ವಿವರ ಮತ್ತು ದೇಣಿಗೆ ನೀಡಿದವರ ಹೆಸರು ಮತ್ತು ವಿಳಾಸ ನೀಡುವಂತೆ ಮಾಹಿತಿ ಕೇಳಲಾಗಿತ್ತು.
ಸಿಐಸಿ ಏನು ಹೇಳುತ್ತದೆ?
- ಯಾವುದೇ ರಾಜಕೀಯ ಪಕ್ಷದಿಂದ ಯಾವುದೇ ಲಿಖಿತ ಮಾಹಿತಿಯನ್ನು ಪಡೆದುಕೊಳ್ಳಬಹುದು
- ವಿದೇಶಿ ದೇಣಿಗೆ ಕುರಿತೂ ರಾಜಕೀಯ ಪಕ್ಷದಿಂದ ಮಾಹಿತಿ ಪಡೆದುಕೊಳ್ಳಬಹುದು
- ಅಭ್ಯರ್ಥಿ ಖರ್ಚು, ವೆಚ್ಚದ ವಿವರವನ್ನೂ ಇನ್ನು ಆರ್‌ಟಿಐನಡಿ ಸಾಮಾನ್ಯ ನಾಗರಿಕ ಪಡೆದುಕೊಳ್ಳಬಹುದು
ಆಯ್ಕೆ ಹೇಗೆ?
ಎಷ್ಟು ಪ್ರಮಾಣದಲ್ಲಿ ನಿಧಿ ಹರಿದು ಬಂದಿದೆ? ಅದನ್ನು ಆ ಪಕ್ಷಗಳು ಹೇಗೆ ಖರ್ಚು ಮಾಡಿವೆ ಮತ್ತು ಚುನಾವಣೆ ವೇಳೆ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿವೆ? ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಿವೆ ಎನ್ನುವ ವಿವರವನ್ನೂ ಬಹಿರಂಗಪಡಿಸಬೇಕಾಗುತ್ತದೆ.
ಪಕ್ಷಗಳ ವಿರೋಧ
ರಾಜಕೀಯ ಪಕ್ಷಗಳನ್ನು ಆರ್‌ಟಿಐ ಅಡಿಗೆ ತರಲು ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ನಡುವೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!