ಪ್ರಧಾನ ಸುದ್ದಿ

ಇನ್ನು ಬಸ್ ಪ್ರಯಾಣ ಕಷ್ಟ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ತಿಂಗಳ ಅವಧಿ ಪೂರೈಸುತ್ತಿದ್ದಂತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರ...

ಕನ್ನಡಪ್ರಭ ವಾರ್ತೆ  ಬೆಂಗಳೂರು  ಜೂ.15
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ತಿಂಗಳ ಅವಧಿ ಪೂರೈಸುತ್ತಿದ್ದಂತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರ ಮೇಲೆ ಬರೆ ಎಳೆದಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣದರವನ್ನು ಶೇ.10.5ರಷ್ಟು ಮತ್ತು ಬಿಎಂಟಿಸಿ ಬಸ್ ಪ್ರಯಾಣದರವನ್ನು ಸುಮಾರು ಶೇ.16ರಷ್ಟು ಹೆಚ್ಚಳ ಮಾಡಲಾಗಿದ್ದು, ಹೊಸ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.
ಕಳೆದ ಜನವರಿಯಿಂದೀಚೆಗೆ ಡೀಸೆಲ್ ದರ ತೀವ್ರಗತಿಯಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗೆ ಪ್ರತಿ ವರ್ಷ 120.10 ಕೋಟಿ ಹೊರೆಯಾಗುತ್ತಿದೆ. ಜತೆಗೆ ನೌಕರರ ತುಟ್ಟಿಭತ್ಯೆಯನ್ನೂ ಪರಿಷ್ಕರಣೆ ಮಾಡಬೇಕಿದ್ದು, ಇದರಿಂದ ಮತ್ತೆ 102.58 ಕೋಟಿ ಹೆಚ್ಚುವರಿ ವೆಚ್ಚವಾಗುತ್ತಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ರಿಯಾಯಿತಿ ಬಸ್‌ಪಾಸ್‌ನಿಂದಲೂ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ. ಇದನ್ನು ಭರಿಸಲು ದರ ಏರಿಕೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಅಂಶಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಶೇ.10.5ರಷ್ಟು ದರ ಹೆಚ್ಚಳ ಮಾಡಲಾಗಿದೆ. ಈ ದರ ಏರಿಕೆಯಿಂದ ವಾರ್ಷಿಕ 186.72 ಕೋಟಿ ಹೆಚ್ಚುವರಿ ಆದಾಯ ಬರುತ್ತದೆಯಾದರೂ ಇನ್ನೂ 35.96 ಕೋಟಿ ಕೊರತೆ ಉಂಟಾಗುತ್ತದೆ.             
ಮೊದಲ ಪುಟದಿಂದ  ಇದನ್ನು ಕಾರ್ಯಾಚರಣೆ ಉತ್ತಮಗೊಳಿಸುವ ಮೂಲಕ ಸರಿದೂಗಿಸಲು ತೀರ್ಮಾನಿಸಲಾಗಿದೆ.
ಕಾದು ನೋಡಿದರು: ಕಳೆದ ಜ.17ರಂದು ಕೇಂದ್ರ ಸರ್ಕಾರವು ಸಗಟು ಡೀಸೆಲ್ ಖರೀದಿದಾರರಿಗೆ ವಿತರಿಸುತ್ತಿದ್ದ ಡೀಸಲ್‌ನ ದರವನ್ನು ಪ್ರತಿ ಲೀಟರ್‌ಗೆ 11.95ರಷ್ಟು ಹೆಚ್ಚಿಸಿತ್ತು. ಈ ಸಂದರ್ಭದಲ್ಲೇ ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಆದರೆ, ಸಾರಿಗೆ ಸಂಸ್ಥೆ ಸಾರ್ವಜನಿಕ ಸೇವೆಗಾಗಿ ಬಸ್‌ಗಳನ್ನು ಓಡಿಸುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಂಸ್ಥೆಗೆ ಸಗಟು ಡೀಸೆಲ್‌ದಾರರಿಗೆ ಮಾಡಿದ್ದ ದರ ಏರಿಕೆಯಿಂದ ವಿನಾಯಿತಿ ನೀಡಬಹುದು ಎಂದು ನಿರೀಕ್ಷಿಸಿ ದರ ಏರಿಕೆ ನಿರ್ಧಾರವನ್ನು ಕೈಬಿಡಲಾಗಿತ್ತು.
ಅಲ್ಲದೆ, ಚಿಲ್ಲರೆ ಮಾರಾಟಗಾರರಿಂದ ಡೀಸೆಲ್ ಪಡೆದು ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಈ ಮಧ್ಯೆ ದರ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಸಾಕಷ್ಟು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಲಿಲ್ಲ.
ಜತೆಗೆ ಚಿಲ್ಲರೆ ಮಾರಾಟಗಾರರೂ ಬಸ್‌ಗಳಿಗೆ ಡೀಸೆಲ್ ನೀಡಲು ಹಿಂದೇಟು ಹಾಕಿದರು. ಈ ಕಾರಣದಿಂದ ಇದೀಗ ಪ್ರಯಾಣದರ ಏರಿಸುವ ಮೂಲಕ ನಷ್ಟ ಸರಿದೂಗಿಸಿಕೊಳ್ಳಲು ಮುಂದಾಗಿದೆ.

ವೋಲ್ವೋ ಬಸ್ ದರ ಏರಿಕೆ ನಿರ್ಧಾರ ಸಂಸ್ಥೆಯದ್ದೇ
ಪ್ರಸ್ತುತ ಸಾಮಾನ್ಯ ಸಾರಿಗೆ ಮತ್ತು ರಾಜಹಂಸ ಬಸ್‌ಗಳ ಪ್ರಯಾಣದರ ಹೆಚ್ಚಳವಾಗಿದೆಯಾದರೂ ವೋಲ್ವೋ ಬಸ್‌ಗಳ ದರದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಾಮಾನ್ಯ ಸಾರಿಗೆ ಮತ್ತು ರಾಜಹಂಸ ಬಸ್ ಪ್ರಯಾಣದರ ಏರಿಕೆ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಸಂಸ್ಥೆಯ ಆಡಳಿತ ಮಂಡಳಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತದೆ. ಆದರೆ, ವೋಲ್ವೋ ಬಸ್‌ಗಳ ಪ್ರಯಾಣದರ ಏರಿಕೆ ವಿಚಾರವನ್ನು ಪ್ರೋತ್ಸಾಹಕ ದರ ವ್ಯವಸ್ಥೆಯಡಿ ಏರಿಸುವ ಅಥವಾ ಇಳಿಸುವ ಅಧಿಕಾರವನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ನೀಡಲಾಗಿದೆ. ಅದರಂತೆ ಸಂಸ್ಥೆಗಳು ವಾರದ ದಿನ, ವಾರಾಂತ್ಯದ ದಿನಗಳು, ಹೆಚ್ಚು ಜನದಟ್ಟಣೆ ಅವಧಿ... ಹೀಗೆ ಹಲವು ಸಂದರ್ಭಗಳಲ್ಲಿ ದರ ಏರಿಸುವ ಅಥವಾ ಇಳಿಸುವ ನಿರ್ಧಾರ ಕೈಗೊಳ್ಳುತ್ತವೆ. ಹೀಗಾಗಿ ಶನಿವಾರ ವೋಲ್ವೋ ಬಸ್‌ಗಳ ಪ್ರಯಾಣದರ ಏರಿಕೆ ಕುರಿತು ನಿರ್ಧಾರವಾಗಿಲ್ಲ.
ಬೆಂಗಳೂರಿನಿಂದ ಪ್ರಮುಖ ಕೇಂದ್ರಗಳಿಗೆ

ಸಾಮಾನ್ಯ ಸಾರಿಗೆ     ರಾಜಹಂಸ
ಸ್ಥಳ    ಹಾಲಿ    ಪರಿಷ್ಕೃತ    ಹಾಲಿ    ಪರಿಷ್ಕೃತ
ಮೈಸೂರು    110    120    186    209
ಮಂಗಳೂರು    280    307    473    523
ಹುಬ್ಬಳ್ಳಿ    325    356    549    610
ಮಂಡ್ಯ    75    83    128    141
ಧಾರವಾಡ    340    373    575    638
ಗುಲ್ಬರ್ಗ    495    548    844    938
ಬಳ್ಳಾರಿ    250    275    423    469
ದಾವಣಗೆರೆ    210    230    356    394
ಶಿವಮೊಗ್ಗ    225    247    381    423
ಬೆಳಗಾವಿ    400    439    676    751
ಕೋಲಾರ    55    60    94    105
ತುಮಕೂರು    55    60    94    105
ಹಾಸನ    145    160    246    272
ಚಾಮರಾಜನಗರ    160    175    271    301
ಚಿತ್ರದುರ್ಗ    160    175    271    301
ಮಡಿಕೇರಿ    205    225    347    385
ಕಾರವಾರ    420    466    718    797

ತಾಲೂಕು ಕೇಂದ್ರಗಳಿಗೆ
ಹಾಲಿ    ಪರಿಷ್ಕೃತ
ನೆಲಮಂಗಲ    22    25
ಹೊಸಕೋಟೆ    22    25
ದೊಡ್ಡಬಳ್ಳಾಪುರ    25    28
ಆನೇಕಲ್    25    28
ಮಾಗಡಿ    31    34
ಮಾಲೂರು    31    34
ಕನಕಪುರ    34    37
ರಾಮನಗರ    28    30
ಚನ್ನಪಟ್ಟಣ    34    37

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್