ಪ್ರಧಾನ ಸುದ್ದಿ

ರೈಲ್‌ಗೆ ಖರ್ಗೆ ರಸ್ತೆಗೆ ಆಸ್ಕರ್

ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಎಂಟು ಸಂಸದರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟಕ್ಕೆ ಸೋಮವಾರ ಸೇರ್ಪಡೆ...

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಕರ್ನಾಟಕದ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಎಂಟು ಸಂಸದರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಸಂಪುಟಕ್ಕೆ ಸೋಮವಾರ ಸೇರ್ಪಡೆ ಮಾಡಿಕೊಂಡಿದ್ದಾರೆ.
ಕೆಲವು ಖಾತೆಗಳ ಪುನರ್ ಹಂಚಿಕೆ ಮಾಡಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಕೊನೆಯ ಹಂತದಲ್ಲಿ ಕಳೆದುಕೊಂಡಿದ್ದ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೆ ಖಾತೆ ನೀಡಲಾಗಿದೆ. ಸೀಸ್‌ರಾಮ್ ಓಲಾ, ಆಸ್ಕರ್ ಫರ್ನಾಂಡಿಸ್, ಗಿರಿಜಾ ವ್ಯಾಸ್, ಡಾ.ಕೆ. ಸಾಂಬಶಿವರಾವ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ, ಮಾಣಿಕ್ ರಾವ್ ಎಚ್. ಗವಿತ್, ಸಂತೋಷ್ ಚೌಧರಿ, ಡಾ. ಇಎಂಎಸ್ ನಾಚಿಯಪ್ಪನ್ ಹಾಗೂ ಜೇಸುದಾಸು ಸಲೀಮ್ ಅವರು ರಾಜ್ಯ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಎಂಟು ಸಚಿವರ ಸೇರ್ಪಡೆಯೊಂದಿಗೆ ಮನಮೋಹನ್ ಸಿಂಗ್ ಅವರ ಸಂಪುಟದ ಸದಸ್ಯರ ಸಂಖ್ಯೆ 77ಕ್ಕೆ ಏರಿದೆ. ಸಂಪುಟ ವಿಸ್ತರಣೆ ಆಗುತ್ತಲೇ ಖಾತೆಗಳ ಹಂಚಿಕೆಯನ್ನು ಮಾಡಲಾಗಿದೆ. ಆಸ್ಕರ್ ಅವರಿಗೆ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ನೀಡಲಾಗಿದೆ.
ಲೋಕಸಭೆ ಚುನಾವಣೆಗೆ ತಯಾರಿ: 2014ರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸೋಮವಾರ ನಡೆದ ಸಂಪುಟ ವಿಸ್ತರಣೆಯೊಂದಿಗೆ ಮತ್ತೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಎರಡು ದಿನಗಳ ಹಿಂದಷ್ಟೆ ಎಐಸಿಸಿಗೆ ಹೊಸ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ, ರಾಜ್ಯಗಳ ಮೇಲುಸ್ತುವಾರಿಯನ್ನು ಬದಲಾವಣೆ ಮಾಡುವ ಮೂಲಕ ಮೊದಲ ಹೆಜ್ಜೆ ಇಟ್ಟಿತ್ತು.
ರಾಹುಲ್ ಗಾಂಧಿ ಅವರು ಎಐಸಿಸಿ ಉಪಾಧ್ಯಕ್ಷರಾದ ನಂತರ ಸಂಪುಟದಲ್ಲಿ ಯುವ ಪಡೆಗೆ ಅಗ್ರಪಾಲು  ಸೇರುತ್ತದೆಂಬ ಊಹೆ ಸುಳ್ಳಾಗಿದೆ. ರಾಹುಲ್ ಗಾಂಧಿ ಸಹ ಅನುಭವಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದ್ದಾರೆ.
ತತ್ಪರಿಣಾಮ ಸೋಮವಾರ ಸಂಪುಟಕ್ಕೆ ಸೇರ್ಪಡೆಗೊಂಡ ಎಂಟು ಸಚಿವರ ಸರಾಸರಿ ವಯಸ್ಸು 66. ಆದರೆ, ಸಾಂಸ್ಥಿಕ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ರಾಹುಲ್ ಗಾಂಧಿ ಸಾಂಸ್ಥಿಕ ಪುನಾರಚನೆಯಲ್ಲಿ ತಮ್ಮ ಆಪ್ತರಿಗೆ ಆಗ್ರಪಾಲು ನೀಡಿದ್ದಾರೆ.

ರೈಲು ಹತ್ತಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಂದು ತಿಂಗಳ ಹಿಂದೆಯೇ ರೇಲ್ವೆ ಖಾತೆ ದೊರೆಯಬೇಕಿತ್ತು. ಭ್ರಷ್ಟಾಚಾರದ ಆರೋಪದಿಂದಾಗಿ ಪವನ್ ಬನ್ಸಾಲ್ ಅವರು ರಾಜಿನಾಮೆ ನೀಡಿದಾಗ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೇಲ್ವೆ ಖಾತೆ ವಹಿಸಲಾಗುತ್ತದೆಂದು ಹೇಳಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯೂ ಹರಡಿತ್ತು. ಆದರೆ, ಕೊನೆಯ  ಕ್ಷಣದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ಸಿ.ಪಿ.ಜೋಶಿ ಅವರಿಗೆ ರೇಲ್ವೆ ಖಾತೆ ವಹಿಲಾಗಿತ್ತು.  ಸಿ.ಪಿ. ಜೋಶಿ ಈಗ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ಸಂಪುಟ ತೊರೆದಿದ್ದಾರೆ. ರಾಜಾಸ್ಥಾನ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಾಸ್ಥಾನ ಮೂಲದ ಸಿಸ್ ರಾಮ್ ಓಲಾ, ಗಿರಿಜಾ ವ್ಯಾಸ್ ಮತ್ತು ಆಂಧ್ರ ಪ್ರದೇಶದ ಡಾ.ಸಾಂಬಶಿವರಾವ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಸಿಸ್ ರಾಮ್ ಓಲಾ ಅವರು ಯುಪಿಎ-1 ರಲ್ಲೂ ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. ಈಗ ಅದೇ ಖಾತೆ ಅವರಿಗೆ ದಕ್ಕಿದೆ. ಯುಪಿಎ-1ರಲ್ಲಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಕ್ರೀಡಾ ಮತ್ತು ಯುವಜನಾ ಸೇವಾ ಸಚಿವರಾಗಿದ್ದರು.

77ಕ್ಕೇರಿದ ಪ್ರಧಾನಿ ಸಿಂಗ್ ಸಂಪುಟ ಸಚಿವರ ಸಂಖ್ಯೆ

ಹೊಸ ಸಚಿವರ ಖಾತೆ
ಕ್ಯಾಬಿನೆಟ್ ಸಚಿವರು
- ಸಿಸ್‌ರಾಮ್ ಓಲಾ-  ಕಾನೂನು ಮತ್ತು ಉದ್ಯೋಗ
- ಆಸ್ಕರ್ ಫರ್ನಾಂಡಿಸ್- ಭೂಸಾರಿಗೆ ಮತ್ತು ಹೆದ್ದಾರಿ
- ಗಿರಿಜಾ ವ್ಯಾಸ್- ವಸತಿ ಮತ್ತು ನಗರಪ್ರದೇಶ ಬಡತನ ನಿವಾರಣೆ
- ಡಾ.ಕೆ. ಸಾಂಬಶಿವರಾವ್- ಜವಳಿ


ರಾಜ್ಯ ಸಚಿವರು
- ಮಾಣಿಕ್ ರಾವ್ ಎಚ್. ಗವಿತ್- ಸಾಮಾಜಿಕ ನ್ಯಾಯ ಮತ್ತು ಸಬಲತೆ
-ಸಂತೋಷ್ ಚೌಧರಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ಡಾ. ಇಎಂಎಸ್ ನಾಚಿಯಪ್ಪನ್- ವಾಣಿಜ್ಯ ಮತ್ತು ಕೈಗಾರಿಕೆ
- ಜೇಸುದಾಸು ಸಲೀಮ್ - ಹಣಕಾಸು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ