ಪ್ರಧಾನ ಸುದ್ದಿ

ಜನತಾ ಪಕ್ಷಗಳ ಒಗ್ಗೂಡುವಿಕೆಗೆ ಯಾವುದೇ ಕಾಲಮಿತಿಯಿಲ್ಲ: ಶರದ್ ಯಾದವ್

Guruprasad Narayana

ಪಾಟ್ನಾ: ನವದೆಹಲಿಯಲ್ಲಿ ಡಿಸೆಂಬರ್ ೨೨ ರಂದು ನಡೆಸಬೇಕೆಂದುಕೊಂಡಿರುವ "ಮಹಾ ಧರಣಿ" ಜನತಾ ಪರಿವಾರ ಪಕ್ಷಗಳು ಒಗ್ಗೂಡುವುದಕ್ಕೆ ಮೊದಲ ಹೆಜ್ಜೆಯಾಗಲಿದೆ, ಆದರೆ ಇದಕ್ಕೆ ಯೂವುದೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಲ್ಲ ಎಂದು ಜನತಾ ದಳ (ಯುನೈಟೆಡ್) ಅಧ್ಯಕ್ಷ ಶರದ್ ಯಾದವ್ ಶನಿವಾರ ತಿಳಿಸಿದ್ದಾರೆ.

ವಿವಿಧ ಜನತಾ ಪಕ್ಷದ ನಾಯಕರು ಸೇರಿ ಎರಡು ಬಾರಿ ಸಭೆ ನಡೆಸಿದ್ದೇವೆ. ಅದರ ನಂತರ ಬಿಜೆಪಿ ಸರ್ಕಾರವನ್ನು ಬಯಲಿಗೆಳೆಯಲು ಡಿಸೆಂಬರ್ ೨೨ ರಂದು ದೆಹಲಿಯಲ್ಲಿ "ಮಹಾ ಧರಣಿ"ಯನ್ನು ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಇನ್ನೂ ಹೆಚ್ಚಿನ ಪಕ್ಷಗಳು ಒಗ್ಗೂಡಲಿವೆಯೆ ಎಂಬ ಪ್ರಶ್ನೆಗೆ, ಇಲ್ಲಿಯವರೆಗೂ ಒಗ್ಗೂಡಲು ಆಸಕ್ತಿ ತೋರಿರುವ ಎಲ್ಲ ಪಕ್ಷಗಳು ಸ್ವ-ಇಚ್ಛೆಯಿಂದ ಬಂದಿರುವವರೆ. ಇನ್ಮುಂದೆ ಹೆಚ್ಚಿನ ಪಕ್ಷಗಳು ಆಸಕ್ತಿ ತೋರಿದರೆ ಅದನ್ನು ನಾವು ಗಣನೆಗೆ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಜನತಾ ದಳ(ಯು), ಜನತಾ ದಳ (ಎಸ್), ಐ ಎನ್ ಎಲ್ ಡಿ ಹಾಗೂ ಸಮಾಜವಾದಿ ಜನತಾ ಪಕ್ಷಗಳು ಇಲ್ಲಿಯವರೆಗೂ ಒಗ್ಗೂಡುವ ಆಸಕ್ತಿ ತೋರಿರಿರುವ ಪಕ್ಷಗಳು. 

SCROLL FOR NEXT