ಪ್ರಧಾನ ಸುದ್ದಿ

ಲೈಫ್ ಜಾಕೆಟ್ ಹಾಕಿದ್ದ ಶವ ಪತ್ತೆ; ಏರ್ ಏಶಿಯಾ ವಿಮಾನದ ಕೊನೆ ಕ್ಷಣಗಳ ಬಗ್ಗೆ ಎದ್ದ ಪ್ರಶ್ನೆಗಳು

Guruprasad Narayana

ಸುರಬಯ: ಇಂಡೋನೇಶಿಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಶಿಯಾ ವಿಮಾನ ಕಾಣೆಯಾಗಿ ಎರಡು ದಿನಗಳ ನಂತರ ಈಗ ವಿಮಾನದ ಅವಶೇಷಗಳು ಹಾಗು ಪ್ರಯಾಣಿಕರ ಶವ ದೇಹಗಳು ಜಾವಾ ಸಮುದ್ರದಡಿ ಪತ್ತೆಯಾಗಿವೆ. ಇಲ್ಲಿಯವರೆಗೂ ಏಳು ಶವಗಳು ಪತ್ತೆಯಾಗಿದ್ದು ಅವುಗಳಲ್ಲಿ ಎಲ್ಲ ಶವಗಳ ಪೂರ್ತಿ ದೇಹ ಸಿಕ್ಕಿದ್ದು ಹಾಗೆಯೇ ಲೈಫ್ ಜಾಕೆಟ್ ಹಾಕಿರುವ ಶವವೊಂದು ಕೂಡ ಪತ್ತೆಯಾಗಿದ್ದು ವಿಮಾನದ ಕೊನೆಯ ಕ್ಷಣಗಳ ಬಗ್ಗೆ ಅನುಮಾನಗಳು ಎದ್ದಿವೆ.

ಲೈಫ್ ಜಾಕೆಟ್ ಹಾಕಿರುವ ಶವ ಸಿಕ್ಕಿರುವದು ಸೂಚಿಸುವುದೇನೆಂದರೆ, ವಿಮಾನ ಸಮುದ್ರದಲ್ಲಿ ಮುಳುಗುವವರೆಗೂ ಸ್ಫೋಟಿಸಿಲ್ಲ. ಹೀಗಿದ್ದರೂ ಪೈಲಟ್ ಅಪಾಯದ ಸೂಚನೆಗಳನ್ನು ಏಕೆ ತಿಳಿಸಿಲ್ಲ ಎಂಬ ಪ್ರಶ್ನೆ ಎದ್ದಿದೆ. ವಿಮಾನಗಳ ದಟ್ಟನೆಯಿಂದ ಕೆಟ್ಟ ಹವಾಮಾನ ಇದ್ದರೂ ಎತ್ತರದ ಕಕ್ಷೆಯಲ್ಲಿ ಹಾರಲು ವಿಮಾನಕ್ಕೆ ಅನುಮತಿ ಸಿಕ್ಕಿರಲಿಲ್ಲ. ನಂತರ ಈ ವಿಮಾನ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು.

ಇಲ್ಲಿಯವರೆಗೂ ಯಾರೂ ಬದುಕುಳಿದವರು ಪತ್ತೆಯಾಗಿಲ್ಲ. ಅಲ್ಲದೆ ತೀವ್ರ ಹವಾಮಾನ ಪರಿಸ್ಥಿತಿ ಅವಶೇಷಗಳ ಪತ್ತೆಗೆ ಅಡ್ಡಿಯಾಗುತ್ತಿದೆ.

SCROLL FOR NEXT