ಪ್ರಧಾನ ಸುದ್ದಿ

ಮಂಗಳಯಾನಕ್ಕೆ 100 ದಿನ

Rashmi Kasaragodu

ಚೆನ್ನೈ: 2015 ಹೊಸವರ್ಷದ ಮೊದಲ ದಿನವಾದ ಇಂದು ಭಾರತ ಮಂಗಳನ ಕಕ್ಷೆಗೆ ಕಳುಹಿಸಿದ ಬಾಹ್ಯಾಕಾಶ ನೌಕೆ 100 ದಿನ ಪೂರೈಸಿದೆ. ಮಂಗಳಯಾನ ಎಂದು ಕರೆಯಲ್ಪಡುವ ಆರ್ಬಿಟರ್ ಸೆಪ್ಟೆಂಬರ್ 24, 2014ರಂದು ಯಶಸ್ವಿಯಾಗಿ ಮಂಗಳನ ಕಕ್ಷೆ ಸೇರಿತ್ತು.

ಮಂಗಳನ ಕಕ್ಷೆಯಲ್ಲಿರುವ ಆರ್ಬಿಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಸ್ರೋದ ವಕ್ತಾರರರು ಹೇಳಿದ್ದಾರೆ. 100 ದಿನಗಳನ್ನು ಪೂರೈಸಿರುವ ಮಂಗಳಯಾನ ಮಿಷನ್ ಯಶಸ್ವಿ ಮತ್ತು ಅದರ ನಿರ್ವಹಣೆಯ ಬಗ್ಗೆ ಇಂದು ಸೆಮಿನಾರ್ ಕೂಡಾ ನಡೆಯಲಿದೆ.

ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ಅವರು ಭಾರತದ ಮಾರ್ಸ್  ಆರ್ಬಿಟರ್  ಮಿಷನ್ (ಮಾಮ್) ಸ್ಮಾರ್ಟ್ ಸ್ಯಾಟಲೈಟ್‌ಗಳನ್ನು ಹೊಂದಿದ್ದು ಬಾಹ್ಯಾಕಾಶದಲ್ಲಿ ತನ್ನ ಕಾರ್ಯವನ್ನು ನಿಭಾಯಿಸುವುದರಲ್ಲಿ ಸಫಲವಾಗಿದೆ ಎಂದು ಹೇಳಿದ್ದಾರೆ.

SCROLL FOR NEXT