ಪ್ರಧಾನ ಸುದ್ದಿ

ನೈಜೀರಿಯಾ ಶಾಲೆಯಲ್ಲಿ ಬಾಂಬ್ ಸ್ಪೋಟ: ಕನಿಷ್ಠ ೪೮ ಮಕ್ಕಳ ಸಾವು

Guruprasad Narayana

ಪೋಟಿಸ್ಕಮ್: ನೈಜೀರಿಯಾದ ಶಾಲೆಯಲ್ಲಿ ಮಕ್ಕಳು ನೆರೆದಿದ್ದ ಸಭೆಯಲ್ಲಿ ಶಾಲೆಯ ಸಮವಸ್ತ್ರ ತೊಟ್ಟು ನಡೆಸಿದ ಆತ್ಮಹತ್ಯಾ ಬಾಂಬ್ ಸ್ಪೋಟದಲ್ಲಿ ಕನಿಷ್ಠ ೪೮ ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

೧೧ ವರ್ಷದ ಸಣ್ಣ ಮಕ್ಕಳೂ ಸೇರಿದಂತೆ ಸುಮಾರು ೨೦೦೦ ಮಕ್ಕಳು ನೆರೆದಿದ್ದ, ಪ್ರಾಂಶುಪಾಲರು ವಿಧ್ಯಾರ್ಥಿಗಳಿಗೆ ಭಾಷಣ ಮಾಡುವ ಸೋಮವಾರದ ಬೆಳಗಿನ ಸಭೆಯಲ್ಲಿ ಈ ದುರ್ಘಟನೆ ನಡೆದಿದ್ದು, ನೆರೆದಿದ್ದವರನ್ನು ಛಿದ್ರಗೊಳಿಸಿದೆ.

ನೈಜೀರಿಯಾದ ಪೋಟಿಸ್ಕಮ್ ನಗರದ ಸರ್ಕಾರಿ ತಾಂತ್ರಿಕ ವಿಜ್ಞಾನ ಕಾಲೇಜಿನಲ್ಲಿ ಈ ಘಟನೆ ನಡಿದಿದೆ. ಈ ಭಾಗದಲ್ಲಿ ಬೋಕೊ ಹರಾಮ್ ಎಂಬ ಇಸ್ಲಾಮಿಕ ಸ್ಂಘಟನೆಯಿಂದ ದಾಳಿಗಳು ನಡೆಯುತ್ತಲೇ ಇರುತ್ತವೆ. ಒಂದು ವಾರದ ಹಿಂದೆಯಷ್ಟೇ, ಮಧ್ಯಗಾಮಿ ಮುಸ್ಲಿಮರು ನಡೆಸುತ್ತಿದ್ದ ಧಾರ್ಮಿಕ ಮೆರವಣಿಗೆಯಲ್ಲಿ ಮಾನವ ಬಾಂಬ್ ಸ್ಫೋಟಗೊಂಡು ೩೦ ಜನ ಮೃತಪಟ್ಟಿದ್ದರು.

SCROLL FOR NEXT