ನರೇಂದ್ರ ಮೋದಿ 
ಪ್ರಧಾನ ಸುದ್ದಿ

ದೇಶ ಮುನ್ನಡೆಸುವುದು ಎಲ್ಲ ಸಂಸದರ ಜವಾಬ್ದಾರಿ: ಮೋದಿ

ಇಂದಿನಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ..

ನವದೆಹಲಿ: ಇಂದಿನಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ಮುನ್ನಡೆಸುವುದು ಎಲ್ಲ ಸಂಸದರ ಜವಾಬ್ದಾರಿ ಎಂದು ಹೇಳುವ ಮೂಲಕ, ಜವಾಬ್ದಾರಿಯಿಂದ ವರ್ತಿಸುವಂತೆ ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಸೂಚಿಸಿದ್ದಾರೆ.

ಚಳಿಗಾಲದ ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, 'ಸರ್ಕಾರ ನಡೆಸುವ ಜವಾಬ್ದಾರಿಯನ್ನು ಜನ ನಮಗೆ ನೀಡಿದ್ದಾರೆ. ಆದರೆ ದೇಶ ಮುನ್ನಡೆಸುವ ಜವಾಬ್ದಾರಿ ಎಲ್ಲ ಸಂಸದರ ಮೇಲಿದೆ' ಎಂದು ಹೇಳಿದ್ದಾರೆ.

'ಈ ತಂಪಾದ ವಾತಾವರಣದಲ್ಲಿ, ಕೂಲ್ ಆಗಿಯೇ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಅಧಿವೇಶನ ಸುಗಮವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ' ಎಂದು ಪ್ರಧಾನಿ ತಿಳಿಸಿದರು. ಅಲ್ಲದೆ ಪ್ರತಿಪಕ್ಷಗಳು ಸಹ ಉತ್ತಮ ಚರ್ಚೆಗೆ ಅವಕಾಶ ನೀಡಲಿವೆ ಎಂಬ ವಿಶ್ವಾಸವಿದೆ ಎಂದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೇ ಅಧಿವೇಶನ ಇದಾಗಿದ್ದು, ಚಳಿಗಾಲದ ಅಧಿವೇಶನವಾದರೂ ಸಂಸತ್‌ನಲ್ಲಿ ಬಿಸಿ ಬಿಸಿ ಚರ್ಚೆಗಳೇ ಹೆಚ್ಚು ನಡೆಯುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಸರ್ಕಾರ ಕೆಲವೊಂದು ಮಹತ್ವಾಕಾಂಕ್ಷಿ ಆರ್ಥಿಕ ಅಜೆಂಡಾಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಸರ್ಕಾರದ ವಿರುದ್ಧ ಮಹಾಸಮರಕ್ಕೆ INDIA ಮೈತ್ರಿಕೂಟ ಸಜ್ಜು: ಭಿನ್ನಾಭಿಪ್ರಾಯಗಳ ನಡುವೆಯೂ ಬಲ ತುಂಬುವ ಯತ್ನ, ‘ಒಗ್ಗಟ್ಟೇ ನಮ್ಮ ಶಕ್ತಿ’ ಎಂದ ಮಲ್ಲಿಕಾರ್ಜುನ ಖರ್ಗೆ..!

INDIA Bloc Meeting Underway: ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ನೆರವು- ಮಮತಾ ಬ್ಯಾನರ್ಜಿ ಆರೋಪ!

ಮುಂಬೈ: ಪೀಕ್ ಟ್ರಾಫಿಕ್ ಸಮಯದಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ BEST Bus: ಓರ್ವ ಸಾವು!| video

ಸಿದ್ದರಾಮಯ್ಯ ನಂತರ ಎರಡನೇ ಹಂತದ ಕುರುಬ ನಾಯಕರು ಯಾರು: ಸಮುದಾಯಕ್ಕೆ ಬೇಕಿಲ್ಲ ಬೈರತಿ ಸುರೇಶ್- ಯತೀಂದ್ರರಂತ 'ರತ್ನಗಂಬಳಿ' ಲೀಡರ್ಸ್?

ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: 19ಕ್ಕೂ ಹೆಚ್ಚು ಮಂದಿ ಸಾವು, ಇಂಡೋನೇಷ್ಯಾ ಸೇರಿ ಹಲವು ದೇಶಗಳಲ್ಲಿ ಸುನಾಮಿ ಎಚ್ಚರಿಕೆ

SCROLL FOR NEXT