ನವದೆಹಲಿ : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂದಿಸಿದಂತೆ ಸಿಬಿಐ ಬುಧವಾರ ಅಸ್ಸಾಂನ ಮಾಜಿ ಆರೋಗ್ಯ ಸಚಿವ ಹಿಮಾಂತಾ ಬಿಸ್ವಾ ಶರ್ಮಾರನ್ನು ವಿಚಾರಣೆಗೊಳಪಡಿಸಿದೆ.
ರಾಜೀವ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗುವಂತೆ ಸಿಬಿಐ ಶರ್ಮಾ ಅವರಿಗೆ ಸೂಚನೆ ನೀಡಿತ್ತು.
ಪ್ರಕರಣದ ವಿಚಾರಣೆ ವೇಳೆ ಶಾರದಾ ಗ್ರೂಪ್ ಮುಖ್ಯಸ್ಥ ಸುದೀಪ್ತಾ ಸೇನ್‌ರೊಂದಿಗೆ ಶರ್ಮಾ ಅವರ ಸಂಬಂಧ ಹೇಗಿತ್ತು ಎಂಬುದರ ಬಗ್ಗೆ ಸಿಬಿಐ ಪ್ರಶ್ನೆಗಳನ್ನು ಕೇಳಿದೆ.
ಅದೇ ವೇಳೆ ಅಸ್ಸಾಂನಲ್ಲಿ ಶಾರದಾ ಚಿಟ್ ಫಂಡ್‌ನ ನೆಟ್ವರ್ಕ್‌ನ್ನು ವಿಸ್ತರಿಸಲು ಅನುಮತಿ ನೀಡಿರುವ ಬಗ್ಗೆ ಮತ್ತು ಪ್ರಸ್ತುತ ಕಂಪನಿಯೊಂದಿಗಿನ ವ್ಯವಹಾರಗಳ ಬಗ್ಗೆ ತಮ್ಮ ಪಾತ್ರವೇನಿತ್ತು ಎಂದುದರ ಬಗ್ಗೆ ಸಿಬಿಐ ಶರ್ಮಾರಲ್ಲಿ ಕೇಳಿದೆ.
2001ರ ಅವಧಿಯಲ್ಲಿ ತರುಣ್ ಗಗೋಯಿ ಅವರ ಸಚಿವ ಸಂಪುಟದಲ್ಲಿ ಶರ್ಮಾ ಆರೋಗ್ಯ ಸಚಿವರಾಗಿದ್ದರು.