ಪ್ರಧಾನ ಸುದ್ದಿ

ಆಂಧ್ರ ಎನ್ಕೌಂಟರ್ ಶವಪರೀಕ್ಷೆ : ಮರ ಕಡಿಯುವವರಿಗೆ ಹತ್ತಿರದಿಂದ ಗುಂಡಿಕ್ಕಲಾಗಿದೆ

Guruprasad Narayana

ತಿರುಪತಿ: ತಮಿಳುನಾಡಿನ ಮರ ಕಡಿಯುವ ಜನರನ್ನು ಆತ್ಮ ರಕ್ಷಣೆಗಾಗಿ ಎನ್ಕೌಂಟರ್ ಮಾಡಲಾಗಿದೆ ಎಂಬ ಆಂಧ್ರ ಪ್ರದೇಶ ಪೊಲೀಸರ ಕಥೆಗೆ ಕೊಡಲಿ ಪೆಟ್ಟು ಬಿದ್ದಿದೆ. ಬುಧವಾರ ನಡೆದ ಶವಪರೀಕ್ಷೆಯಲ್ಲಿ ಎಲ್ಲ ಮೃತರನ್ನು ಬಹಳ ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಶ್ರೀ ವೆಂಕಟೇಶ್ವರ ರಾಮನಾರಾಯಣ್ ರುಯ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ತಜ್ಞರು ನಡೆಸಿದ ಶವಪರೀಕ್ಷೆಯಲ್ಲಿ, ಗುಂಡು ಅತಿ ಹತ್ತಿರದಿಂದ ದೇಹಕ್ಕೆ ಹೊಕ್ಕಿರುವುದರಿಂದ ಕೆಲವು ಅಂಗಾಂಗಗಳು ಛಿದ್ರವಾಗಿವೆ ಎಂದು ತಿಳಿಸಿದ್ದಾರೆ. ಶವಗಳನ್ನು ಆಸ್ಪತ್ರೆಗೆ ತರುವುದರಲ್ಲಿ ಕೊಳೆತಿದ್ದು, ಎನ್ಕೌಂಟರ್ ನಂತರ ಹಲವು ಘಂಟೆಗಳ ಕಾಲ ಬಿಸಿಲಿನಲ್ಲಿ ಇರಿಸಲಾಗಿದೆ ಎಂದಿದ್ದಾರೆ.

ಆದುದರಿಂದ ಶವಪರೀಕ್ಷೆ ವೇಳೆಯಲ್ಲಿ ತಜ್ಞರಿಗೆ ಹಲವು ತೊಂದರೆಗಳಾದವು ಎಂದು ತಿಳಿಸಿದ್ದಾರೆ. ಸಂತ್ರಸ್ತರ ಹಲವು ಪ್ರಮುಖ ಅಂಗಾಂಗಗಳು ಗುಂಡೇಟಿನಿಂದ ಛಿದ್ರವಾಗಿದ್ದವು. ಒಂದು ದೇಹಲಲ್ಲಿ ಎದೆಯಲ್ಲಿ ಎರಡು ಗುಂಡುಗಳು ಮತ್ತು ಬೆನ್ನಿನಲ್ಲಿ ನಾಲ್ಕು ಗುಂಡುಗಳು ಪತ್ತೆಯಾದವು ಎಂದು ತಿಳಿಸಿದ್ದಾರೆ.

"ಶವಪರೀಕ್ಷಾ ತಂಡ ಫಾರೆನ್ಸಿಕ್, ಪ್ಯಾಥಾಲಜಿ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗಗಳಿಂದ ಮೂರು ವೈದ್ಯರನ್ನು ಒಳಗೊಂಡಿದೆ" ಎಂದು ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಶವಗಳನ್ನು ಪರೀಕ್ಷಿಸಿದ ಮೇಲೆ ಅತಿ ಹತ್ತಿರದಿಂದ ಸಂತ್ರಸ್ತರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅವರು ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

SCROLL FOR NEXT