ಪ್ರಧಾನ ಸುದ್ದಿ

ವಲಸಿಗ ಪಂಡಿತರಿಗೆ ಪ್ರತ್ಯೇಕ ನಗರ ಇಲ್ಲ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಸಯ್ಯದ್

Guruprasad Narayana

ಜಮ್ಮು: ಕಾಶ್ಮೀರಿ ಕಣಿವೆಯಲ್ಲಿ ವಲಸಿಗ ಪಂಡಿತರಿಗಾಗಿ ಪ್ರತೇಕ ನಗರ ಸಮುಚ್ಚಯವನ್ನು ನಿರ್ಮಿಸಲು ಪ್ರಸ್ತಾವನೆಯಿದೆ ಎಂಬ ವದಂತಿಯನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅಲ್ಲಗೆಳೆದಿದ್ದಾರೆ.

ಈ ವಿಷಯದ ಬಗ್ಗೆ ರಾಜ್ಯ ವಿಧಾನಸಭೆಯಲ್ಲಿ ಗದ್ದಲ್ವೇಬ್ಬಿಸಿದ್ದ ಎನ್ ಸಿ ಮತ್ತು ಕಾಂಗ್ರೆಸ್ ಶಾಸಕರಿಗೆ ಉತ್ತರ ನೀಡುತ್ತಾ "ಪ್ರತ್ಯೇಕ ಸ್ಸಟಲ್ಲೈಟ್ ನಗರಗಳನ್ನು ವಲಸಿಗ ಪಂಡಿತರಿಗಾಗಿ ನಿರ್ಮಿಸುವ ಯಾವುದೇ ಪ್ರಸ್ತಾವನೆ ಇಲ್ಲ" ಎಂದು ಸಯ್ಯದ್ ಹೇಳಿದ್ದಾರೆ.

"ಅವರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ನೆರೆಹೊರೆಯ ಮುಸ್ಲಿಂ ಜನರೊಂದಿಗೆ ಹೊಂದಾಣಿಕೆಯಿಂದ ಬಾಳಬೇಕು.... ಪಂಡಿತರಿಗಾಗಿ ಪ್ರತ್ಯೇಕ ನಗರ ಸ್ಥಾಪನೆ ಎಂಬುದು ಗಾಳಿಸುದ್ದಿ" ಎಂದಿದ್ದಾರೆ,.

ಹಿಂದಿನ ಕಾಂಗ್ರೆಸ್-ಎನ್ ಸಿ ಸರ್ಕಾರದ ಸಮಯದಲ್ಲಿ "೫೦೦೦ ದಿಂದ ೮೦೦೦ ಕಾಶ್ಮೀರಿ ಪಂಡಿತರಿಗೆ ಕಣಿವೆಯ ಸೇವೆಯ ಷರತ್ತಿನೊಂದಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿತ್ತು. ಅವರು ತಾವು ಹಿಂದೆ ಬದುಕಿದ್ದ ಪ್ರದೇಶಗಳಿಗೆ ಹಿಂದಿರುಗುವುದೆ ಗೌರವಯುತವಾಗಿ ಬದುಕುವ ವಿಧಾನ" ಎಂದಿದ್ದಾರೆ ಸಯ್ಯದ್.

SCROLL FOR NEXT