ರಾಮಲಿಂಗರಾಜು 
ಪ್ರಧಾನ ಸುದ್ದಿ

ಸತ್ಯಂ ಹಗರಣ: ರಾಮಲಿಂಗರಾಜು ಸೇರಿ 10 ಮಂದಿಗೆ 7 ವರ್ಷ ಜೈಲು

ಬಹುಕೋಟಿ ಸತ್ಯಂ ಕಂಪ್ಯೂಟರ್ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿ ಹತ್ತು ಮಂದಿ ತಪ್ಪಿತಸ್ಥರಿಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷ...

ಹೈದರಾಬಾದ್: ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್(ಎಸ್ ಸಿಎಸ್ಎಲ್ )ಹಗರಣದ ಪ್ರಮುಖ ಅಪರಾಧಿ ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿ ಹತ್ತು ಮಂದಿ ತಪ್ಪಿತಸ್ಥರಿಗೆ ಸಿಬಿಐ ವಿಶೇಷ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಡಿ.23ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು  ತೀರ್ಪು ಪ್ರಕಟಿಸಿದ ನ್ಯಾಯಾಮೂರ್ತಿ ಬಿವಿಎಲ್‌‌‌‌ಎನ್‌‌ ಚಕ್ರವರ್ತಿ ಅವರು,  ಪ್ರಕರಣದ ಹತ್ತು ಆರೋಪಿಗಳು ತಪ್ಪಿತಸ್ಥರು ಎಂದು ಬೆಳಗ್ಗೆ ತೀರ್ಪು ನೀಡಿದ್ದರು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿದ್ದರು.

ಇಂದು ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾ. ಚಕ್ರವರ್ತಿ ಅವರು, ರಾಮಲಿಂಗರಾಜು ಮತ್ತು ಸಹೋದರ ರಾಮರಾಜುಗೆ 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5.5 ಕೋಟಿ ರುಪಾಯಿ ದಂಡ ವಿಧಿಸಿದೆ. ಇತರ 8 ಅಪರಾಧಿಗಳಿಗೆ 7 ವರ್ಷ ಜೈಲು ಹಾಗೂ ತಲಾ 25 ಲಕ್ಷ ರುಪಾಯಿ ದಂಡ ವಿಧಿಸಿದ್ದಾರೆ.

ರಾಷ್ಟ್ರದ ಅತಿದೊಡ್ಡ ಲೆಕ್ಕಾಚಾರ ವಂಚನೆ ಎಂದೇ ಪರಿಗಣಿಸಲಾಗಿರುವ ಈ ಹಗರಣ 2009ರ ಜನವರಿ 7ರಂದು ಬೆಳಕಿಗೆ ಬಂದಿತ್ತು. ಕಂಪೆನಿಯ ಸಂಸ್ಥಾಪಕ ಹಾಗೂ ಆಗಿನ ಅಧ್ಯಕ್ಷ ಬಿ. ರಾಮಲಿಂಗ ರಾಜು ಅವರು ಹಲವು ವರ್ಷಗಳಿಂದ ಕೋಟಿಗಟ್ಟಲೆ ರೂಪಾಯಿಗಳ ಲಾಭವನ್ನು ತೋರಿಸಿ ತಮ್ಮ ಕಂಪೆನಿಯ ಲೆಕ್ಕಪತ್ರಗಳನ್ನು ಕುಶಲತೆಯಿಂದ ನಿಭಾಯಿಸಲಾಗಿದೆ ಎಂದು ಒಪ್ಪಿಕೊಳ್ಳುವುದರೊಂದಿಗೆ ಈ ಹಗರಣ ಬಯಲಾಗಿತ್ತು.

ಸಿಬಿಐ ನ್ಯಾಯಾಲಯವು ಕಳೆದ ಆರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸುಮಾರು 3000 ಪುಟಕ್ಕೀ ಅಧಿಕ ದಾಖಲೆ ಪತ್ರಗಳು ಹಾಗೂ 226 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮುಖ್ಯಸ್ಥ ಬಿ. ರಾಮಲಿಂಗಾ ರಾಜು ಅವರನ್ನು ಬಂಧಿಸಲಾಗಿತ್ತು.

ಈ ಹಗರಣವನ್ನು ಲೆಕ್ಕ ವಿಭಾಗದಲ್ಲಿ ನಡೆದಿರುವ ದೇಶದ ಅತಿ ದೊಡ್ಡ ಹಗರಣ ಎಂದು ಹೇಳಲಾಗಿದ್ದು, ಇದು 2009ರಲ್ಲಿ ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!