ಪ್ರಧಾನ ಸುದ್ದಿ

ಭೂಷಣ್, ಯಾದವ್ ಭವಿಷ್ಯ ನಿರ್ಧರಿಸಲು ಸಭೆ ಸೇರಲಿರುವ ಎಎಪಿ

Guruprasad Narayana

ನವದೆಹಲಿ: ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಭವಿಷ್ಯ ನಿರ್ಧರಿಸಲು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಬುಧವಾರ ಸಭೆ ಸೇರುವ ಸಾಧ್ಯತೆ ಇದೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.

"ಭಿನ್ನಮತೀಯ ನಾಯಕರಾದ ಯೋಗೇಂದ್ರ ಯಾದವ್ ಮಾತು ಪ್ರಶಾಂತ್ ಭೂಷಣ್ ಅವರ ಭವಿಷ್ಯವನ್ನು ಈ ಸಭೆಯಲ್ಲಿ ನಿರ್ಧರಿಸಲಾಗುವುದು" ಎಂದು ಕೆಲವು ಕಾರ್ಯಕರ್ತರು ಹೇಳಿದ್ದಾರೆ.

ಈ ಇಬ್ಬರೂ ಭಿನ್ನಮತೀಯ ನಾಯಕರು ಇಂದು ೪ ಘಂಟೆಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೂಡ ತಿಳಿದುಬಂದಿದೆ.

"ಇಬ್ಬರೂ ಭಿನ್ನಮತೀಯರನ್ನು ಪಕ್ಷದಿಂದ ಉಚ್ಛಾಟಿಸುವ ಸಾಧ್ಯತೆ ಇದೆ" ಪಕ್ಷದ ಮೂಲಗಳು ತಿಳಿಸಿವೆ.

ನೆನ್ನೆ ಮಂಗಳವಾರ ಗುರಗಾಂವ್ ನಲ್ಲಿ ಯಾದವ್ ಮತ್ತು ಭೂಷಣ್ ರಾಜಕೀಯ ಬದಲಾವಣೆಯ ಕುರಿತು ಚರ್ಚಿಸಲು 'ಸ್ವರಾಜ್ ಸಂವಾದ' ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮವನ್ನು ಎಎಪಿ ಪಕ್ಷದ ಕೆಲವು ಭಿನ್ನಮತೀಯರು ತಪ್ಪಿಸಿಕೊಂಡಿದ್ದರು. ಅವರಲ್ಲಿ ಪ್ರಮುಖರ್ ಎಲ್ ರಾಮದಾಸ್, ಪಟಿಯಾಲದ ಲೋಕಸಭಾ ಸದಸ್ಯ ಧರ್ಮವೀರ ಗಾಂಧಿ, ಅರುಣಾ ರಾಯ್ ಮತ್ತು ಮೇಧಾ ಪಾಟ್ಕರ್ ಪ್ರಮುಖರು.

ಇದು ಆಮ್ ಆದ್ಮಿ ಪಕ್ಷವನ್ನು ಒಡೆಯಲು ಸಂಚು ನಡೆಸಿ ಮಾಡಿದ ಕಾರ್ಯಕ್ರಮ ಎಂದು ಅರವಿಂದ್ ಕೇಜ್ರಿವಾಲ್ ಆಪ್ತರು ಬಣ್ಣಿಸಿದ್ದಾರೆ.

SCROLL FOR NEXT