ಪ್ರಧಾನ ಸುದ್ದಿ

ಗುರುವಾಯೂರ್ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಶ್ರೀಲಂಕಾ ಪ್ರಧಾನಿ

Guruprasad Narayana

ಗುರುವಾಯೂರ್: ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇವಾಲಯದಲ್ಲಿ ಅತಿ ಹೆಚ್ಚಿನ ಭದ್ರತೆಯ ನಡುವೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಶನಿವಾರ ಪೂಜೆ ನೆರವೇರಿಸಿದ್ದಾರೆ.

ತಮ್ಮ ಪತ್ನಿ ಮೈತ್ರಿ ವಿಕ್ರಮಸಿಂಘೆ ಒಡಗೂಡಿ ಪ್ರಧಾನಿ ದೇವಸ್ಥಾನಕ್ಕೆ ಸುಮಾರು ೧೧:೪೫ಕ್ಕೆ ಬಂದರು. ಶ್ರೀಗಂಧದಿಂದ ತುಲಾಭಾರವನ್ನು ಕೂಡ ವಿಕ್ರಮಸಿಂಘೆ ನೆರವೇರಿಸಿದ್ದಾರೆ.

ಸುಮಾರು ೮.೪೫ಲಕ್ಷ ಬೆಲೆಬಾಳುವ ೭೭ ಕೆಜಿ ಶ್ರೀಗಂಧವನ್ನು ದೇವಾಲಯಕ್ಕೆ ಅರ್ಪಿಸಿದ್ದಾರೆ. ಗುರುವಾಯೂರ್ ಮಹಾ ಅರ್ಚಕ ಮೋರ್ಕನ್ನೂರು ಶ್ರೀ ಹರಿ ನಂಬೂದರಿ ಅವರು ಶ್ರೀಲಂಕಾ ಪ್ರಧಾನಿಗೆ ಪ್ರಸಾದಾ ನೀಡಿದರು. ಈ ಪೂಜೆಯಲ್ಲಿ ಲಂಕಾದ ಸಂಸ್ಕೃತಿ ಸಚಿವ ಸ್ವಾಮಿನಾಥನ್ ಕೂಡ ಭಾಗಿಯಾಗಿದ್ದರು.

ನಂತರ ವರದಿಗಾರರೊಂದಿಗೆ ಮಾತನಾಡಿದ ವಿಕ್ರಮಸಿಂಘೆ ದ್ವೀಪ ದೇಶ ಮತ್ತು ಭಾರತದ ನಡುವೆ ಸಾಂಸ್ಕೃತಿಕ ಬಾಂಧವ್ಯವನ್ನು ಬೆಳೆಸಲಾಗುವುದು ಎಂದಿದ್ದಾರೆ. ಅವರು ಚೈನಾ ಪರವೂ ಅಲ್ಲ ಭಾರತದ ಪರವೂ ಅಲ್ಲ, ಆದರೆ ಶ್ರೀಲಂಕಾದ ಹಿತಾಸಕ್ತಿಗಳನ್ನು ಕಾಯಲು ಆಯ್ಕೆಯಾಗಿರುವ ಪ್ರಧಾನಿ ಎಂದಿದ್ದಾರೆ.

SCROLL FOR NEXT