ಪ್ರಧಾನ ಸುದ್ದಿ

ಯೆಮೆನ್: ಕೊನೇ ಹಡಗು ವಾಪಸ್

ಕೊಚ್ಚಿ: ಸಂಘರ್ಷಪೀಡಿತ ಯಮೆನ್ ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಬಹುತೇಕ ಮುಗಿದಿದೆ. ಯೆಮೆನ್‍ನಿಂದ ರಕ್ಷಿಸಲ್ಪಟ್ಟ 475 ಮಂದಿಯಿದ್ದ ಭಾರತ ನೌಕಾ ಸೇನೆಯ ಎರಡು ನೌಕೆಗಳು ಶನಿವಾರ ಕೊಚ್ಚಿಗೆ ಬಂದಿಳಿದಿದೆ.

ಇದರಲ್ಲಿ 73 ಮಂದಿ ಭಾರತೀಯರಾಗಿದ್ದರೆ, ಉಳಿದವರು 337 ಮಂದಿ ಬಾಂಗ್ಲಾದೇಶಕ್ಕೆ ಸೇರಿದವರಾಗಿದ್ದಾರೆ. ಎಂ. ವಿ.ಕಾವರಟ್ಟಿ ಮತ್ತು ಎಂ.ವಿ. ಕೋರಲ್ಸ್ ಏ.12ರಂದು ಯೆಮೆನ್‍ನಿಂದ ಪ್ರಯಾಣ ಆರಂಭಿಸಿತ್ತು. ಕೊಚ್ಚಿಯಿಂದ ಸಂತ್ರಸ್ತರನ್ನು ರೈಲ್ವೆಯ ನೆರವಿನೊಂದಿಗೆ ಹುಟ್ಟೂರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿತ್ತು.

ಇದು ಭಾರತದ ಕೊನೆಯ ರಕ್ಷಣಾ ಕಾರ್ಯಾಚರಣೆಯಾಗಿದ್ದು ಗಲಭೆಪೀಡಿತ ಯೆಮೆನ್‍ನಿಂದ ಈವರೆಗೆ ಕೇಂದ್ರ ಸರ್ಕಾರ 5 ಸಾವಿರಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಿದೆ. ಯುದ್ಧಪೀಡಿತ ಯೆಮೆನ್‍ನಿಂದ ಸುರಕ್ಷಿತವಾಗಿ ಹಡಗಿನ ಮೂಲಕ ಕೊಚ್ಚಿಗೆ ಬಂದಿಳಿದ ಭಾರತೀಯರು.

SCROLL FOR NEXT