ಪ್ರಧಾನ ಸುದ್ದಿ

ಮಾದಕವಸ್ತುಗಳು ಮತ್ತು ಸ್ಯಾಟಲ್ಲೈಟ್ ಫೋನುಗಳಿದ್ದ ಪಾಕಿಸ್ತಾನಿ ಹಡಗು ಹಿಡಿದ ಭಾರತ

Guruprasad Narayana

ಗುಜರಾತಿನ ಸಮುದ್ರ ತೀರದಲ್ಲಿ ಪಾಕಿಸ್ತಾನಿ ಹಡಗೊಂದನ್ನು ಸಮುದ್ರ ತೀರ ಭದ್ರತಾ ಪಡೆ ಮತ್ತು ನೌಕಾ ದಳದ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ತಡೆಗಟ್ಟಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ. ಬೃಹತ್ ಮೊತ್ತದ ಮಾದಕ ವಸ್ತುಗಳು, ಸ್ಯಾಟಲ್ಲೈಟ್ ಫೋನುಗಳನ್ನು ಹಡಗಿನಿಂದ ವಶಪಡಿಸಿಕೊಂಡು, ಎಂಟು ಜನ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಪಶ್ಚಿಮ ನೌಕಾ ಪಡೆಯ ಮುಖ್ಯ ಕಚೇರಿ ಹಾಗು ಸಮುದ್ರ ತೀರ ರಕ್ಷಣಾ ಪಡೆ, ಬೇಹುಗಾರಿಕೆ ಮಾಹಿತಿಯ ಪ್ರಕಾರ ಏಪ್ರಿಲ್ ೧೮ರಂದು ಕಾರ್ಯಾಚರಣೆ ಪ್ರಾರಂಭಿಸಿತ್ತು. ನೌಕಾದಳ ಮತ್ತು ಸಮುದ್ರ ತೀರ ರಕ್ಷಣಾ ಪಡೆಯ ಹಲವು ಘಟಕಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ೬೦೦ ಕೋಟಿ ಬೆಲೆ ಬಾಳುವ ಹೆರಾಯಿನ್ ಎಂದು ನಂಬಲಾದ ೨೩೨ ಮಾದಕವಸ್ತುಗಳ ಪ್ಯಾಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ ಹಡಗನ್ನು ಪೋರಬಂದರಿಗೆ ತರಲಾಗಿದೆ.

SCROLL FOR NEXT