ಶ್ರೀನಗರ: ಉತ್ತರ ಕಾಶ್ಮೀರದ ಗಾಂಡೇರ್ಬಾಲ್ ನಲ್ಲಿ ಘಟಿಸಿದ ಸ್ಫೋಟದಲ್ಲಿ ಬುಧವಾರ ಒಬ್ಬ ಯುವಕ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.
"ಗಾಂಡೇರ್ಬಾಲ್ ಜಿಲ್ಲೆಯ ಬಾಬಾ ಸಲಿನಾ (ಮಾನಸ್ಬಾಲ್) ಗ್ರಾಮದಲ್ಲಿ ಮೂವರು ಯುವಕರು ಯಾವುದೋ ಸ್ಫೋಟಕ ವಸ್ತುವಿನ ಜೊತೆ ಆಡವಾಡುತ್ತಿದ್ದಾಗ ಅದು ಸಿಡಿದು ಸ್ಥಳದಲ್ಲೇ ಒಬ್ಬ ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ಗಾಯಗೊಂಡವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ, ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ" ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಿಂದ ಗಾಂಡೇರ್ಬಾಲ್ ೧೮ ಕಿಮೀ ದೂರದಲ್ಲಿದೆ.