ಮೊಹಮ್ಮದ್ ನಾವೇದ್ 
ಪ್ರಧಾನ ಸುದ್ದಿ

ಪಾಕ್‌ನಿಂದ ಮತ್ತೆ ಅದೇ ರಾಗ, ಸೆರೆ ಸಿಕ್ಕ ಉಗ್ರ ನಾವೇದ್ ನಮ್ಮವನಲ್ಲ

ನಿನ್ನೆ ಉಧಾಂಪುರ ದಾಳಿಯ ವೇಳೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿರುವ ಭಾರತ, ಉಗ್ರರ ಕೃತ್ಯಗಳ ಹಿಂದಿನ ಪಾಕಿಸ್ತಾನದ ಕೈವಾಡವನ್ನು...

ನವದೆಹಲಿ: ನಿನ್ನೆ ಉಧಾಂಪುರ ದಾಳಿಯ ವೇಳೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿರುವ ಭಾರತ, ಉಗ್ರರ ಕೃತ್ಯಗಳ ಹಿಂದಿನ ಪಾಕಿಸ್ತಾನದ ಕೈವಾಡವನ್ನು ಬಹಿರಂಗಪಡಿಸಲು ಮತ್ತೊಂದು ಪ್ರಬಲ ಸಾಕ್ಷ್ಯ ಲಭ್ಯವಾಗಿದೆ ಎಂದು ಭಾವಿಸಿದೆ. ಆದರೆ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದು, ಸೆರೆ ಸಿಕ್ಕ ಉಗ್ರ ಮೊಹಮ್ಮದ್ ನಾವೇದ್ ಅಲಿಯಾಸ್ ಉಸ್ಮಾನ್ ನಮ್ಮ ದೇಶದವನಲ್ಲ ಎಂದು ಗುರುವಾರ ಹೇಳಿದೆ.

ಮೊಹಮ್ಮದ್ ನಾವೇದ್ ಪಾಕಿಸ್ತಾನದ ಪ್ರಜೆ ಅಲ್ಲ. ನಮ್ಮ ದೇಶದ ನೋಂದಣಿ ವಿವರದಲ್ಲಿ ಆ ವ್ಯಕ್ತಿಯ ಚಹರೆಯವರು ಯಾರೂ ಇಲ್ಲ ಎಂದು ಪಾಕಿಸ್ತಾನದ ರಾಷ್ಟ್ರೀಯ ನೋಂದಣಿ ಸಂಸ್ಥೆ ಸ್ಪಷ್ಟಪಡಿಸಿದೆ ಎಂದು 'ದುನ್ಯಾ ನ್ಯೂಸ್‌' ವರದಿ ಮಾಡಿದೆ.

ಈ ಹಿಂದೆ 2008ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಕೂಡ ನಮ್ಮವನಲ್ಲ ಎಂದು ಪಾಕಿಸ್ತಾನ ವಾದಿಸಿತ್ತು. ಆದರೆ ಅಜ್ಮಲ್ ಕಸಬ್ ಪಾಕಿಸ್ತಾನ ಪ್ರಜೆ ಅಂತ ಅಲ್ಲಿನ ಮಾಧ್ಯಮಗಳೇ ಬಹಿರಂಗಪಡಿಸಿದ್ದವು. ಈಗ ಮತ್ತೆ ಅದೇ ರೀತಿ ನಾವೇದ್‌ನನ್ನು ಪಾಕಿಸ್ತಾನ ಅಲ್ಲಗಳೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ayodhya: ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: 8 ಆರೋಪಿಗಳ ವಿರುದ್ಧ FIR ದಾಖಲು!

Women T-20 World cup: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಗೆಲುವು!

ಸೇಡಿಗಾಗಿ ಖಾಸಗಿ ಪೋಟೋ, ವಿಡಿಯೋ ವೈರಲ್, ಬೆದರಿಕೆ ಪ್ರಕರಣ: ಕಡ್ಡಾಯವಾಗಿ FIR ದಾಖಲಿಸಬೇಕು, ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ!

Bidadi Township Project: ಸಿಎಂ ಡಿಕೆ ಶಿವಕುಮಾರ್‌ಗೆ 2ನೇ ಪತ್ರ ಬರೆದ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ!

ಗರಿಷ್ಠ ಅವಧಿ ಸಂಪೂರ್ಣ: KSCA ಕಾರ್ಯದರ್ಶಿ ಸಂತೋಷ್ ಮೆನನ್ ಅನರ್ಹ, BCCI ಒಂಬುಡ್ಸ್‌ಮನ್ ಆದೇಶ!