ಪ್ರಧಾನ ಸುದ್ದಿ

ನೂತನ ನಿಬಂಧನೆಗಳೊಂದಿಗೆ ಜಪಾನ್ ಅಣು ಸ್ಥಾವರ ಪುನರಾರಂಭ

Guruprasad Narayana

ಟೋಕಿಯೋ : ಫುಕುಶಿಮಾ ದುರಂತದ ನಂತರ ಈಗ ನೂತನ ಸುರಕ್ಷಿತ ನಿಬಂಧನೆಗಳೊಂದಿಗೆ ದಕ್ಷಿಣ ಜಪಾನಿನಲ್ಲಿ ಮೊದಲ ಬಾರಿಗೆ ಅಣು ಸ್ಥಾವರವನ್ನು ಪುನರಾರಂಭಿಸಲಿದೆ.

ಸೆಂಡೈ ಅಣು ಸ್ಥಾವರವನ್ನು ಮಂಗಳವಾರ ಪುನರಾರಂಭಿಸುವುದಾಗಿ ಕ್ಯೂಶು ಎಲೆಕ್ಟ್ರಿಕ್ ಪವರ್ ಸಂಸ್ಥೆ ಸೋಮವಾರ ತಿಳಿಸಿದೆ.

೨೦೧೧ ರಲ್ಲಿ ಭೂಕಂಪನ ಮತ್ತು ಸುನಾಮಿಯಿಂದ ಫುಕುಶಿಮಾ ದುರಂತವಾದ ನಂತರ ನಾಲ್ಕೂವರೆ ವರ್ಷಗಳ ಅವಧಿಯವರೆಗೆ ತನ್ನೆಲ್ಲಾ ಅಣು ಸ್ಥಾವರಗಳನ್ನು ಜಪಾನ್ ಸ್ಥಗಿತಗೊಳಿಸಿತ್ತು. ಜಪಾನಿನಲ್ಲಿ ಸುಮಾರು ೫೦ ಅಣು ಸ್ಥಾವರಗಳು ಸುರಕ್ಷಿತ ತಪಾಸಣೆಗಾಗಿ ನಿಲ್ಲಿಸಲಾಗಿದೆ.

ಸೆಂಡೈ ನಂ ೧ ಅಣು ಸ್ಥಾವರ ಶುಕ್ರವಾರದಿಂದ ವಿದ್ಯುಚ್ಚಕ್ತಿ ಉತ್ಪಾದನೆ ಪ್ರಾರಂಭಿಸಲಿದೆ.

SCROLL FOR NEXT