ಪ್ರಧಾನ ಸುದ್ದಿ

ಸ್ವಾತಂತ್ರ್ಯೋತ್ಸವ ದಿನದಂದು ಕಪ್ಪು ಬಾವುಟ ಹಾರಿಸಿದ ಮಾವೋವಾದಿಗಳು

Guruprasad Narayana

ಒರಿಸ್ಸಾ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒರಿಸಾದಲ್ಲಿ ನೀಡಿದ್ದ ಬಿಗಿ ಭದ್ರತೆಯ ನಡುವೆಯೂ ಎಡ ತೀವ್ರವಾದಿಗಳು, ಮಾಲ್ಕನಗಿರಿ ಜಿಲ್ಲೆಯಲಿ ಕನಿಷ್ಠ ಐದು ಕಡೆ ಕಪ್ಪು ಬಾವುಟ ಹಾರಿಸಿರುವುದು ತಿಳಿದುಬಂದಿದೆ. ಆದರೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ಸ್ವಾತಂತ್ರ್ಯ ದಿನಾಚರಣೆಯ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದ ಮಾವೋವಾದಿಗಳು ಮಥಿಲಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಲೂಲರ್ ನಲ್ಲಿ ಮತ್ತು ಒರಿಸ್ಸಾ-ಚತ್ತೀಸ್ ಘರ್ ಗಡಿಯ ಒಮರಪಾಲಿಯಲ್ಲಿ ಕಪ್ಪು ಬಾವುಟ ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವುಗಳಲ್ಲದೆ ಬೋದಿಗಾಟ, ಕೇಲ್ರಾಯಿ ಮತ್ತು ಎಂ ವಿ-೯೦ ಪ್ರದೇಶಗಳಲ್ಲೂ ಕಪ್ಪು ಬಾವುಟ ಮತ್ತು ಭಿತ್ತಿ ಪತ್ರಗಳು ಕಂಡುಬಂದಿವೆ.

ಕೇಂದ್ರ ಪಡೆಗಳು ಮಲ್ಕಾನಗಿರಿಯಿಂದ ಹಿಂದೆ ಸರಿಯಬೇಕು ಎಂದು ಹಾಗೂ ಪೋಲಿಸ್ ಕಾರ್ಯಾಚರಣೆಗಳನ್ನು ವಿರೋಧಿಸಿ ಭಿತ್ತಿಚಿತ್ರಗಳನ್ನು ಬರೆಯಲಾಗಿದೆ. ನಂತರ ಪೊಲೀಸರು ಈ ಭಿತ್ತಿಚಿತ್ರಗಳನ್ನು ತೆಗೆದುಹಾಕಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಆದರೆ ಮೋಟು, ಎಂ ವಿ ೭೯ ಮತ್ತು ಪಡಿಯಾ ಪ್ರದೇಶಗಲ್ಲಿ ಮಾವೋವಾದಿಗಳು ಸರ್ಕಾರಿ ಬಸ್ಸುಗಳಿಗೆ ತಡೆಹಾಕಿದ್ದಾರೆ ಎಂದು ತಿಳಿದುಬಂದಿದೆ.

ಒರಿಸ್ಸಾದ ಉಳಿದೆಡೆಗಳಲ್ಲಿ ಬಿಗಿ ಭದ್ರತೆಯ ನಡುವೆ ಸಂಭ್ರಮಾಚರಣೆಗಳಿಂದ ಶಾಂತಿಯುತವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದೆ.

SCROLL FOR NEXT