ಪ್ರಧಾನ ಸುದ್ದಿ

ಉಗ್ರರಿಂದ ದೂರ ಇರಿ, ಇಲ್ಲವೇ ಸಾಯಲು ಸಿದ್ಧರಾಗಿ: ಭದ್ರತಾ ಪಡೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಬೆದರಿಕೆ

Srinivas Rao BV

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 19 ವರ್ಷದ ಉಗ್ರ ಬರ್ಹನ್ ಮುಜಾಫರ್, ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಬಹಿರಂಗವಾಗಿದೆ.

ಕೆಲ ವಾರಗಳ ಹಿಂದಷ್ಟೇ ಈ ಉಗ್ರ ತರಬೇತಿ ಪಡೆಯುತ್ತಿದ್ದ  ವಿಡಿಯೋ ನ್ನು ಬಿಡುಗಡೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಉಗ್ರ ಬರ್ಹನ್ ಮುಜಾಫರ್ ಭದ್ರತಾ ಪಡೆಗಳಿಗೆ ಬೆದರಿಕೆ ಹಾಕಿರುವ 6 ನಿಮಿಷಗಳ ವಿಡಿಯೋ ಬಹಿರಂಗವಾಗಿದೆ.  ಬೆದರಿಕೆ ಹಾಕಿರುವ ಉಗ್ರ ದಕ್ಷಿಣ ಕಾಶ್ಮೀರದ ಮೂಲದವನಾಗಿದ್ದು, ಉಗ್ರರಿಂದ ದೂರ ಇರಬೇಕು ಇಲ್ಲವೇ ಸಾವನ್ನಪ್ಪಲು ಸಿದ್ಧವಿರಬೇಕು ಎಂದು ಎಚ್ಚರಿಕೆ ನೀಡಿದ್ದಾನೆ.

ದಕ್ಷಿಣ ಕಾಶ್ಮೀರದಲ್ಲಿ ಉಳಿದ 10 ಉಗ್ರಗಾಮಿಗಳೊಂದಿಗೆ ಓಡಾಡುತ್ತಿದ್ದ ಈತನ ವಿಡಿಯೋ ಬಿಡುಗಡೆಯಾಗಿತ್ತು.

SCROLL FOR NEXT