ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಭೋಪಾಲ್ ಅನಿಲ ದುರಂತ: ಇಂದಿಗೂ ದುಷ್ಪರಿಣಾಮ ಎದುರಿಸುತ್ತಿರುವ ಮಕ್ಕಳು

೧೯೮೪ರ ಭೋಪಾಲ್ ಅನಿಲ ದುರಂತಕ್ಕೆ ಒಡ್ಡಿಕೊಂಡಿರುವ ಪೋಷಕರಿಗಿ ಜನಿಸುವ ೧೦೦೦೦ ಮಕ್ಕಳಲ್ಲಿ ೨೫೦೦ ಮಕ್ಕಳು ಇನ್ನು ಅದರ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ

ಭೋಪಾಲ್: ೧೯೮೪ರ ಭೋಪಾಲ್ ಅನಿಲ ದುರಂತಕ್ಕೆ ಒಡ್ಡಿಕೊಂಡಿರುವ ಪೋಷಕರಿಗಿ ಜನಿಸುವ ೧೦೦೦೦ ಮಕ್ಕಳಲ್ಲಿ ೨೫೦೦ ಮಕ್ಕಳು ಇನ್ನು ಅದರ ಅಡ್ಡಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ಭೋಪಾಲ್ ಅನಿಅಲ ದುರಂತದ ೩೧ನೆ ವಾರ್ಷಿಕ ದಿನವಾದ ಇಂದು ಕೆಲವು ತಜ್ಞರು ವಿವರಿಸುತ್ತಾರೆ.

ಭೋಪಾಲ್ ಅನಿಲ ದುರಂತದಲ್ಲಿ ಉಳಿದವರ ರಕ್ಷಣೆ ಮಾಡುತ್ತಿರುವ ಎನ್ ಜಿ ಒ ಒಂದರ ತಜ್ಞರು ತಿಳಿಸುವಂತೆ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ವಿಷಾಲನಿಗಳಿಗೆ ಒಡ್ಡಿಕೊಂಡಿರುವ ಪೋಷಕರಿಗೆ ಜನಿಸುವ ಮಕ್ಕಳು ಇನ್ನೂ ಅದರ ಅಡ್ಡಪರಿಣಾಮಗಳಿಗೆ ಬಲಿಯಾಗಿ ವಿಕಲಾಂಗತೆಯ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

೨೦೦೦೦ ಕುಟುಂಬಗಳ ೧೦೦೦೦ ಜನಗಳ ಅಧ್ಯಯನ ನಡೆಸಿರುವ ಎನ್ ಜಿ ಒ ಸಧ್ಬಾವನಾ ಟ್ರಸ್ಟ್ ಇಂತಹ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡುವಂತೆ ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳನ್ನು ಆಗ್ರಹಿಸಿದೆ.

"ಇಂತಹ ಅಡ್ಡಪರಿಣಾಮಗಳಿಗೆ ತುತ್ತಾಗಿರುವ ಮಕ್ಕಳನ್ನು ಗುರುತಿಸಿ ಅಗತ್ಯವಾದ ಚಿಕಿತ್ಸೆ ನೀಡುವಂತೆ ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳಿಗೆ ಕೋರುತ್ತೇವೆ" ಎಂದು ಸಧ್ಭಾವನಾದ ಟ್ರಸ್ಟಿ ಸತಿನಾಥ್ ಸಾರಂಗಿ ತಿಳಿಸಿದ್ದಾರೆ.

೧೯೮೪ ಡಿಸೆಂಬರ್ ೨ ಮತ್ತು ೩ರಂದು ಸಂಭವಿಸಿದ ಈ ದುರ್ಘಟನೆಯಲ್ಲಿ ೩೦೦೦ ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT