ಪ್ರಧಾನ ಸುದ್ದಿ

ಕರಾಳ ದಿನ; ಸರ್ಕಾರ ಮತ್ತು ರಾಜ್ಯಸಭೆ ಭಾರತೀಯ ಮಹಿಳೆಯರನ್ನು ಸೋಲಿಸಿತು: ಡಿ ಸಿ ಡಬ್ಲ್ಯು

Guruprasad Narayana

ನವದೆಹಲಿ: ಡಿಸೆಂಬರ್ ೧೬ ೨೦೧೨ರ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣದ ಬಾಲಾಪರಾಧಿಯನ್ನು ಬಿಡುಗಡೆ ಮಾಡದಂತೆ ಸಲ್ಲಿಸಿದ್ದ ದೆಹಲಿ ಮಹಿಳಾ ಆಯೋಗ (ಡಿ ಸಿ ಡಬ್ಲ್ಯು)ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ವಜಾಗೊಳಿಸಿದ ಹಿನ್ನಲೆಯಲ್ಲಿ ಇಂದು ದೇಶದ ಕರಾಳ ದಿನ ಎಂದು ಡಿ ಸಿ ಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದ್ದಾರೆ. ಬಾಲಾಪರಾಧಿ ನ್ಯಾಯ ಮಸೂದೆ ರಾಜ್ಯಸಭೆಯಲ್ಲಿ ಮಂಜೂರಾಗದೆ ಉಳಿದಿದ್ದಕ್ಕೆ ರಾಜ್ಯ ಸಭೆಯನ್ನು ದೂರಿದ್ದಾರೆ.

"ಇಂದು ದೇಶಕ್ಕೆ ಕರಾಳ ದಿನ. ಈ ಬಾಲಾಪರಾಧಿಯ ಬಿಡುಗಡೆಗೆ ರಾಜ್ಯಸಭೆಯೇ ಕಾರಣ. ಅವರಿಂದಲೇ ಬಾಲಾಪರಾಧಿ ನ್ಯಾಯ ಮಸೂದೆ ಪಾಸಾಗದೆ ಉಳಿದಿಸೆ. ಸದ್ಯಕ್ಕಿರುವ ಕಾಯ್ದೆಯಲ್ಲಿ ಬೇರೆ ಅವಕಾಶ ಇಲ್ಲ ಎಂದು ನ್ಯಾಯಧೀಶರು ತಮ್ಮ ಕಾಳಜಿ ವ್ಯಕ್ತಪಡಿಸಿದರು" ಎಂದು ಮಲಿವಾಲ್ ಮಾಧ್ಯಮಗಳಿಗೆ ಹೇಳಿದ್ದಾರೆ,

"ಸರ್ಕಾರ ದೇಶದ ಮಹಿಳೆಯರನ್ನು ಸೋಲಿಸಿದೆ" ಎಂದು ಕೂಡ ಅವರು ಹೇಳಿದ್ದಾರೆ.

ಈ ಪರಕರಣದ ಬಾಲಾಪರಾಧಿಯನ್ನು  ಶನಿವಾರ ಬಿಡುಗಡೆಮಾಡಲಾಗಿದ್ದು, ಯಾರಿಗೂ ತಿಳಿಯದ ಜಾಗಕ್ಕೆ ಕಳುಹಿಸಲಾಗಿದೆ. ಅನಧಿಕೃತ ಮಾಹಿತಿಗಳ ಪ್ರಕಾರ ಯಾರಿಗೂ ತಿಳಿಯದ ಪ್ರದೇಶವೊಂದರಲ್ಲಿ ಎನ್ ಜಿ ಒ ಒಂದರ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

SCROLL FOR NEXT