ಐ ಎನ್ ಎಸ್ ಕೊಲ್ಕತ್ತದಿಂದ ಯಶಸ್ವಿ ಬರಾಕ್-೮ ಕ್ಷಿಪಣಿಯ ಪರೀಕ್ಷೆ 
ಪ್ರಧಾನ ಸುದ್ದಿ

ಬರಾಕ್-೮ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

ವಾಯು ಭದ್ರತೆಯಲ್ಲಿ ಭಾರಿ ಮುನ್ನಡೆ ಎನ್ನಲಾಗಿರುವ ಸಾಧನೆಯನ್ನು ಇಂದು ಭಾರತೀಯ ನೌಕಾದಳ ಭಾರಿ ದೂರ ನೆಲದಿಂದ ಆಕಾಶಕ್ಕೆ ಜಿಗಿಯಬಲ್ಲ ಬರಾಕ್-೮ ಕ್ಷಿಪಣಿಯನ್ನು

ಮುಂಬೈ: ವಾಯು ಭದ್ರತೆಯಲ್ಲಿ ಭಾರಿ ಮುನ್ನಡೆ ಎನ್ನಲಾಗಿರುವ ಸಾಧನೆಯನ್ನು ಇಂದು ಭಾರತೀಯ ನೌಕಾದಳ ಭಾರಿ ದೂರ ನೆಲದಿಂದ ಆಕಾಶಕ್ಕೆ ಜಿಗಿಯಬಲ್ಲ ಬರಾಕ್-೮ ಕ್ಷಿಪಣಿಯನ್ನು ಐ ಎನ್ ಎಸ್ ಕೊಲ್ಕತ್ತದಿಂದ ಯಶಸ್ವಿ ಪರೀಕ್ಷೆ ನಡೆಸುವ ಮೂಲಕ ಭಾರತ ಸಾಧಿಸಿದೆ.

ಅರಬ್ಬೀ ಸಮುದ್ರದಲ್ಲಿ ನಡೆದ ಈ ಪರೀಕ್ಷೆಯಲ್ಲಿ ನೆನ್ನೆ ಮತ್ತು ಇಂದು ಎರಡು ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಭಾರತೀಯ ನೌಕಾದಳ ಹಾರಿಸಿದೆ ಎಂದು ಭದ್ರತಾ ವಕ್ತಾರ ತಿಳಿಸಿದ್ದಾರೆ.

ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಬರಾಕ್-೮ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿವೆ. ಇದಕ್ಕೂ ಮೊದಲು ಇಸ್ರೇಲಿ ನೌಕೆಗಳಿಂದ ಪರೀಕ್ಷೆ ನಡೆಸಲಾಗಿತ್ತಾದರೂ ಭಾರತೀಯ ನೌಕೆಯಿಂದ ಇದೇ ಮೊದಲ ಬಾರಿಗೆ ಪರೀಕ್ಷೆ ನಡೆಸಲಾಗಿದೆ.

ಆಕಾಶ ಮಾರ್ಗವಾಗಿ ವಿಮಾನ, ಡ್ರೋನ್, ಹೆಲಿಕ್ಯಾಪ್ಟರ್ ಗಳಿಂದ ಉಂಟಾಗಬಹುದಾದ ದಾಳಿಗಳನ್ನು ತಡೆಯಲು ಬರಾಕ್-೮ ನಿರ್ಮಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

SCROLL FOR NEXT