ಪ್ರಧಾನ ಸುದ್ದಿ

ಮುಸ್ಲಿಂ ನಾಯಕರನ್ನು ಭೇಟಿ ಮಾಡಿದ ಒಬಾಮ, ಭಯೋತ್ಪಾದನೆಯ ಸವಾಲುಗಳ ಚರ್ಚೆ

Guruprasad Narayana

ವಾಶಿಂಗ್ಟನ್: ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ಮುಸ್ಲಿಂ ನಾಯಕರನ್ನು ಭೇಟಿ ಮಾಡಿ, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಮತ್ತು ಅದರ ಭಯೋತ್ಪಾದಕ ಚಟುವಟಿಗೆಗಳ ನಿಗ್ರಹವವೂ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ.

"ಇಸ್ಲಾಂ ಹೆಸರಿನಲ್ಲಿ ಇಸ್ಲಾಮಿಕ್ ಸ್ಟೇಟ್ ಎಂಬ ಸಂಘಟನೆ ನಡೆಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹಕ್ಕೆ ಹಾಕಿಕೊಂಡ ಅಮೇರಿಕಾ ಯೋಜನೆಯನ್ನು ಚರ್ಚಿಸಲಾಯಿತು" ಎಂದು ವೈಟ್ ಹೌಸ್ ತಿಳಿಸಿದೆ.

ಅಮೇರಿಕಾ ದೇಶಕ್ಕೆ ಮುಸ್ಲಿಂ ಅಮೇರಿಕನ್ಸ್ ನೀಡಿರುವ ಕೊಡುಗೆಯನ್ನು ಮೆಚ್ಚಿಕೊಂಡ ಒಬಾಮಾ ತಮ್ಮ ಸಮುದಾಯದ ಜೊತೆ ನಾಗರಿಕ ಸಂಪರ್ಕದಲ್ಲಿರುವಂತೆ ಆಶಿಸಿದ್ದಾರೆ. ಅಲ್ಲದೆ ಇಂತಹ ಚರ್ಚೆಗಳನ್ನು ಮುಂದುವರೆಸಲು ಇಂತಹ ಹೆಚ್ಚಿನ ಭೇಟಿಗಳನ್ನು ಅಪೇಕ್ಷಿಸುತ್ತೇನೆ ಎಂದಿದ್ದಾರೆ.

ವಿವಿಧ ಸಮುದಾಯಗಳ ಜೊತೆ ಒಬಾಮಾ ಅವರ ನಿರಂತರ ಸಂವಾದಗಳಿಂದ ಅತ್ಯಮೂಲ್ಯ ಒಳನೋಟಗಳು ಮತ್ತು ಪ್ರತಿಕ್ರಿಯೆಗಳು ದೊರೆಯುತ್ತವೆ ಎಂದಿದೆ ವೈಟ್ ಹೌಸ್.

SCROLL FOR NEXT