ಪ್ರಧಾನ ಸುದ್ದಿ

ಮುಸ್ಲಿಮರು ವಿಶಾಲ ಮನೋಭಾವ ಹೊಂದಬೇಕು: ಶಿಯಾ ಧರ್ಮಗುರು

Guruprasad Narayana

ಮುಜ್ಜಫರನಗರ: ಹೆಚ್ಚೆಚ್ಚು ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮುಸ್ಲಿಮರು ತಮ್ಮ ಮನಸ್ಸನ್ನು  ವಿಶಾಲಗೊಳಿಸಿಕೊಳ್ಳಬೇಕು ಎಂದು ಶಿಯಾ ಮುಸ್ಲಿಂ ಧರ್ಮಗುರು ಮೌಲಾನ ಕಾಲ್ಬೆ ಸಾಧಿಕ್ ಹೇಳಿದ್ದಾರೆ.

ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯ ಉಪಾಧ್ಯಕ್ಷರಾಗಿರುವ ಸಾಧಿಕ್ ಮುಸ್ಲಿಮರು ಹೆಚ್ಚೆಚ್ಚು ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವತ್ತ ಗಮನಹರಿಸಿ ಉತ್ತಮ ಮಟ್ಟದ ಶಿಕ್ಷಣ ಕೊಡುವ ಬಗ್ಗೆ ಚಿಂತಿಸಬೇಕು ಈ ರೀತಿ ತಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು ಎಂದಿದ್ದಾರೆ.

ಮೋರ್ನಾ ಪಟ್ಟಣದಲ್ಲಿ ನೆನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇಸ್ಲಾಂ ನಲ್ಲಿ ಮನುಷ್ಯರ ಮೇಲೆ ಯಾವುದೆ ಹಿಂಸೆಗೆ ಮತ್ತು ದೌರ್ಜನ್ಯಕ್ಕೆ ಜಾಗವಿಲ್ಲ ಎಂದಿದ್ದಾರೆ.

ಬೇರೆಯವರ ತೊಂದರೆಗಳಿಗೆ ಸಹಾಯ ಮಾಡುವುದು ಮನುಷ್ಯನ ಕರ್ತವ್ಯ ಎಂದಿದ್ದಾರೆ.

SCROLL FOR NEXT