ಪ್ರಧಾನ ಸುದ್ದಿ

ನದಿ ಜೋಡಣೆ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿರುವ ಉಮಾ ಭಾರತಿ

Guruprasad Narayana

ನವದೆಹಲಿ: ಹಿಂದಿನ ಎನ್ ಡಿ ಎ ಸರ್ಕಾರದ ನದಿಗಳ ಜೋಡಣೆ ಯೋಜನೆಯನ್ನು ಮುಂದುವರೆಸಲು ನೀರು ಸಂಪನ್ಮೂಲಗಳ ಸಚಿವೆ ಉಮಾಭಾರತಿ ಏಳು ಈಶಾನ್ಯ ರಾಜ್ಯಗಳು, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.

ಈಶಾನ್ಯ ರಾಜ್ಯಗಳ ಪ್ರವಾಸ ಮಾಡುತ್ತಿರುವ ಸಚಿವೆ ಉಮಾ ಭಾರತಿ ಈಗಾಗಲೇ ಸಿಕ್ಕಿಂ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗಾಯ್ ಮತ್ತು ಅರುಣಾಚಲ್ ಪ್ರದೇಶದ ಮುಖ್ಯಮಂತ್ರಿ ನಬಂ ತೂಕಿ ಅವರನ್ನು ಈಗಾಗಲೇ ಭೇಟಿ ಮಾಡಿದ್ದಾರೆ.

ಈಶಾನ್ಯ ರಾಜ್ಯಗಳ ನದಿಗಳ ನೀರನ್ನು ಕೇಂದ್ರ ಸರ್ಕಾರ ಇತರ ರಾಜ್ಯಗಳಿಗೆ ಹರಿಸುವ ಯೋಜನೆ ಹೊಂದಿದೆ ಎಂದು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಇದಕ್ಕಾಗಿ ನದಿಗಳ ಅಧ್ಯಯನ ನಡೆಯುತ್ತಿದೆ. ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳು ಅಡೆತಡೆಯಾಗಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

SCROLL FOR NEXT