ಪ್ರಧಾನ ಸುದ್ದಿ

ಆರ್ ಎಸ್ ಎಸ್ ಗೆ ಕಿರಿಕಿರಿ ತಂದ ಮುಸ್ಲಿಂ ಧರ್ಮಗುರುಗಳ ೬ ಪ್ರಶ್ನೆಗಳು

Guruprasad Narayana

ಕಾನ್ಪುರ: ಸುನ್ನಿ ಉಲೇಮಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ ಮುಸ್ಲಿಂ ಧರ್ಮಗುರುಗಳ ತಂಡವೊಂದು ಆರ್ ಎಸ್ ಎಸ್ ಸದಸ್ಯ ಇಂದ್ರೇಶ್ ಅವರನ್ನು ಭೇಟಿ ಮಾಡಿ ಆರು ಪ್ರಶ್ನೆಗಳನ್ನು ಒಡ್ಡಿದೆ. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸುವ ಇರಾದೆಯನ್ನು ಸಂಘ ಒಳಗೊಂಡಿದೆಯೆ ಎಂಬ ಪ್ರಶ್ನೆಯನ್ನು ಒಳಗೊಂಡಂತಹ ಆರು ಪ್ರಶ್ನೆಗಳು ಆರ್ ಎಸ್ ಎಸ್ ಸಂಘಟನೆಗೆ ಕಿರಿಕಿರಿಯನ್ನುಂಟು ಮಾಡಿದೆ ಎಂದು ತಿಳಿದುಬಂದಿದೆ.

ಈ ಪ್ರಶ್ನೆಗಳಿಗೆ ಇಂದ್ರೇಶ್  ಅವರು ಉತ್ತರಿಸಲು ನಿರಾಕರಿಸಿದರು ಎಂದಿರುವ ಮುಸ್ಲಿಮ್ ಧರ್ಮಗುರುಗಳ ತಂಡ, ಈ ಪ್ರಶ್ನೆಗಳಿಗೆ ಉತ್ತರಿಸುವಾಗ ಮುಸ್ಲಿಂ ಸಂಘಟನೆಗಳ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದಿದ್ದಾರೆ.

ಪ್ರಶ್ನೆಗಳು ಇಂತಿವೆ.

೧. ಭಾರತವನ್ನು ಹಿಂದೂ ರಾಷ್ಟ್ರ ಎಂದು ಆರ್ ಎಸ್ ಎಸ್ ಪರಿಗಣಿಸಿದೆಯೆ?
೨. ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಪರಿವರ್ತಿಸಲು ಆರ್ ಎಸ್ ಎಸ್ ಯೋಜನೆ ಹೊಂದಿದೆಯೆ?
೩. ಈ ಹಿಂದು ರಾಷ್ಟ್ರ ಎಂಬುದು ಹಿಂದು ಧ್ರಮಗ್ರಂಥಗಳ ಆಧಾರಿತವೋ? ಅಥವಾ ಆರ್ ಎಸ್ ಎಸ್ ಇದಕ್ಕೆ ಹೊಸ ತತ್ತ್ವವನ್ನು ನೀಡಿದೆಯೋ?
೪. ಧರ್ಮ ಮತಾಂತರದಿಂದ ಆರ್ ಎಸ್ ಎಸ್ ಅವರಿಗೆ ಬೇಕಾಗಿರುವುದೇನು?
೫. ಮುಸ್ಲಿಮರಿಂದ ಯಾವರ ರೀತಿಯ ರಾಷ್ಟ್ರ ಪ್ರೇಮ ಆರ್ ಎಸ್ ಎಸ್ ಬಯಸುತ್ತದೆ?
೬. ಇಸ್ಲಾಂ ಅನ್ನು ಆರ್ ಎಸ್ ಎಸ್ ಹೇಗೆ ಗ್ರಹಿಸುತ್ತದೆ?

SCROLL FOR NEXT